Home » ಕಡಲತೀರದಲ್ಲಿ ಸೀ ಡ್ರಾಗನ್‌ಗಳು ಪತ್ತೆ

ಕಡಲತೀರದಲ್ಲಿ ಸೀ ಡ್ರಾಗನ್‌ಗಳು ಪತ್ತೆ

0 comments

ಆಸ್ಟ್ರೇಲಿಯಾದ ಕಡಲತೀರಗಳಲ್ಲಿ ಹಲವಾರು ಅಸಾಮಾನ್ಯ ಸಮುದ್ರ ಜೀವಿಗಳು ಕೊಚ್ಚಿಕೊಂಡು ಹೋಗುತ್ತಿರುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಇದೀಗ
ಆಸ್ಟ್ರೇಲಿಯಾದಲ್ಲಿ ದಾಖಲೆ ಮಳೆ ಸಂಭವಿಸಿದ ನಂತರ ಈ ವೀಡಿ ಸೀ ಡ್ರಾಗನ್‌ಗಳು ಕಾಣಿಸಿಕೊಂಡಿದೆ. ಅಸಾಮಾನ್ಯ ಆಕಾರ, ವಿಚಿತ್ರ ಬಣ್ಣ ಮತ್ತು ರೋಮಾಂಚಕ ವೈಶಿಷ್ಟ್ಯಗಳಿಂದಾಗಿ ಹೆಚ್ಚಿನ ಜನ ಕುತೂಹಲದಿಂದ ನೋಡುವಂತೆ ಮಾಡುತ್ತಿವೆ.

ಭಾರೀ ಮಳೆ ಸುರಿದ ನಂತರ ಆಸ್ಟ್ರೇಲಿಯಾದ ಸಿಡ್ನಿ ಕಡಲ ತೀರಗಳಲ್ಲಿ ವಿಚಿತ್ರ ಬಣ್ಣದ ಸೀ ಡ್ರಾಗನ್‌ಗಳು ಪತ್ತೆಯಾಗಿವೆ. ಡಜನ್‌ಗಟ್ಟಲೆ ಕಾಣಿಸಿಕೊಂಡಿವೆ. ಆಸ್ಟ್ರೇಲಿಯಾದಲ್ಲಿ ಪೂರ್ವ ಮತ್ತು ದಕ್ಷಿಣ ಕರಾವಳಿಯಲ್ಲಿ ಮಾತ್ರ ಕಂಡು ಬರುವ ಇವು ಭಾರೀ ಮಳೆಯ ಬಳಿಕ ಕ್ರೊನುಲ್ಲಾ, ಮಲಬಾರ್ ಮತ್ತು ಮಧ್ಯ ಕರಾವಳಿಯಲ್ಲಿ ಇವು ಕಂಡು ಬಂದಿವೆ. 

ಸಾಮಾನ್ಯವಾಗಿ ಈ ಸೀ ಡ್ರಾಗನ್‌ಗಳು ತಮ್ಮ ಆವಾಸಸ್ಥಾನದಿಂದ 50 ಮೀ. ದೂರದವವರೆಗೆ ಮಾತ್ರ ಸಂಚಾರ ನಡೆಸುತ್ತವೆ. ಆದರೆ ಇದೀಗ ಕಡಲ ತೀರದವರೆಗೂ ಬಂದಿರುವುದು ಆಶ್ಚರ್ಯವುಂಟು ಮಾಡಿದೆ.‌

You may also like

Leave a Comment