Home » ತಿಂಗಳಿಗೆ 500ರೂ. ಉಳಿತಾಯ ಮಾಡಿ 2ಲಕ್ಷಕ್ಕೂ ಅಧಿಕ ಹಣ ನಿಮ್ಮದಾಗಿಸಿಕೊಳ್ಳಿ!

ತಿಂಗಳಿಗೆ 500ರೂ. ಉಳಿತಾಯ ಮಾಡಿ 2ಲಕ್ಷಕ್ಕೂ ಅಧಿಕ ಹಣ ನಿಮ್ಮದಾಗಿಸಿಕೊಳ್ಳಿ!

0 comments

ಉಳಿತಾಯ ಎಂಬುದು ಮನುಷ್ಯನ ಅವಿಭಾಜ್ಯ ಅಂಗ ಎಂದರೆ ತಪ್ಪಾಗಲಾರದು. ಯಾಕಂದ್ರೆ, ಇಂದಿನ ದುಬಾರಿ ದುನಿಯಾದಲ್ಲಿ ಉಳಿತಾಯ ಎಂಬುದು ಇಲ್ಲದೆ ಹೋದರೆ ಬದುಕೇ ಕಷ್ಟ ಎನ್ನುವ ಮಟ್ಟಿಗೆ ತಲುಪಿದೆ. ಇಂತಹ ಹೂಡಿಕೆಗಾಗಿಯೇ ಹಲವು ಯೋಜನೆಗಳು ಕೂಡ ಜಾರಿಯಲ್ಲಿದೆ. ಅವುಗಳಲ್ಲಿ ಸಣ್ಣ ಉಳಿತಾಯ ಯೋಜನೆಗಳಾದ ಪಿಪಿಎಫ್ (PPF), ಹಿರಿಯ ನಾಗರಿಕರ ಉಳಿತಾಯ ಯೋಜನೆ, ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ, ಸುಕನ್ಯಾ ಸಮೃದ್ಧಿ ಯೋಜನೆ ಕೂಡ ಸೇರಿದೆ.

ಕೇಂದ್ರ ಸರ್ಕಾರ ಈಗಾಗಲೇ ಹೆಣ್ಣು ಮಕ್ಕಳಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲಿ 2015 ರಲ್ಲಿ ಆರಂಭವಾದ ಸುಕನ್ಯಾ ಸಮೃದ್ಧಿ ಎನ್ನುವ ಯೋಜನೆಯೂ ಒಂದಾಗಿದ್ದು, ಹೆಣ್ಣುಮಕ್ಕಳ ಭವಿಷ್ಯವನ್ನು ಭದ್ರಪಡಿಸಲು ಪೋಷಕರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯನ್ನು ಜಾರಿಗೆ ತಂದಿದ್ದು, ಹೆಚ್ಚಾಗಿ ಈ ಯೋಜನೆ ಅಪ್ರಾಪ್ತ ಹೆಣ್ಣು ಮಕ್ಕಳನ್ನು ಕೇಂದ್ರಿಕರಿಸಿದೆ. ಸಣ್ಣ ಉಳಿತಾಯ ಯೋಜನೆಗಳಿಗೆ ಬೆಂಬಲ ನೀಡುವ ಸಲುವಾಗಿ ಭಾರತ ಸರ್ಕಾರ ಈ ಯೋಜನೆ ಪ್ರಾರಂಭಿಸಿದೆ. ಈ ಯೋಜನೆಯು ಯಾವುದೇ ಅಧಿಕೃತ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್‌ನಲ್ಲಿ ಸುಕನ್ಯಾ ಸಮೃದ್ಧಿ ಖಾತೆಯನ್ನು ತೆರೆಯಬಹುದು. 10 ವರ್ಷ ವಯಸ್ಸಿನ ಒಳಗಿನ ಹೆಣ್ಣುಮಕ್ಕಳ ಪೋಷಕರಿಗೆ ಅವಕಾಶ ನೀಡುತ್ತದೆ.10 ವರ್ಷಗಳ ಕಾಲ ಹೂಡಿಕೆ ಮಾಡಬಹುದು. ಅಥವಾ ಒಂದೇ ಬಾರಿ ಹಣ ಠೇವಣಿ ಇಡಬಹುದು. 10 ವರ್ಷದ ನಂತರ ಆ ಹಣದ ಮೇಲೆ ಬಡ್ಡಿ ಸೇರಿ ಹೆಣ್ಣು ಮಕ್ಕಳಿಗೆ ದೊಡ್ಡ ಮೊತ್ತ ಲಭಿಸುತ್ತದೆ

