Home » ಸಾರ್ವಜನಿಕ ಶೌಚಾಲಯದ ಚಿಲಕ ಹಾಕಿ ಹಾಯಾಗಿ ನಿದ್ದೆಗೆ ಜಾರಿದ್ದ ಮಂಗಳೂರಿನ ಯುವಕ| ಬೇಸ್ತುಬಿದ್ದ ಪೊಲೀಸರು!

ಸಾರ್ವಜನಿಕ ಶೌಚಾಲಯದ ಚಿಲಕ ಹಾಕಿ ಹಾಯಾಗಿ ನಿದ್ದೆಗೆ ಜಾರಿದ್ದ ಮಂಗಳೂರಿನ ಯುವಕ| ಬೇಸ್ತುಬಿದ್ದ ಪೊಲೀಸರು!

0 comments

ಸಾರ್ವಜನಿಕ ಶೌಚಾಲಯದಲ್ಲಿ ವ್ಯಕ್ತಿಯೋರ್ವ ನಿದ್ದೆಗೆ ಜಾರಿದ್ದು, ಕೆಲಕಾಲ ನೋಡುಗರಿಗೆ ಆತಂಕ ಉಂಟುಮಾಡಿತ್ತು.

ಅಂಕೋಲಾ ಸಾರಿಗೆ ಸಂಸ್ಥೆಯ ಕೇಂದ್ರ ಬಸ್ ಸ್ಟ್ಯಾಂಡ್ ಹಿಂಬದಿಯಲ್ಲಿರುವ ಶೌಚಾಲಯದ ಒಳಗಡೆ ಹೋಗಿ ಬಾಗಿಲು ಹಾಕಿಕೊಂಡು ಮಂಗಳೂರು ಕಾಪು ಮೂಲದ ವ್ಯಕ್ತಿ ಮಲಗಿದ್ದ.
ಶೌಚಾಲಯಕ್ಕೆಂದು ಒಳಗೆ ಹೋದ ವ್ಯಕ್ತಿ ಸುಮಾರು ಒಂದು ಗಂಟೆಯವರೆಗೂ ಹೆಚ್ಚಿನ ಕಾಲ ಹೊರಗಡೆ ಬರದೇ ಇದ್ದದರಿಂದ ನಿರ್ವಹಣಾ ಸಿಬ್ಬಂದಿ ಕದ ತಟ್ಟಿದರೂ ಒಳಗಡೆಯಿಂದ‌ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇದರಿಂದಾಗಿ ಹಿಂಬದಿಯಲ್ಲಿ ಇರುವ ಸಣ್ಣ ಕಿಂಡಿಯಲ್ಲಿ ಮೊಬೈಲ್ ತೂರಿಸಿ ವೀಡಿಯೋ ಚಿತ್ರೀಕರಣ ಮಾಡಿದಾಗ ಒಳಗಡೆ ಆ ವ್ಯಕ್ತಿ ಸತ್ತು ಬಿದ್ದ ರೀತಿಯಲ್ಲಿ ಬಿದ್ದುಕೊಂಡಿರುವುದು ಕಂಡು ಬಂದಿದೆ.

ಇದರಿಂದ ತೀವ್ರ ಆತಂಕಗೊಂಡ ಸಿಬ್ಬಂದಿ ಬಸ್ ನಿಲ್ದಾಣದ ನಿಯಂತ್ರಕರ ಗಮನಕ್ಕೆ ತಂದಿದ್ದಾನೆ. ತಕ್ಷಣ ಬಸ್ ನಿಲ್ದಾಣದ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಬಾಗಿಲು ಬಡಿದರೂ ಒಳಗಡೆಯಿಂದ ಪ್ರತಿಕ್ರಿಯೆ ಬರದ ಕಾರಣ ನಂತರ ಅಂಕೋಲಾ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ಬಾಗಿಲಿನ ಶೀಟ್ ಒಡೆದು ಕೈ ತೂರಿಸಿ ಬಾಗಿಲು ತೆರೆದು ನೋಡಿದಾಗ ಒಳಗೆ ಬಿದ್ದಿರುವ ವ್ಯಕ್ತಿಯನ್ನು ಕಂಡು ಒಂದು ಕ್ಷಣ ಆತ ಮೃತ ಪಟ್ಟ ರೀತಿಯಲ್ಲಿ ಕಂಡಿದ್ದು‌ ಎಲ್ಲರೂ ಭಯಗೊಂಡಿದ್ದಾರೆ.

ಆದರೆ ವ್ಯಕ್ತಿ ಉಸಿರಾಡುವುದನ್ನು ಗಮನಿಸಿ ತಟ್ಟಿ ಎಬ್ಬಿಸಿದಾಗ ವ್ಯಕ್ತಿ ಅಸ್ವಸ್ಥ ಆಗಿರುವ ರೀತಿಯಲ್ಲಿ ಎದ್ದು ಕುಳಿತಿರುವುದು ಕಂಡು ಬಂದಿದ್ದು, ಆತ ಅತಿಯಾಗಿ ಕುಡಿದಿರುವುದು ತಿಳಿದು ಬಂದಿದೆ.

You may also like

Leave a Comment