Home » Know Your Death Date: ನಿಮ್ಮ ಸಾವಿನ ದಿನಾಂಕವನ್ನು ಖಡಕ್ ಆಗಿ ಹೇಳುವ ವೆಬ್ ಸೈಟ್ ಒಂದಿದೆ; ಕನ್ಫರ್ಮ್ ಮಾಡ್ಕೊಳ್ಳಿ ನಿಮ್ಮ ಟಿಕೆಟ್ !!

Know Your Death Date: ನಿಮ್ಮ ಸಾವಿನ ದಿನಾಂಕವನ್ನು ಖಡಕ್ ಆಗಿ ಹೇಳುವ ವೆಬ್ ಸೈಟ್ ಒಂದಿದೆ; ಕನ್ಫರ್ಮ್ ಮಾಡ್ಕೊಳ್ಳಿ ನಿಮ್ಮ ಟಿಕೆಟ್ !!

by ಹೊಸಕನ್ನಡ
1 comment

Know Your Death Date: www.death-clock.org ಎಂದು ಒಂದು ವೆಬ್ ಸೈಟ್ ಇದೆ. ಈ ವೆಬ್ ಸೈಟು ನಿಮಗೆ ನಿಮ್ಮ ಸಾಯುವ ದಿನಾಂಕವನ್ನು(Know Your Death Date) ಲೆಕ್ಕ ಹಾಕಿ ಕೊಡುತ್ತದೆ. ಅಲ್ಲಿ ಹೋಗಿ ಫಾರಂ ಫಿಲ್ ಮಾಡಿ ಕ್ಯಾಲ್ಕುಲೇಟ್ ಅಂತ ಕೊಟ್ಟರೆ ಸಾಕು. ನಿಮ್ಮ ಕಣ್ಣ ಮುಂದೇ ಸಾವು ಬಂದು ಕುಣಿಯಲು ಆರಂಭಿಸುತ್ತದೆ. ಈ ವೆಬ್ ಸೈಟ್ ನಿಮ್ಮ ಸಾಯುವ ದಿನಾಂಕವನ್ನು ತುಂಬಾ ಪ್ರೀತಿಯಿಂದ, ಇನ್ನಿಲ್ಲದ ಕಾಳಜಿಯಿಂದ ಕ್ಯಾಲ್ಕುಲೇಟ್ ಮಾಡಿ ನಿಮ್ಮ ಮುಂದಿಡುತ್ತದೆ. ಆಮೇಲೆ ನೀವುಂಟು, ನಿಮ್ಮಲ್ಲಿ ಮೂಡುವ ಸಾವಿನ ಭಯ ಉಂಟು!

ಗಡಿಯಾರದ ಮುಳ್ಳಿನ ಟಿಕ್ ಟಿಕ್ ಟಿಕ್ ಸದ್ದು ನಿಮ್ಮ ಮರಣದ ಕ್ಷಣಗಣನೆ ಮಾಡುತ್ತವೆ. ಧೈರ್ಯ ಅಳಿದುಳಿದು ನಿಮ್ಮಲ್ಲಿ ಇದ್ದರೆ ಒಮ್ಮೆ ವೆಬ್ಸೈಟ್ ಗೆ ಲಾಗಿನ್ ಮಾಡಿ.

ಈ ವೆಬ್ ಸೈಟ್ ಒಳಗೊಂದು ಹೆಲ್ಪ್ ಸೆಂಟರಿದೆ. ಅಲ್ಲಿರುವ FAQ ನ ಪ್ರಶ್ನೋತ್ತರ ಓದಬೇಕು ನೀವು. ಸೊ ಕ್ರೇಜಿ.!! ಒಂದು ವೇಳೆ ವೆಬ್ ಸೈಟ್ ಹೇಳಿದ ಪ್ರಕಾರ, ಹೇಳಿದ ದಿನಾಂಕದ ಒಳಗೆ ಸಾಯದೆ ಉಳಿದರೆ ಅಂತ ಒಬ್ಬಾತ ಕೇಳುತ್ತಾನೆ. “ನಾನಿನ್ನೂ ಸತ್ತಿಲ್ಲ ಯಾಕೆ?” ಅದಕ್ಕೆ ಉತ್ತರ ವೆಬ್ ಸೈಟ್ ಉತ್ತರಿಸುತ್ತದೆ : “ಬಹುಶ ಸಾವು ಜಾಸ್ತಿ ಹೊತ್ತು ಮಲಗಿ ನಿದ್ರಿಸುತ್ತಿದ್ದಿರಬೇಕು. ಡೋಂಟ್ ವರಿ. ಹೆದರಿಕೊಳ್ಳಬೇಡಿ. ಹೇಗಿದ್ದರೂ ಸಾವು ಬರುತ್ತದೆ. ಸ್ವಲ್ಪ ಕಾಯಿರಿ ಎಂದು” ಎಂದು ಸಮಾಧಾನ ಮಾಡುತ್ತದೆ !