ಈ ಯೋಜನೆ ಮೂಲಕ ತಿಂಗಳಿಗೆ 500 ರೂ. ಉಳಿತಾಯ ಮಾಡಿ 2ಲಕ್ಷದವರೆಗೂ ಹಣ ಪಡೆಯಬಹುದಾಗಿದೆ. ಹೌದು. 250 ರೂ.ಗಳೊಂದಿಗೆ ಸುಕನ್ಯಾ ಸಮೃದ್ಧಿ ಖಾತೆಯನ್ನು ತೆರೆಯಿರಿ. ಮೊದಲ ತಿಂಗಳಿಗೆ ರೂ.250 ಪಾವತಿಸಿ. ಅದರ ನಂತರ ನೀವು ಪ್ರತಿ ತಿಂಗಳು 500 ರೂ. ಹೀಗಾಗಿ ವಾರ್ಷಿಕ ಠೇವಣಿ ಮೊತ್ತ 6,000 ರೂ. ಮಗಳಿಗೆ ಒಂದು ವರ್ಷವಾದಾಗ ಖಾತೆ ತೆರೆದರೆ ಆಕೆಗೆ 22 ವರ್ಷ ತುಂಬುವ ವೇಳೆಗೆ ಹೂಡಿಕೆ 90 ಸಾವಿರ ರೂ. ಇದರ ಮೇಲೆ ರೂ.1,64,606 ಬಡ್ಡಿ ಸಿಗುತ್ತದೆ. ಮೆಚ್ಯೂರಿಟಿ ಸಮಯದಲ್ಲಿ ಒಟ್ಟು ರೂ.2,54,606 ಸಿಗುತ್ತದೆ.

ಸುಕನ್ಯಾ ಸಮೃದ್ಧಿ ಯೋಜನೆಯ ಬಡ್ಡಿ ದರವನ್ನು ತ್ರೈಮಾಸಿಕ ಆಧಾರದ ಮೇಲೆ ಪರಿಶೀಲಿಸಲಾಗುತ್ತದೆ. 2022 ರ ಅಕ್ಟೋಬರ್-ಡಿಸೆಂಬರ್ ಗಾಗಿ ಕೇಂದ್ರವು ಇತ್ತೀಚೆಗೆ ಬಡ್ಡಿದರವನ್ನು ಶೇಕಡಾ 7.6 ಕ್ಕೆ ಇರಿಸಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡಿದ ಮೊತ್ತದ ಮೇಲೆ ಯಾವುದೇ ನಷ್ಟದ ಅಪಾಯವಿಲ್ಲ. ಸ್ಥಿರ ಆದಾಯವನ್ನು ಪಡೆಯಿರಿ. ಇದರಲ್ಲಿ ತಿಂಗಳಿಗೆ ರೂ.500 ಹೂಡಿಕೆ ಮಾಡಿ ರೂ.2.5 ಲಕ್ಷ ಆದಾಯ ಪಡೆಯಬಹುದು.

ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಕನಿಷ್ಠ ಆರಂಭಿಕ ಠೇವಣಿ ರೂ.250 ಆಗಿದೆ. ಇದರಲ್ಲಿ ಪ್ರತಿ ಹಣಕಾಸು ವರ್ಷದಲ್ಲಿ ಕನಿಷ್ಠ ರೂ.250 ಮತ್ತು ಗರಿಷ್ಠ ರೂ. 1.5 ಲಕ್ಷ ಹೂಡಿಕೆ ಮಾಡಬಹುದು. ಹೂಡಿಕೆ ಮಾಡಿದ ಮೊತ್ತವು ರೂ.50 ರ ಗುಣಕಗಳಲ್ಲಿರಬೇಕು. ಠೇವಣಿಯನ್ನು ಒಂದೇ ಬಾರಿಗೆ ಮಾಡಬಹುದು ಅಥವಾ ಮಾಸಿಕ ಆಧಾರದ ಮೇಲೆ ಪಾವತಿಸಬಹುದು. ಕನಿಷ್ಠ ಬ್ಯಾಲೆನ್ಸ್ ಇಲ್ಲದಿದ್ದರೆ 50 ರೂ. ಖಾತೆಯನ್ನು ಡೀಫಾಲ್ಟ್ ಆಗಿ ಪರಿಗಣಿಸಬಹುದು. ಡೀಫಾಲ್ಟ್ ಆಗಿರುವ ಪ್ರತಿ ವರ್ಷಕ್ಕೆ ಕನಿಷ್ಠ ರೂ.250+ ರೂ.50 ಡೀಫಾಲ್ಟ್ ಪಾವತಿಸುವ ಮೂಲಕ ಸೇವೆಗಳನ್ನು ಮುಂದುವರಿಸಬಹುದು. ಖಾತೆ ತೆರೆದ ದಿನಾಂಕದಿಂದ 15 ವರ್ಷಗಳು ಪೂರ್ಣಗೊಳ್ಳುವ ಮೊದಲು ಈ ಅವಕಾಶ ಲಭ್ಯವಿದೆ. ಒಂದು ಕುಟುಂಬದಲ್ಲಿ ಗರಿಷ್ಠ ಇಬ್ಬರು ಹೆಣ್ಣು ಮಕ್ಕಳಿಗೆ ಈ ಖಾತೆಯನ್ನು ತೆರೆಯಬಹುದು. ಅವಳಿ/ತ್ರಿವಳಿ ಮಕ್ಕಳು ಜನಿಸಿದರೆ ಎರಡಕ್ಕಿಂತ ಹೆಚ್ಚು ಖಾತೆಗಳನ್ನು ತೆರೆಯುವ ಸಾಧ್ಯತೆ ಇದೆ. ಈ ಯೋಜನೆಯಲ್ಲಿ ಹೂಡಿಕೆಯ ಅವಧಿ 15 ವರ್ಷಗಳು. 21 ವರ್ಷಗಳಲ್ಲಿ ಮುಕ್ತಾಯ.

You may also like

Leave a Comment