Home » Palmistry: ಕೈಯಲ್ಲಿ ‘ವಿಷ್ಣು ರೇಖೆ’ ಇರುವವರು ಅದೃಷ್ಟವಂತರು!

Palmistry: ಕೈಯಲ್ಲಿ ‘ವಿಷ್ಣು ರೇಖೆ’ ಇರುವವರು ಅದೃಷ್ಟವಂತರು!

by Mallika
1 comment

Palmistry : ಶಾಸ್ತ್ರದಲ್ಲಿ ಬರುವ ಕೆಲವು ವಿಶೇಷ ರೇಖೆಗಳು ಮತ್ತು ಚಿಹ್ನೆಗಳು, ಮನುಷ್ಯರ ಜೀವನದಲ್ಲಿ ಮಂಗಳಕರವಾಗಬಹುದು ಅಥವಾ ಅಶುಭಕರವು ಆಗಬಹುದು. ಹಾಗೆಯೇ ಇಂತಹ ರೇಖೆಯಲ್ಲಿ ವಿಷ್ಣು ರೇಖೆಯು ಒಂದು. ಮನುಷ್ಯರ ಕೈಯಲ್ಲಿ ವಿಷ್ಣು ರೇಖೆ ಇದ್ದರೆ ಬಹಳ ಮಂಗಳಕರವೆಂದು ಎಲ್ಲರೂ ಹೇಳುತ್ತಾರೆ.ಈ ರೇಖೆ ಇದ್ದರೆ ವ್ಯಕ್ತಿಯು ತನ್ನ ಜೀವನದಲ್ಲಿ(life) ಎಲ್ಲಾ ಸಂತೋಷ (happiness)ಪಡೆಯುತ್ತಾನೆ. ಎಲ್ಲವನ್ನು ಸಾಧಿಸುವವನು ಆಗುತ್ತಾನೆ.

ಈ ರೇಖೆಯು ಜನರ ಕೈಯಲ್ಲಿ (Palmistry) ಇರುವುದು ಬಹಳ ಅಪರೂಪದ ಮಾತು. ಎಲ್ಲಾದರೂ ಈ ರೇಖೆ ಹೊಂದಿರುವವರ ಅದೃಷ್ಟವು ಮಿಂಚಿನಂತೆ ಹೊಳೆಯುತ್ತದೆ. ಈ ಜನರು ತಮ್ಮ ಜೀವನದಲ್ಲಿ ಬಹಳಷ್ಟು ಸಂಪತ್ತು(money), ಖ್ಯಾತಿ(famous), ಗೌರವ (reputation) ಮತ್ತು ಎಲ್ಲವನ್ನೂ ಪಡೆಯುತ್ತಾರೆ. ಹಾಗಾದರೆ ವಿಷ್ಣು ರೇಖೆ ಯನ್ನು ಹೊಂದಿರುವವರ ಅದೃಷ್ಟ ಯಾವ ರೀತಿ ಇದೆ ನೋಡಿ.

ಅಂಗೈಯಲ್ಲಿ ವಿಷ್ಣು ರೇಖೆ ಎಲ್ಲಿರುತ್ತದೆ ಎಂದು ನಿಮಗೆ ಗೊತ್ತಾ?

ಅಂಗೈಯಲ್ಲಿರುವ ಹೃದಯ ರೇಖೆಯಿಂದ ಹೊರಬರುವ ರೇಖೆಯು ಗುರುಗ್ರಹದ ಪರ್ವತಕ್ಕೆ ಹೋದರೆ ಹೃದಯ ರೇಖೆಯನ್ನು 2 ಭಾಗಗಳಾಗಿ ವಿಂಗಡಿಸಲಾಗಿದೆ, ಆಗ ಅದನ್ನು ವಿಷ್ಣು ರೇಖೆ ಎಂದು ಕರೆಯಲಾಗುತ್ತದೆ. ಈ ವಿಷ್ಣು ರೇಖೆಯು ಜನರ ಜೀವನದಲ್ಲಿ ತುಂಬಾ ಮಂಗಳಕರವಾಗಿದೆ. ವಿಷ್ಣು ದೇವರು ಈ ರೇಖೆ ಹೊಂದಿರುವ ಜನರನ್ನು ಯಾವಾಗಲೂ ಆಶೀರ್ವದಿಸುತ್ತಾನೆ ಮತ್ತು ಅದೃಷ್ಟವು ಪ್ರತಿ ಹಂತದಲ್ಲೂ ಇವರನ್ನು ಕೈ ಹಿಡಿಯುತ್ತ ಹೋಗುತ್ತದೆ. ಕೈಯಲ್ಲಿ ವಿಷ್ಣು ರೇಖೆ ಹೊಂದಿರುವ ಜನರು ಯಾವುದೇ ಒಂದು ಕೆಲಸವನ್ನು ಪ್ರಾರಂಭಿಸುವಾಗ ಅದರಲ್ಲಿ ಯಶಸ್ಸನ್ನೇ ಹೊಂದುತ್ತಾರೆ.

