Home » Mandya: ಕುಡಿತ ಬಿಟ್ಟ ಖುಷಿಗೆ ಇಡೀ ಗ್ರಾಮಕ್ಕೆ ಕೋಳಿ ಹಂಚಿ ಸಂಭ್ರಮಿಸಿದ ವ್ಯಕ್ತಿ!!

Mandya: ಕುಡಿತ ಬಿಟ್ಟ ಖುಷಿಗೆ ಇಡೀ ಗ್ರಾಮಕ್ಕೆ ಕೋಳಿ ಹಂಚಿ ಸಂಭ್ರಮಿಸಿದ ವ್ಯಕ್ತಿ!!

0 comments

Mandya: ವಿಪರೀತ ಕುಡಿತದ ಚಟವಿದ್ದ ವ್ಯಕ್ತಿಯೊಬ್ಬ ಅರ ಸಾಹಸ ಪಟ್ಟು ಕುಣಿತ ಬಿಟ್ಟಿದ್ದಕ್ಕೆ ಇಡೀ ಗ್ರಾಮಕ್ಕೆ ಕೋಳಿಯನ್ನು ಹಂಚಿ ಸಂಭ್ರಮಿಸಿದ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.

ಹೌದು, ಸಕ್ಕರೆ ನಾಡು ಮಂಡ್ಯದಲ್ಲಿ ಬಲು ಅಪರೂಪದ ಘಟನೆ ನಡೆದಿದೆ. ಕಳೆದ ಕೆಲ ವರ್ಷಗಳಿಂದ ಕುಡಿತದ ದಾಸನಾಗಿದ್ದ ಬಸರಾಳು ಗ್ರಾಮದ ಕಿರಣ್ ಎಂಬುವವರು ಇತ್ತೀಚೆಗೆ ಮನಪರಿವರ್ತನೆಯಾಗಿ ಕುಡಿತವನ್ನು ಬಿಡಲು ಯೋಚಿಸಿದ್ದರು.

ಅದರಂತೆ ಇದೀಗ ಕುಡಿತವನ್ನು ಸಂಪೂರ್ಣವಾಗಿ ಬಿಟ್ಟ ಹಿನ್ನಲೆ ಎಲ್ಲರಿಗೂ ಕೋಳಿ ಹಂಚಿದ್ದಾರೆ. ಸಧ್ಯ ಕುಡಿತದ ಚಟದಿಂದ ಹೊರಬಂದ ಖುಷಿಯಲ್ಲಿದ್ದ ಕಿರಣ್ ಅವರ ಹುಟ್ಟು ಹಬ್ಬದ ಹಿನ್ನಲೆ ಇಡೀ ಗ್ರಾಮಕ್ಕೆ ಕೋಳಿ ಹಂಚಿಕೆ ಮಾಡಿ ಹುಟ್ಟು ಹಬ್ಬ ಆಚರಿಸಿಕೊಂಡಿದ್ದು, ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.

You may also like