Home » Madarasa: ಮದರಸಾದಲ್ಲಿ ಮಕ್ಕಳಿಗೆ ನಡೆಯುತ್ತಿದೆ ‘ದೇಹದಿಂದ ತಲೆಯನ್ನು ಬೇಪರ್ಡಿಸುವುದು ಹೇಗೆ?’ ಎಂಬ ತರಬೇತಿ..!! ಭಯಾನಕ ವಿಡಿಯೋ ವೈರಲ್

Madarasa: ಮದರಸಾದಲ್ಲಿ ಮಕ್ಕಳಿಗೆ ನಡೆಯುತ್ತಿದೆ ‘ದೇಹದಿಂದ ತಲೆಯನ್ನು ಬೇಪರ್ಡಿಸುವುದು ಹೇಗೆ?’ ಎಂಬ ತರಬೇತಿ..!! ಭಯಾನಕ ವಿಡಿಯೋ ವೈರಲ್

by ಹೊಸಕನ್ನಡ
0 comments

Madarasa: ಮದರಸಾಗಳಲ್ಲಿ(Madarasa) ನೀಡುತ್ತಿರುವ ಶಿಕ್ಷಣದ ಬಗ್ಗೆ ಈ ಹಿಂದೆಯಿಂದಲೂ ಚರ್ಚೆಗಳು ನಡೆಯುತ್ತಿವೆ. ಕೆಲವರು ಇಲ್ಲಿನ ಶಿಕ್ಷಣ ಪದ್ಧತಿ(Education system) ಬಗ್ಗೆ ಪರವಾಗಿ ಮಾತನಾಡಿದರೆ ಇನ್ನು ಕೆಲವರು ಇವುಗಳನ್ನು ವಿರೋದಿಸುವುದೂ ಉಂಟು. ಆದರೀಗ ಸದ್ಯ ಈ ಮದರಸಾ ಒಂದರಲ್ಲಿ ವಿದ್ಯಾರ್ಥಿಗಳಿಕೆ ಹತ್ತುಸೀಳುವ ಶಿಕ್ಷಣವನ್ನು ನೀಡುತ್ತಿರುವ ಅಘಾತಕಾರಿ ವಿಡಿಯೋ ಒಂದು ವೈರಲ್ ಆಗಿದ್ದು ಭಾರೀ ಚರ್ಚೆಯೆಬ್ಬಿಸಿದೆ.

ಹೌದು, ತಲೆಯನ್ನ ದೇಹದಿಂದ ಬೇರ್ಪಡಿಸುವುದು ಹೇಗೆ ಎಂದು ಮದರಸಾ ಒಂದರಲ್ಲಿ ತರಬೇತಿ ನೀಡಲಾಗ್ತಿದ್ದು, ಸಧ್ಯ ಅದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ತಾಣದಲ್ಲಿ ಓಡಾಡ್ತಿದೆ. ಸಧ್ಯ ಈ ಆಘಾತಕಾರಿ ವಿಡಿಯೋ ವೈರಲ್ ಆಗುತ್ತಿದೆ.

ಅಂದಹಾಗೆ ನೀತು ಪಾಂಡೆ(Neetu pande) ಎಂಬ ಟ್ವಿಟರ್(Twitter) ಬಳಕೆದಾರರು ಈ ವೀಡಿಯೊವನ್ನ ಹಂಚಿಕೊಂಡಿದ್ದು, ‘ತುಂಬಾ ಭಯಾನಕ ದೃಶ್ಯ. ಕುತ್ತಿಗೆ ಕತ್ತರಿಸುವುದು ಹೇಗೆ ಎಂದು ಮದರಸಾದಲ್ಲಿ ಕಲಿಸಲಾಗುತ್ತಿದೆ.? ಎಂದು ಬರೆದುಕೊಂಡಿದ್ದಾರೆ. ವೈರಲ್ ಆದ ಈ ವಿಡಿಯೋದಲ್ಲಿ, ಮೌಲಾನಾ ಪ್ರತಿ ಮಗುವಿನ ಬಳಿಗೆ ಹೋಗಿ ಖಡ್ಗದಂತಹ ವಸ್ತುವಿನಿಂದ ಮಕ್ಕಳ ಕುತ್ತಿಗೆಗೆ 3-4 ಬಾರಿ ಹೊಡೆದು ನಂತ್ರ ಕತ್ತು ಸೀಳುವುದು ಹೇಗೆ ಎಂದು ತೋರಿಸುತ್ತಾನೆ.

ಈ ವೀಡಿಯೊವನ್ನ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಟ್ವಿಟರ್ನಲ್ಲಿ ಹಂಚಿಕೊಳ್ಳಲಾಗಿದೆ. ಆದರೆ ಈ ವೀಡಿಯೊ ಎಲ್ಲಿಂದ ಬಂದಿದೆ, ಯಾವ ಮದರಸಾದ್ದು ಎಂಬುದರ ಬಗ್ಗೆ ಯಾವುದೇ ಮಾಹಿತಿ ಇಲ್ಲದಿದ್ದರೂ, ಈ ವೀಡಿಯೊದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆ ಭುಗಿಲೆದ್ದಿದೆ. ಇಂದು ಶೇರ್ ಮಾಡಲಾದ ಈ ಭಯಾನಕ ವೀಡಿಯೊ ಇಲ್ಲಿಯವರೆಗೆ 2679 ವೀಕ್ಷಣೆಗಳನ್ನ ಪಡೆದಿದೆ. ಇನ್ನೀದನ್ನ 128 ಬಾರಿ ರಿಟ್ವೀಟ್ ಮಾಡಲಾಗಿದೆ.

You may also like

Leave a Comment