Home » Mysteries Place: ಅಬ್ಬಬ್ಬಾ!! ಏನಿದು ಆಶ್ಚರ್ಯ? ಈ ಬೀಚ್’ನಲ್ಲಿ ನೋಡಿದಾಕ್ಷಣ ಕಣ್ಮರೆಯಾಗುತ್ತೆ ನೀರು!!

Mysteries Place: ಅಬ್ಬಬ್ಬಾ!! ಏನಿದು ಆಶ್ಚರ್ಯ? ಈ ಬೀಚ್’ನಲ್ಲಿ ನೋಡಿದಾಕ್ಷಣ ಕಣ್ಮರೆಯಾಗುತ್ತೆ ನೀರು!!

0 comments
Mysteries Place

Mysteries Place: ಬೀಚ್’ಗೆ (beech) ಜನರು ಹೆಚ್ಚಾಗಿ ವಾರಾಂತ್ಯ ಸಮಯದಲ್ಲಿ ಭೇಟಿ ನೀಡುತ್ತಾರೆ. ಕೆಲವರು ಒತ್ತಡದ ಜೀವನದಿಂದ ಹೊರಬರಲು ವಿಶ್ರಾಂತಿಗಾಗಿ ಬೀಚ್ ಗೆ ತೆರಳಿ ಹಾಯಾದ ವಾತಾವರಣವನ್ನು ಆನಂದಿಸುತ್ತಾರೆ. ಇಲ್ಲಿನ ಉಲ್ಲಾಸಮಯವಾದ ವಾತಾವರಣವು ಮನಸ್ಸಿಗೆ ನೆಮ್ಮದಿಯನ್ನು ಉಂಟು ಮಾಡುತ್ತದೆ. ಬೀಚ್ ನಲ್ಲಿ ಅಲೆದಾಡುವುದು, ಆಟವಾಡುವುದು ಬಹುತೇಕರಿಗೆ ಅಚ್ಚುಮೆಚ್ಚು‌.

ಆದರೆ, ಅಚ್ಚರಿ ವಿಷಯ ಏನೆಂದರೆ ಬೀಚ್’ನ ನೀರು ನೋಡಿದಾಕ್ಷಣ ಮಾಯವಾಗುತ್ತದೆ. ಹೌದು, ಇಂತಹ ವಿಚಿತ್ರವಾದ ತಾಣ (Mysteries Place) ಬೇರೆಲ್ಲೂ ಇಲ್ಲ, ಬದಲಾಗಿ ದೇಶದ ಒರಿಸ್ಸಾ ರಾಜ್ಯದ ಚಂಡಿಪುರದಲ್ಲಿದೆ. ದೇಶದಲ್ಲಿ ಹಲವು ಅಚ್ಚರಿ ಎನಿಸುವ ನಿಗೂಢ ಸ್ಥಳಗಳಿವೆ. ಹಾಗೆಯೇ ಸಾಕಷ್ಟು ಆಕರ್ಷಣೀಯವಾದ ಪ್ರೇಕ್ಷಣೀಯ ಸ್ಛಳಗಳೂ ಇವೆ. ಭವ್ಯ ಕಟ್ಟಡಗಳು, ಅರಮನೆ, ದೇವಾಲಯಗಳು, ವಾಸ್ತಶಿಲ್ಪಗಳು, ಜೋಗ- ಜಲಪಾತಗಳು ಸೇರಿದಂತೆ ಹಲವು ಮೈನವಿರೇಳಿಸುವ ಸ್ಥಳಗಳು ದೇಶದಲ್ಲಿ ಕಾಣಸಿಗುತ್ತದೆ. ಆದರೆ, ನಿಮಗೆ ಗೊತ್ತಾ? ಇದಿಷ್ಟೇ ಅಲ್ಲ ಭಾರತದಲ್ಲಿದೆ ನೋಡಿದಾಕ್ಷಣ ಕಣ್ಮರೆಯಾಗುವ ನೀರು. ಏನಿದು ಆಶ್ಚರ್ಯ? ಇಲ್ಲಿದೆ ನೋಡಿ ಇಂಟೆರೆಸ್ಟಿಂಗ್ ಮಾಹಿತಿ!.

ಒಡಿಶಾ (odisha) ರಾಜ್ಯದ ಚಂಡಿಪುರದ ಬಾಲಸೋರ್ ಗ್ರಾಮದ ಬಳಿ ಬೀಚ್’ನಲ್ಲಿ (Chandipur Beach) ನೀರು ನಾವು ನೋಡಿದ ನಂತರ ಸ್ವಲ್ಪ ಸಮಯದವರೆಗೆ ಗೋಚರಿಸುವುದಿಲ್ಲ, ಮಾಯವಾಗುತ್ತದೆ. ಮತ್ತು ಸ್ವಲ್ಪ ಸಮಯದ ನಂತರ ಕಾಣಿಸಿಕೊಳ್ಳುತ್ತದೆ. ಹಾಗಾಗಿ ಈ ಬೀಚ್‌ನ್ನು ಹೈಡ್‌ ಆಂಡ್‌ ಸೀಕ್‌ ಬೀಚ್‌ ಎಂದು ಕರೆಯಲಾಗುತ್ತದೆ. ಈ ಬೀಚ್ ಗೆ ಲುಕಾ ಚುಪ್ಪಿ ಬೀಚ್ ಎಂಬ ಹೆಸರು ಕೂಡ ಇದೆ.

ಒಡಿಶಾದ ರಾಜಧಾನಿ ಭುವನೇಶ್ವರದಿಂದ ಸುಮಾರು 200 ಕಿ.ಮೀ ದೂರದಲ್ಲಿರುವ ಬಾಲಸೋರ್ ಹಳ್ಳಿಯ ಹತ್ತಿರದಲ್ಲಿಯೇ ಇದೆ ಈ ಬೀಚ್. ಕಡಲತೀರದ ಉಬ್ಬರವಿಳಿತದಿಂದಾಗಿ ಬೀಚ್’ನ ಈ ನೀರು ದಿನಕ್ಕೆ ಎರಡು ಬಾರಿ ಕಣ್ಮರೆಯಾಗುತ್ತದೆ. ಚಂಡೀಪುರ ಬೀಚ್ ಕ್ಯಾಸುರಿನಾ ಮರಗಳು, ಪ್ರಾಚೀನ ನೀರು ಮತ್ತು ಸೊಂಪಾದ ಕರಾವಳಿ ಸಸ್ಯಗಳಿಂದ ಆವೃತವಾಗಿದೆ. ಇಲ್ಲಿ ಕುದುರೆ ಏಡಿ ಅಥವಾ ಕೆಂಪು ಏಡಿಗಳು ಕಾಣಸಿಗುತ್ತದೆ. ನೋಡಲು ಆಕರ್ಷಣೀತವಾದ ಈ ಸ್ಥಳ ದೇಶದಲ್ಲಿ ಸಾಕಷ್ಟು ಪ್ರಸಿದ್ಧಿ ಪಡೆದಿದೆ.

 

ಇದನ್ನು ಓದಿ: Cooker blast: ಚುನಾವಣೆ ವೇಳೆ ಹಂಚಿದ ಕುಕ್ಕರ್ ಸ್ಫೋಟ, ಬಾಲಕಿಗೆ ಗಂಭೀರ ಗಾಯ ಹೆಚ್ ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ 

You may also like

Leave a Comment