Love Marriage: ಪ್ರೀತಿ(Love)ಮಾಯೆ ಎನ್ನುವ ವಿಚಾರ ಗೊತ್ತಿರುವಂತದ್ದೇ! ಪ್ರೀತಿಯ ಬಲೆಯಲ್ಲಿ ಬಿದ್ದು ಮೋಸ ಹೋಗುವ ಅನೇಕ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಇದೇ ರೀತಿ ಮೋಸ ಹೋದ ಪ್ರಕರಣವೊಂದು ಬೆಳಕಿಗೆ ಬಂದಿದೆ.ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲಿ (social media)ಪರಿಚಯವಾಗಿ ಸಾಮಾಜಿಕ ಜಾಲತಾಣದಲ್ಲಿ ಗೆಳೆತನ ಬೆಳೆಸಿದ ಯುವತಿಯನ್ನು ಪ್ರೀತಿಸುವ ನಾಟಕವಾಡಿ ಮೋಸ ಹೋಗುವ ಪ್ರಮೇಯ ಹೆಚ್ಚುತ್ತಿದೆ. ಇದೀಗ ಬಿಹಾರದ ದರ್ಭಾಂಗಾದಲ್ಲಿಯೂ ಕೂಡ ಸೀಮಾ ಹೈದರ್‌ನಂಥ (Seema Hyder Love Story) ಪ್ರಕರಣವೊಂದು ಬೆಳಕಿಗೆ ಬಂದಿದೆ.
ಪ್ರೀತಿ ಕುರುಡು ಎಂಬ ಮಾತಿನಂತೆ ಪ್ರೀತಿಯಲ್ಲಿ ಬಿದ್ದ ವಿವಾಹಿತ ಮಹಿಳೆಯೊಬ್ಬಳು ತನ್ನ ಪ್ರಿಯಕರನಿಗಾಗಿ ಗಂಡನಿಗೆ ವಿಚ್ಛೇಧನ ನೀಡಿ ಮಕ್ಕಳನ್ನು ತೊರೆದು ನೇಪಾಳದಿಂದ(Nepal ) ಭಾರತಕ್ಕೆ(India)ಬಂದಿದ್ದಾಳೆ. ಇಷ್ಟೆಲ್ಲ ಹರಸಾಹಸ ಪಟ್ಟು ಪ್ರಿಯಕರನ (Love Marriage) ಸೇರಲು ಬಂದವಳಿಗೆ ಕಾದಿತ್ತು ಬಿಗ್ ಶಾಕ್!
ನೇಪಾಳದ ನಿವಾಸಿ ಸಂಗೀತಾ ದೇವಿ ತನ್ನ ಪಾಗಲ್ ಪ್ರೇಮಿ ಗೋವಿಂದ್‌ಗಾಗಿ ತನ್ನ ಮೊದಲ ಪತಿಗೆ ವಿಚ್ಛೇದನ ನೀಡಿ ಗಂಡ ಮತ್ತು ಮಕ್ಕಳನ್ನು ತೊರೆದು ಭಾರತಕ್ಕೆ ಬಂದಿದ್ದು, ಆದರೆ ಪ್ರಿಯಕರನಿಗೆ ಈಗಾಗಲೇ ಮದುವೆಯಾಗಿದೆ ಎಂಬ ವಿಚಾರ ತಿಳಿದಿರಲ್ಲವಂತೆ. ಗೋವಿಂದ್ ಬಹಳ ದಿನಗಳಿಂದ ಸಂಗೀತಾ ದೇವಿಯನ್ನು ನಿರ್ಲಕ್ಷಿಸುತ್ತಿದ್ದನಂತೆ. ಗೋವಿಂದ್ ತನ್ನನ್ನು ನಿರ್ಲಕ್ಷಿಸಲು ಕಾರಣವೇನು ಎಂಬುದು ತಿಳಿಯದೇ ಗೋವಿಂದನ ಮನೆಯ ವಿಳಾಸ ಹೇಗೋ ಪಡೆದುಕೊಂಡು ಭಾರತಕ್ಕೆ ಭೇಟಿ ನೀಡಿದ್ದಾಳೆ. ಆದರೆ, ಭಾರತಕ್ಕೆ ಭೇಟಿ ನೀಡಿದ ಸಂದರ್ಭ ತನ್ನ ಪ್ರಿಯಕರನಿಗೆ ಮತ್ತೊಂದು ಮದುವೆಯಾಗಿದೆ ಎಂಬ ವಿಚಾರ ಬಯಲಾಗಿದೆ.