ಇದನ್ನು ಓದಿ: Pooja Gandhi Marriage: ʼಮುಂಗಾರು ಮಳೆʼ ನಟಿ ಪೂಜಾಗಾಂಧಿ ಮದುವೆ ಫಿಕ್ಸ್‌! ಇವರೇ ನೋಡಿ ಈ ಮಳೆ ಬೆಡಗಿಯ ಹುಡುಗ!!

”ಸತ್ತು ಹೋದದ್ದು ನಮಗೆ ಹೇಗೆ ಗೊತ್ತಾಗುತ್ತದೆ ?” ಎನ್ನುವುದೊಂದು ಇನ್ನೊಬ್ಬ ವ್ಯಕ್ತಿಯ ಡೌಟ್ ಫುಲ್ ಕ್ವೆಶ್ಚನ್. “ಸತ್ತು ಹೋದದ್ದನ್ನು ತಿಳಿಯಲು ಹಲವು ವಿಧಾನಗಳಿವೆ. ನಾವದನ್ನು ನಿಮಗೆ ತಿಳಿಸಿ ಹೇಳಿಕೊಡಲಿಕ್ಕಾಗುವುದಿಲ್ಲ. ನಿಮಗೆ ನೀವೇ ಸತ್ತು ಹೋದದ್ದನ್ನು ಕನ್ಫರ್ಮ್ ಮಾಡಿಕೊಳ್ಳಬೇಕು” ವೆಬ್ ಸೈಟ್ ತಮಾಷೆಯಾಗಿ ಉತ್ತರಿಸುತ್ತದೆ.
ವಿಚಿತ್ರವೆಂದರೆ, ಸಾವಿನ ಡೇಟ್ ಫಿಕ್ಸ್ ಮಾಡುವ ಈ ವೆಬ್ ಸೈಟ್ ನಲ್ಲೊಂದು, ಬೆಂಗಳೂರಿನ ಅಪಾರ್ಟ್ ಮೆಂಟಿನ ಜಾಹೀರಾತು ಬರುತ್ತಿತ್ತು. ಬಹುಶಹ ಸಾಯದೆ ತುಂಬಾ ದಿನ ಬದುಕಿದ್ದರೆ ವಾಸಕ್ಕೆ ಮನೆ ಬೇಡವೇ ?!. World is full of crazy people !

ತಮ್ಮ ಸಾವಿನ ಟಿಕೆಟ್ ಯಾವಾಗ ಅಂತ ಕನ್ಫರ್ಮ್ ಮಾಡಿಕೊಳ್ಳಲು ಇಚ್ಛಿಸುವವರು ಈ ವೆಬ್ ಸೈಟ್ ಗೆ ಲಾಗ್ ಇನ್ ಮಾಡಿಕೊಳ್ಳಬಹುದು. ಈಗಾಗಲೇ 41,290,798 ಜನ ತಮ್ಮ ದಿನಾಂಕವನ್ನು ನಿರ್ಧರಿಸಕೊಂಡಿದ್ದಾರೆ. ಕುತೂಹಲಿಗಳು ನೋಡಿಕೊಳ್ಳಬಹುದು. (ಈ ಬರಹ ನಿಜವೇ ಆಗಿದ್ದರೂ, ನಿಮ್ಮ ಸಾವಿನ ದಿನಾಂಕ ಹೆಚ್ಚು ಕಮ್ಮಿ ಆದರೆ ಸತ್ತ ನಂತರ ನಮ್ಮ ಮೇಲೆ ಕೇಸು ಹಾಕಲು ಬರಬೇಡಿ !!!)

https://www.death-clock.org

ಇದನ್ನು ಓದಿ: Waqf Board: ಮದರಸಾದಲ್ಲಿ ತಾಲಿಬಾನ್ ಶಿಕ್ಷಣ ನಡೆಸುತ್ತಿರುವ ಆರೋಪ- ಮಹತ್ವದ ಹೇಳಿಕೆ ನೀಡಿದ ವಕ್ಫ್ ಬೋರ್ಡ್ ರಾಜ್ಯಾಧ್ಯಕ್ಷ

You may also like

Leave a Comment