Kaadhal Sandhya: ಡಾ. ವಿಷ್ಣುವರ್ಧನ್ ಅಭಿನಯದ ಕೊನೆಯ ಸಿನಿಮಾ “ಆಪ್ತರಕ್ಷಕ” ದಲ್ಲಿ ನಾಗವಲ್ಲಿ ಪಾತ್ರದಲ್ಲಿ ಅದ್ಭುತವಾಗಿ ನಟಿಸಿ ಕನ್ನಡಿಗರಿಗೂ ಪರಿಚಿತರಾಗಿರುವ, ತಮಿಳು ಚಿತ್ರರಂಗದ ಖ್ಯಾತ ನಟಿ ಕಾದಲ್ ಸಂಧ್ಯಾ (Kaadhal Sandhya) ಅವರು ಸಿನಿಮಾದಿಂದ ಅಂತರ ಕಾಯ್ದುಕೊಂಡು ವೈವಾಹಿಕ ಜೀವನ ಮತ್ತು ಬಿಜಿನೆಸ್ನಲ್ಲಿ ಬಿಜಿಯಾಗಿದ್ದಾರೆ. ಇದೀಗ ಸಂಧ್ಯಾ ಒಡೆತನ ರೆಸಾರ್ಟ್ ಬಗ್ಗೆ ಶಾಕಿಂಗ್ ಮಾಹಿತಿ ಬೆಳಕಿಗೆ ಬಂದಿದೆ.
ಕೂವತ್ತೂತು ಪರಮಕುಡಿಯಲ್ಲಿ ಸಂಧ್ಯಾ ಮತ್ತವರ ಪತಿ ವೆಂಕಟೇಶ್ ಪರ್ಲ್ ಬೀಚ್ ರೆಸಾರ್ಟ್ ನಡೆಸುತ್ತಿದ್ದಾರೆ. ಈ ಐಶಾರಾಮಿ ರೆಸಾರ್ಟ್‌ನಲ್ಲಿ ರೂಮ್ ಬಾಯ್ ಮಾಡಿದ ಹೀನಕೃತ್ಯವೀಗ ಬೆಳಕಿಗೆ ಬರುತ್ತಿದ್ದಂತೆ, ಪ್ರವಾಸಿಗರು ಅತ್ತ ಸುಳಿಯುತ್ತಿಲ್ಲ. ಹಾಗಾದರೆ ಅಷ್ಟಕ್ಕೂ ಆಗಿದ್ದೇನು?
ಹೌದು, ರೂಮ್ ಬಾಯ್ ಮಾಡಿದ ನೀಚತನದಿಂದ ಸಂಧ್ಯಾ ಅವರ ರೆಸಾರ್ಟ್ಗೆ ಕೆಟ್ಟ ಹೆಸರು ಬಂದಿದೆ. ಅತಿಥಿಗಳಾಗಿ ಬಂದಿದ್ದ ರಾಮಚಂದ್ರನ್ ಮತ್ತು ಅವರ ಗರ್ಲ್ಫ್ರೆಂಡ್, ವಿಲ್ಲಾದಲ್ಲಿ ಉಳಿದುಕೊಂಡಿದ್ದರು. ಇಬ್ಬರು ಮದ್ಯಪಾನ ಮಾಡಿ ಮಲಗಿದ್ದರು.
