Home » ಹರಕೆಯ ರೂಪದಲ್ಲಿ ಬಾಳೆಹಣ್ಣಿನಲ್ಲಿ ಪ್ರೇಮ ನಿವೇದನೆ | ” ಪಿ ಲವ್ಸ್ ಎಲ್ “!!! ವಿಶಿಷ್ಟ ರೀತಿಯ ಲವ್ ಪ್ರಪೋಸಲ್ ಗೆ ಭಾರೀ ಮೆಚ್ಚುಗೆ

ಹರಕೆಯ ರೂಪದಲ್ಲಿ ಬಾಳೆಹಣ್ಣಿನಲ್ಲಿ ಪ್ರೇಮ ನಿವೇದನೆ | ” ಪಿ ಲವ್ಸ್ ಎಲ್ “!!! ವಿಶಿಷ್ಟ ರೀತಿಯ ಲವ್ ಪ್ರಪೋಸಲ್ ಗೆ ಭಾರೀ ಮೆಚ್ಚುಗೆ

by Mallika
0 comments

ಕಷ್ಟ ಅಂತಾ ಬಂದಾಗ ಮನುಷ್ಯನಿಗೆ ಮೊದಲಿಗೆ ನೆನಪಾಗುವುದು ದೇವರು. ಎಲ್ಲಾ ಕಷ್ಟಗಳನ್ನು ನಿವಾರಣೆ ಮಾಡಪ್ಪ ಅಂತ ಒಮ್ಮೆ ದೇವರ ಮೊರೆ ಹೋದರೆ ಒಮ್ಮೆ ನಿರಾಳ ಮೂಡುವುದು ಸಹಜ. ಹಾಗೆನೇ ಇಲ್ಲೊಬ್ಬ ಪ್ರೇಮಿ, ತನ್ನ ಪ್ರೀತಿ ಸಿಗಲಿ ಎಂದು ಹರಕೆ ರೂಪದಲ್ಲಿ ಬಾಳೆಹಣ್ಣನ್ನು ದೇವರಿಗೆ ಅರ್ಪಿಸುವ ಮೂಲಕ ಅದರಲ್ಲಿ ತನ್ನ ಪ್ರೀತಿಯ ನಿವೇದನೆ ಮಾಡಿ ಸುದ್ದಿಯಾಗಿದ್ದಾನೆ.

ತುಮಕೂರಿನ ತಿಪಟೂರಿನಲ್ಲಿ ನಡೆದ ಜಾತ್ರೆಯೊಂದರಲ್ಲಿ ಈ ಯುವಕ ಬಾಳೆಹಣ್ಣಿನ ಮೇಲೆ ತನ್ನ ಪ್ರೀತಿ ನಿವೇದನೆ ಮಾಡಿಕೊಂಡು ಅದನ್ನು ರಥಕ್ಕೆ ಎಸೆದಿದ್ದಾನೆ. ಈ ಬಾಳೆಹಣ್ಣು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ.

ಬಾಳೆಹಣ್ಣಿನಲ್ಲಿ “ನಮ್ಮುಡುಗಿ ಜೊತೆ ಮದುವೆ ಆಗಲಿ” ಪಿ ಲವ್ ಎಲ್ ಎಂದು ಬಾಳೆಹಣ್ಣಿನಲ್ಲಿ ಬರೆದಿದ್ದಾನೆ. ನಂತರ ಅದನ್ನು ರಥಕ್ಕೆ ಎಸೆಯುವ ಮೂಲಕ ದೇವರಲ್ಲಿ ತನ್ನ ಕೋರಿಕೆ ಈಡೇರಿಸು ಎಂದು ಬೇಡಿಕೊಂಡಿದ್ದಾನೆ. “ಎಲ್” ಹುಡುಗಿಗೆ ಈ ಹುಡುಗನ ಪ್ರೇಮ ನಿವೇದನೆ ತಲುಪುತ್ತೋ ಇಲ್ಲವೋ, ಆದರೆ ಈ ಹುಡುಗನ ಪ್ರೀತಿ ನಿಷ್ಕಲ್ಮಶ ಎಂದು ಮೇಲ್ನೋಟಕ್ಕೆ ಕಾಣುತ್ತದೆ. ” ಎಲ್” ಹುಡುಗಿಗೆ ಈತನ ಪ್ರೇಮ ನಿವೇದನೆ ತಲುಪಲಿ, ಆಕೆ ಈತನಿಗೆ ಬೇಗನೆ ಸಿಗಲಿ, ಹೊಸ ಪ್ರೇಮಕಾವ್ಯ ಶುರುವಾಗಲಿ ಎಂದು ನಮ್ಮ ಹಾರೈಕೆ.

You may also like

Leave a Comment