Home » Wedding: ಅಂದು ಜಾಲಿಯಾಗಿ ಓಡಿ ಹೋದ ನಾದಿನಿ-ಭಾವ: ಇಂದು ಕೋರ್ಟ್‌ ಕೊಟ್ಟ ಶಿಕ್ಷೆ ಕೇಳಿದ್ರೆ ಎಲ್ಲರೂ ಆಶ್ಚರ್ಯ!

Wedding: ಅಂದು ಜಾಲಿಯಾಗಿ ಓಡಿ ಹೋದ ನಾದಿನಿ-ಭಾವ: ಇಂದು ಕೋರ್ಟ್‌ ಕೊಟ್ಟ ಶಿಕ್ಷೆ ಕೇಳಿದ್ರೆ ಎಲ್ಲರೂ ಆಶ್ಚರ್ಯ!

0 comments
Wedding

Wedding: 17 ವರ್ಷಗಳ ಹಿಂದೆ ಆರೋಪಿ ರಾಜ್‌ಕುಮಾರ್ ಮಂಡಲ್‌ಗೆ ತನ್ನ ಹೆಂಡತಿ ತಂಗಿ ಮೇಲೆ ಮನಸಾಗಿದೆ. ಹಾಗಾಗಿ ಮಾವನಿಗೆ ಸಣ್ಣ ಮಗಳನ್ನು ಮದುವೆ(Marriage) ಮಾಡಿ ಕೊಟ್ರೆ ಮಾತ್ರ ತನ್ನ ಹೆಂಡತಿ ಗುಹೋ ದೇವಿಯನ್ನು ನೋಡಿಕೊಳ್ಳುತ್ತಾನೆ ಎಂದು ಪೀಡಿಸಿದ್ದ. ಇದಕ್ಕೆ ಒಪ್ಪದ ಮಾವ ಸಣ್ಣ ಮಗಳಿಗೆ 2007ರಲ್ಲಿ ಬೇರೆ ಮದುವೆ ಮಾಡಿದ್ದ. ಇದರಿಂದ ಅಸಮಾಧಾನಗೊಂಡ, ಆತ ಜೂನ್ 30, 2007 ರಂದು ಹೊಸದಾಗಿ ನಾದಿನಿಯೊಂದಿಗೆ ಮದುವೆಯಾಗಿ ನಾಪತ್ತೆಯಾಗಿದ್ದ(Abscond).

ಇದರಿಂದ ಕುಪಿತಗೊಂಡ ಮಾವ ನಾರಾಯಣ್ ಮಂಡಲ್, ಸನೋಖರ್ ಪೊಲೀಸ್ ಠಾಣಾಯಲ್ಲಿ(Police Station) ಅಳಿಯ ರಾಜ್‌ಕುಮಾರ್ ಮಂಡಲ್ ವಿರುದ್ಧ ದೂರು(Case) ನೀಡಿದ್ದರು. ಆದರೆ ಪೊಲೀಸರು(Police) ಈ ಕೇಸ್‌ ತೆಗೆದುಕೊಳಳಲು ನಿರಾಕರಿಸಿದ್ದರು. ತದನಂತರ ಅವರು, ನ್ಯಾಯಾಲಯದ(Court) ಮೊರೆ ಹೋಗಿದ್ರು. ನಂತರ ನ್ಯಾಯಾಲಯ ಪ್ರಕರಣವನ್ನು ಕೈಗೆತ್ತಿಕೊಳ್ಳುವಂತೆ ಪೊಲೀಸ್ ಠಾಣೆಗೆ ಆದೇಶಿಸಿದೆ. ಬಳಿಕ ಮಾವ, ತನ್ನ ಅಳಿಯನ ಕುಟುಂಬದ ಎಲ್ಲಾ ಸದಸ್ಯರ ವಿರುದ್ಧ ದೂರು ನೀಡಿದ್ದರು. ಪ್ರಕರಣದ ತನಿಖೆ ನಡೆಸಿ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಆದರೆ ಶಿಕ್ಷೆಯ ಅಂಶದ ಬಗ್ಗೆ ಪೊಲೀಸರು ಹೇಳುವ ಮೊದಲೇ ನ್ಯಾಯಾಧೀಶರು ಅಚ್ಚರಿಯ ಶಿಕ್ಷೆ ಪ್ರಕಟಿಸಿದ್ದಾರೆ.

ನ್ಯಾಯಾಲಯ ತಪ್ಪು ಮಾಡಿದವನಿಗೆ ಜೈಲು ಶಿಕ್ಷೆ, ದಂಡ, ಜೀವಾವಧಿ ಹೀಗೆ ನೀಡುವುದು ಮಾಮೂಲು. ಆದರೆ ಇಲ್ಲಿ ಹೆಂಡತಿ ಬದುಕಿರುವಾಗೇ ಪತ್ನಿಯ ತಂಗಿಯೊಂದಿಗೆ ಮದುವೆಯಾದ ರಾಜ್‌ ಕುಮಾರನಿಗೆ ಬರೋಬ್ಬರಿ ಕಳೆದ 17 ವರ್ಷಗಳ ಬಳಿಕ ಎಡಿಜೆ 16 ರ ನ್ಯಾಯಾಲಯವು ಆರೋಪಿಗೆ 25 ಸಸಿಗಳನ್ನು ನೆಡಲು ಹೇಳಿದೆ. ಅಲ್ಲದೆ ಶಿಕ್ಷೆಯಾಗಿ ಪೊಲೀಸ್ ಠಾಣೆಯಿಂದ ಪ್ರಮಾಣಪತ್ರವನ್ನು ಪಡೆದುಕೊಂಡ ಬಳಿಕ ಆಗಸ್ಟ್ 28ಕ್ಕೆ ಮುಂದಿನ ವಿಚಾರಣೆಯನ್ನು ನಿಗದಿಪಡಿಸಿದೆ ನ್ಯಾಯಾಲಯ. ಅತ್ತ ಶಿಕ್ಷೆಯೂ ಆಯ್ತು, ಇತ್ತ ಪರಿಸರ ಸಂರಕ್ಷಣೆಯೂ ಆಯ್ತು ಅಂತ ಶಿಕ್ಷೆ ಬಗ್ಗೆ ಮಾತನಾಡಿಕೊಳ್ಳುತ್ತಿದ್ದಾರೆ.

You may also like

Leave a Comment