Home » Kodimath Swamiji Prediction: ಭೂಮಿ, ಅಗ್ನಿ, ಆಕಾಶ, ವಾಯು, ಜಲ ಐದರಿಂದ ತೊಂದರೆ; ಅಭಿಮನ್ಯುವಿನ ಹೆಂಡತಿ ಸಂಸತ್‌ ಪ್ರವೇಶ, ದುಯೋರ್ಧನನಿಗೆ ಗೆಲುವು- ಏನಿದರ ಅರ್ಥ?

Kodimath Swamiji Prediction: ಭೂಮಿ, ಅಗ್ನಿ, ಆಕಾಶ, ವಾಯು, ಜಲ ಐದರಿಂದ ತೊಂದರೆ; ಅಭಿಮನ್ಯುವಿನ ಹೆಂಡತಿ ಸಂಸತ್‌ ಪ್ರವೇಶ, ದುಯೋರ್ಧನನಿಗೆ ಗೆಲುವು- ಏನಿದರ ಅರ್ಥ?

0 comments
Kodi Mutt Swamiji

Kodimath Swamiji Prediction: ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ಭೀಕರ ಭವಿಷ್ಯವಾಣಿ ನುಡಿದಿದ್ದು, ಕ್ರೋಧಿ ಸಂವತ್ಸರ ಈಗ ನಡೆದಿದ್ದು, ಈ ಸಂವತ್ಸರದಲ್ಲಿ ಒಳಿತಿಗಿಂತ ಕೆಡುಕು ಹೆಚ್ಚಾಗುತ್ತದೆ ಎಂದಿದ್ದಾರೆ. ಹಾಗೆನೇ ಭೂಮಿ, ಅಗ್ನಿ, ಆಕಾಶ, ವಾಯು, ಜಲ ಇದರಿಂದಲೂ ತೊಂದರೆ ಇರುವುದಾಗಿ ಭವಿಷ್ಯ ನುಡಿದ್ದಾರೆ.

ಭೂ ಕುಸಿತ, ಜಲಪ್ರಳಯದ ಲಕ್ಷಣವಿದೆ. ಗಾಳಿಯಿಂದಲೂ ತೊಂದರೆ ಇದೆ. ಏನೆಲ್ಲ ಅಶುಭ, ಶುಭವಾಗುತ್ತದೆಯೋ ಅದೆಲ್ಲವನ್ನೂ ಶ್ರಾವಣದಲ್ಲಿ ಹೇಳುವೆ ಎಂದಿದ್ದಾರೆ ಸ್ವಾಮೀಜಿಗಲೂ.

ಅಭಿಮನ್ಯುವಿನ ಬಿಲ್ಲಿನ ದಾರ ಕರ್ಣನಿಂದ ಕಟ್‌ ಮಾಡಿಸಿದರು. ಈಗ ಅಭಿಮನ್ಯುವಿನ ಹೆಂಡತಿ ಸಂಸತ್‌ನಲ್ಲಿ ಪ್ರವೇಶ ಮಾಡ್ತಾಳೆ. ಆದರೆ ದುಯೋರ್ಧನನ ತೊಡೆ ಒಡೆಸಿದ ಕೃಷ್ಣ ಈಗ ಇಲ್ಲ. ಹೀಗಾಗಿ ದುಯೋರ್ಧನ ಗೆಲ್ಲುತ್ತಾನೆ ಎಂದಿದ್ದಾರೆ.

ಎರಡ್ಮೂರು ಪ್ರಧಾನಿಗಳ ಸಾವು ಜಗತ್ತಿನಲ್ಲಿ ಆಗಲಿದೆ. ನೋವು, ದುಃಖ, ತಾಪ ಎಲ್ಲವೂ ದೊಡ್ಡ ದೊಡ್ಡವರಿಗೆ ಆಗಲಿದೆ. ಕರೆಯದೆ ಬರುವವನು ಕೋಪ, ಬರೆಯದೇ ಓದುವವನು ಕಣ್ಣು, ಬರಗಾಲಿನಲ್ಲಿ ನಡೆಯುವವನು ಮನಸ್ಸು ಇವೆಲ್ಲವನ್ನು ತಮ್ಮ ತಮ್ಮ ನಿಯಂತ್ರಣದಲ್ಲಿಡಬೇಕು. ದುಡ್ಡು, ಅಧಿಕಾರವೇ ಮುಖ್ಯ ಎಂದು ಹೊರಟವರು ಅಧಃಪತನಕ್ಕೆ ಹೋಗುತ್ತಾರೆ ಎಂದರು.

Pune Porsche Crash: ಪುಣೆ ಪೋರ್ಷೆ ಕಾರು ಅಪಘಾತ ಪ್ರಕರಣ; ಅಪ್ರಾಪ್ತ ಬಾಲಕನಿಗೆ ಜಾಮೀನು ಮಂಜೂರು

You may also like

Leave a Comment