ಬಿಹಾರದ ದರ್ಭಾಂಗದ ಬಕರ್‌ಗಂಜ್ ಪ್ರದೇಶದ ಗೋವಿಂದ್ ಎಂಬಾತ ಖಾಸಗಿ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದನಂತೆ. ಗೋವಿಂದ್ ಎಂಟು ವರ್ಷಗಳ ಹಿಂದೆ ದರ್ಭಾಂಗ ನಿವಾಸಿ ಪ್ರೇರಣಾ ಕುಮಾರಿ ಎಂಬಾಕೆಯನ್ನು ಪ್ರೀತಿಸಿ ಮದುವೆಯಾಗಿದ್ದ. ಈ ನಡುವೆ, ರಕ್ಸಾಲ್ಗೆ ವರ್ಗಾವಣೆಯಾಗಿ, ಗೋವಿಂದ್ ಇಲ್ಲಿ ತಂಗಿದ್ದ ಸಮಯದಲ್ಲಿ ನೇಪಾಳದ ನಿವಾಸಿ ಸಂಗೀತಾ ಎಂಬಾಕೆಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಸಂಪರ್ಕ ಬೆಳೆಸಿ ಸ್ನೇಹ ಬೆಳೆಸಿಕೊಂಡಿದ್ದಾನೆ. ಇಬ್ಬರ ನಡುವೆ ಸ್ನೇಹ ಪ್ರೀತಿಯಾಗಿ ಬದಲಾಗಿದೆ.
ಈ ನಡುವೆ, ಸಂಗೀತಾ ತನಗೆ ಮದುವೆಯಾಗಿ ಎರಡು ಮಕ್ಕಳ ತಾಯಿ ಎಂದು ಗೋವಿಂದನಿಗೆ ತಿಳಿಸಿದ್ದಾಳೆ.ಈ ವೇಳೆ ಗೋವಿಂದ್, ಸಂಗೀತಾಗೆ ನೀನು ಪತಿಗೆ ವಿಚ್ಛೇದನ ನೀಡಬೇಕಾಗಿದ್ದು, ಆನಂತರ ನಿನ್ನನ್ನು ಮದುವೆಯಾಗುತ್ತಾನೆ ಎಂದು ಹೇಳಿದ್ದಾನೆ. ಗೋವಿಂದನ ಮಾತುಗಳನ್ನು ನಂಬಿದ ಸಂಗೀತಾ, ತನ್ನ ಮಕ್ಕಳಿಬ್ಬರನ್ನೂ ತೊರೆದು ಗಂಡನಿಂದಲೂ ವಿಚ್ಛೇದನ ಪಡೆದಿದ್ದಾಳೆ. ಆ ಬಳಿಕ ನೇಪಾಳದಿಂದ ಭಾರತಕ್ಕೆ ಬಂದು ಗೋವಿಂದನನ್ನು ದೇವಸ್ಥಾನದಲ್ಲಿ ಮದುವೆಯಾಗಿದ್ದಾಳೆ. ಆ ನಂತರ ಅವರಿಬ್ಬರು ರಕ್ಸಾಲ್‌ನಲ್ಲಿ ವಾಸಿಸಲು ಆರಂಭಿಸಿದ್ದಾರೆ. ಈ ನಡುವೆ ಪ್ರಿಯಕರ ತನ್ನನ್ನು ನಿರ್ಲಕ್ಷ್ಯ ಮಾಡುತ್ತಿದ್ದಾಗ ನೇರವಾಗಿ ಮನೆಗೆ ಹುಡುಕಿ ಬಂದಾಗ ಸಂಗೀತಾ ದರ್ಭಾಂಗ ತಲುಪಿದ ಕೂಡಲೇ ಗೋವಿಂದನಿಗೆ ಈಗಾಗಲೇ ಮದುವೆಯಾಗಿದ್ದು,ಎರಡು ಮಕ್ಕಳಿದ್ದಾರೆ ಎಂಬ ವಿಚಾರ ಬಯಲಾಗಿದೆ.
ಆತನ ಒಂದು ಮಗುವಿಗೆ ಒಂದು ವರ್ಷ ಮತ್ತು ಇನ್ನೊಂದು ಮಗುವಿಗೆ ಎರಡು ವರ್ಷ ಎಂದು ಅವನ ಮೊದಲ ಪತ್ನಿ ಪ್ರೇರಣಾ ಹೇಳಿದ್ದಾರೆ. ಇದರಿಂದಾಗಿ ಇಬ್ಬರ ನಡುವೆ ಗಂಡ ಸಿಲುಕಿದ್ದಾನೆ. ಇಬ್ಬರು ತಮ್ಮನ್ನು ಮದುವೆ ಆಗಿ ಮೋಸ ಮಾಡಿರುವ ಗಂಡನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.ಆ ಬಳಿಕ ಇಬ್ಬರೂ ಪತ್ನಿಯರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ನಮ್ಮಿಬ್ಬರನ್ನು ಪ್ರೇಮ ವಿವಾಹವಾಗಿ ಮೋಸ ಮಾಡಿದ್ದು, ನಮಗೆ ನ್ಯಾಯ ಒದಗಿಸುವಂತೆ ಮಡದಿಯರಿಬ್ಬರು ಪೊಲೀಸರಿಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: Donald Trump: ಭಾರತಕ್ಕೆ ಬೆದರಿಕೆ ಹಾಕಿದ ಡೊನಾಲ್ಡ್ ಟ್ರಂಪ್! ʼನಾನೇನಾದರೂ ಅಧ್ಯಕ್ಷನಾದರೆ….