ಈ ವೇಳೆ ರೆಸಾರ್ಟ್ನಲ್ಲಿದ್ದ ರೂಮ್ ಬಾಯ್ ಸುಭಾಷ್, ನಕಲಿ ಕೀ ಅನ್ನು ಬಳಸಿ ರೂಮ್ ಒಳಗೆ ಪ್ರವೇಶಿಸಿದ್ದಾನೆ. ಇಬ್ಬರು ಕಂಠಪೂರ್ತಿ ಕುಡಿದು ಪ್ರಜ್ಞೆಯಿಲ್ಲದೆ ಬಿದ್ದಿರುವುದನ್ನು ಗಮನಿಸಿದ ಸುಭಾಷ್, ರಾಮಚಂದ್ರನ್ ಗರ್ಲ್ಫ್ರೆಂಡ್ ಜೊತೆ ಅಸಭ್ಯವಾಗಿ ವರ್ತಿಸಿದ್ದು, ಈ ವೇಳೆ ರಾಮಚಂದ್ರನ್ ಗರ್ಲ್ಫ್ರೆಂಡ್ ರೂಮ್ ಬಾಯ್ನನ್ನು ನೋಡಿ ಜೋರಾಗಿ ಕೂಗಿಕೊಂಡಿದ್ದಾಳೆ. ಇದರಿಂದ ಗಾಬರಿಗೊಂಡ ಸುಭಾಷ್ ಏನು ಮಾಡಬೇಕೆಂದು ತಿಳಿಯದೇ ಮಂಚದ ಅಡಿಯಲ್ಲಿ ಅವಿತುಕೊಂಡನು.
ಈ ವಿಚಾರ ತಿಳಿಯುತ್ತಿದ್ದಂತೆ, ರಾಮಚಂದ್ರ ಮತ್ತವರ ಸ್ನೇಹಿತರು ಸುಭಾಷ್‌ನನ್ನು ಹಿಡಿದು ಥಳಿಸಿದ್ದಾರೆ. ಪೊಲೀಸರಿಗೂ ಮಾಹಿತಿ ನೀಡಿ ಅವರಿಗೆ ಒಪ್ಪಿಸಿದ್ದಾರೆ. ವಿಚಾರಣೆ ನಡೆಸಿದ ಬಳಿಕ ಮತ್ತಷ್ಟು ಮಗದಷ್ಟು ಶಾಕಿಂಗ್ ವಿಚಾರಗಳನ್ನು ಸುಭಾಷ್ ಬಾಯಿಬಿಟ್ಟಿದ್ದಾನೆ.
ಹೌದು, ರಾಮಚಂದ್ರನ್ ಗರ್ಲ್ಫ್ರೆಂಡ್ ಸೇರಿದಂತೆ ಸುಮಾರು 50 ಮಹಿಳೆಯರ ಬೆತ್ತಲೆ ವಿಡಿಯೋಗಳನ್ನು ಸೆರೆಹಿಡಿದಿರುವುದಾಗಿ ಒಪ್ಪಿಕೊಂಡಿದ್ದಾನೆ. ಇಷ್ಟೇ ಅಲ್ಲದೆ, ಸ್ವಿಮ್ಮಿಂಗ್ಪೂಲ್ನಲ್ಲಿ ಮಹಿಳೆಯರು ಎಂಜಾಯ್ ಮಾಡುತ್ತಿರುವ ವಿಡಿಯೋಗಳನ್ನು ಸುಭಾಷ್ ರೆಕಾರ್ಡ್ ಮಾಡಿದ್ದಾನೆ. ಈ ಕೃತ್ಯದ ಹಿನ್ನೆಲೆಯಲ್ಲಿ ಸುಭಾಷ್ ವಿರುದ್ಧ ಕೇಸ್ ದಾಖಲಿಸಿಕೊಳ್ಳಲಾಗಿದೆ.
ಈ ವಿಚಾರ ಇದೀಗ ಕೋಲಾಹಲವನ್ನೇ ಎಬ್ಬಿಸಿದ್ದು, ಸಂಧ್ಯಾ ಅವರ ರೆಸಾರ್ಟ್ ಕಡೆ ಪ್ರವಾಸಿಗಳು ಬರಲು ಹಿಂದೆ ಮುಂದೆ ಯೋಚಿಸುವಂತೆ ಆಗಿದೆ.
ಇದನ್ನು ಓದಿ: Daily life style: ನೀವು ತಿಂದ ತಕ್ಷಣವೇ ಈ ಕೆಲಸಗಳನ್ನು ಮಾಡ್ತಾ ಇದ್ರೆ ಮೊದಲು ತಪ್ಪಿಸಿ