ಆದರೆ ಇದರಲ್ಲಿಯೂ ಅಸ್ಪಷ್ಟ ವಿಷ್ಣು ರೇಖೆಯು ಜನರಿಗೆ ಶುಭ ಫಲಿತಾಂಶ ನೀಡುವುದಿಲ್ಲ ಇದರಿಂದಲೂ ಜನರ ಜೀವನದಲ್ಲಿ ಕಂಟಕ ಎದುರಾಗಬಹುದು.

ವಿಷ್ಣು ರೇಖೆ ಹೊಂದಿರುವವನು ಉನ್ನತ ಸ್ಥಾನ & ಅಪಾರ ಪ್ರತಿಷ್ಠೆ ಹೊಂದುತ್ತಾನೆ.

ಕೈಯಲ್ಲಿ ವಿಷ್ಣು ರೇಖೆ ಇದ್ದರೆ ಆ ವ್ಯಕ್ತಿ ಯಾವುದೇ ಕ್ಷೇತ್ರದಲ್ಲಿ ಹೋಗಿ ಯಾವುದೇ ಕೆಲಸಕ್ಕೆ ಕೈ ಹಾಕಿದರೂ, ಅದರಲ್ಲಿ ಅವನು ಮುನ್ನಡೆ ಸಾಧಿಸುತ್ತಾನೆ ಮತ್ತು ಯಶಸ್ಸನ್ನು ಸಾಧಿಸುತ್ತಾನೆ. ವಿಷ್ಣು ರೇಖೆಯನ್ನು ಹೊಂದಿರುವವರು ತುಂಬಾ ಧಾರ್ಮಿಕರು ಮತ್ತು ಉತ್ತಮವಾದ ವರ್ತನೆ ಹೊಂದಿರುತ್ತಾರೆ. ಸದಾ ಪ್ರಾಮಾಣಿಕತೆಯ ಹಾದಿಯಲ್ಲಿ ನಡೆಯುತ್ತಾರೆ. ಯಾವಾಗಲೂ ಪ್ರಾಮಾಣಿಕರಾಗಿರುತ್ತಾರೆ.

ಈ ಶುಭ ರೇಖೆಯನ್ನು ಹೊಂದಿರುವ ಜನರು ತಮ್ಮ ಜೀವನದಲ್ಲಿ (life) ಉನ್ನತ ಸ್ಥಾನ ಪಡೆಯುತ್ತಾರೆ. ಅವರು ಸಾಕಷ್ಟು ಗೌರವವನ್ನು ಗಿಟ್ಟಿಸಿಕೊಳ್ಳುತ್ತಾರೆ ಮತ್ತು ಜನಪ್ರಿಯತೆ ಪಡೆಯುತ್ತಾರೆ. ಅವರು ಜೀವನದಲ್ಲಿ ಅಂದುಕೊಳ್ಳದಷ್ಟು ಶ್ರೀಮಂತರಾಗುತ್ತಾರೆ ಎಂಬುದು ಸ್ಪಷ್ಟವಾಗಿದೆ. ಇವರಿಗೆ ಯಾವುದೇ ಆರ್ಥಿಕ ರೀತಿಯ ತೊಂದರೆ ಎದುರಾಗುವುದಿಲ್ಲ. ಹಾಗೂ ಯಾವುದೇ ದೊಡ್ಡ ಮಟ್ಟದ ಆರೋಗ್ಯದ ಸಮಸ್ಯೆಯು ಎದುರಾಗುವುದಿಲ್ಲ. ಇವರು ಧೈರ್ಯ ಮತ್ತು ಶಕ್ತಿಶಾಲಿಯಾಗಿ ಇರುತ್ತಾರೆ. ಹೀಗಾಗಿಯೇ ಅವರು ಸವಾಲುಗಳಿಗೆ ಹೆದರುವುದಿಲ್ಲ ಮತ್ತು ಪ್ರತಿ ಸಂದರ್ಭದಲ್ಲೂ ಕಷ್ಟಗಳನ್ನು ಸಹಿಸಿಕೊಳ್ಳುತ್ತಾರೆ. ಈ ಕಾರಣಕ್ಕೆ ಜನರು ವಿಷ್ಣು ರೇಖೆ ಇರುವವರನ್ನು ತುಂಬಾ ಇಷ್ಟಪಡುತ್ತಾರೆ.

You may also like

Leave a Comment