Home » ಶೇ 81 ರಷ್ಟು ಹುಡಗಿಯರಿಗೆ ಒಂಟಿ ಜೀವನವೇ ಬೆಸ್ಟ್ ಅಂತೆ!! ಇವ್ರಿಗೆ ಮದುವೆಯಾಗಲೂ ಸ್ವಲ್ಪವೂ ಇಷ್ಟವಿಲ್ಲಂತೆ!! ಸಮೀಕ್ಷೆಯ ವರದಿಯೊಂದು ಕೊಡ್ತು ಶಾಕಿಂಗ್ ನ್ಯೂಸ್!!

ಶೇ 81 ರಷ್ಟು ಹುಡಗಿಯರಿಗೆ ಒಂಟಿ ಜೀವನವೇ ಬೆಸ್ಟ್ ಅಂತೆ!! ಇವ್ರಿಗೆ ಮದುವೆಯಾಗಲೂ ಸ್ವಲ್ಪವೂ ಇಷ್ಟವಿಲ್ಲಂತೆ!! ಸಮೀಕ್ಷೆಯ ವರದಿಯೊಂದು ಕೊಡ್ತು ಶಾಕಿಂಗ್ ನ್ಯೂಸ್!!

by ಹೊಸಕನ್ನಡ
0 comments

ಭಾರತದಲ್ಲಿ ಹಲವಾರು ವಿಚಾರವಾಗಿ ಸಮೀಕ್ಷೆಗಳು ನಡೆಯುತ್ತವೆ. ಚುನಾವಣೆ, ಜನಸಂಖ್ಯೆ, ಜಾತಿ ಹೀಗೆ ಇತ್ಯಾದಿಗಳಲ್ಲಿ. ಆದರೀಗ ಮದುವೆಯ ವಿಷಯವಾಗಿ ಸಮೀಕ್ಷೆಯೊಂದು ನಡೆದಿದೆ. ಹೌದು, ಪ್ರಸ್ತುತ ಭಾರತದಲ್ಲಿ ಮದುವೆಯ ಸೀಸನ್ ನಡೆಯುತ್ತಿದ್ದು, ಪ್ರತಿ ನಗರದಲ್ಲಿ ಅನೇಕ ಕಲ್ಯಾಣ ಮಂಟಪಗಳು ಮತ್ತು ಹೋಟೆಲ್’ಗಳನ್ನ ಕಾಯ್ದಿರಿಸಲಾಗಿದೆ. ಹಾಗಾಗಿ ಕುತೂಹಲಕ್ಕೆಂಬಂತೆ ಇದನ್ನು ನಡೆಸಿದ್ದಾರೆ. ಇಂಟ್ರೆಸ್ಟಿಂಗ್ ಏನೆಂದರೆ ಈ ಸರ್ವೇಯಲ್ಲಿ ಹೆಚ್ಚಾಗಿ ಹುಡುಗಿಯರೇ ಭಾಗಿಯಾಗಿದ್ದು, ಅವರೆಲ್ಲರೂ ನೀಡಿದ ಉತ್ತರ ಎಲ್ಲರನ್ನೂ ಆಶ್ಚರ್ಯಗೊಳಿಸಿದೆ.

ದೇಶದಲ್ಲಿ 81 ಪ್ರತಿಶತದಷ್ಟು ಹುಡುಗಿಯರು ಮದುವೆಯಾಗಲು ಬಯಸುವುದಿಲ್ಲ ಎಂದು ಸಮೀಕ್ಷೆಯೊಂದು ಹೇಳಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದೆ. ಸುದ್ದಿ ವೆಬ್ಸೈಟ್ ಐಎಎನ್‌ಎಸ್ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಡೇಟಿಂಗ್ ಅಪ್ಲಿಕೇಶನ್ ಬಂಬಲ್ ಸಮೀಕ್ಷೆ ನಡೆಸಿದ ಈ ಸಮೀಕ್ಷೆಯಲ್ಲಿ ಜನರಿಗೆ ಮದುವೆ ಮತ್ತು ಸಂಬಂಧಗಳ ಬಗ್ಗೆ ಅನೇಕ ಪ್ರಶ್ನೆಗಳನ್ನ ಕೇಳಲಾಯಿತು. ಅದರಲ್ಲಿ 81 ಪ್ರತಿಶತದಷ್ಟು ಹುಡುಗಿಯರು ಮದುವೆಯ ಪ್ರಶ್ನೆಗೆ ಉತ್ತರಿಸಿದ್ದು ಮದುವೆಯಿಲ್ಲದೇ ತಮ್ಮ ಜೀವನವನ್ನ ನಡೆಸಲು ಹಾಗೂ ಸದೃ ಒಂಟಿಯಾಗಿರಲು ಇಷ್ಟಪಡುತ್ತಾರೆ ಎಂದು ಹೇಳಿರುವುದಾಗಿ ತಿಳಿದುಬಂದಿದೆ.

ಹಿಂದೆಲ್ಲ ಮದುವೆಯಾದವರು ಏಳು ಜನ್ಮಗಳಲ್ಲೂ ಜೊತೆಯಾಗಿರ್ಬೇಕು ಅನ್ನೋ ಆಸೆಯನ್ನು ಹೊಂದಿದ್ರು. ಆದ್ರೀಗ ಅದು ಏಳು ವರ್ಷಗಳು ಬಿಡಿ ಮದುವೆಯ ಹೆಸರೇಳಿದ್ರೆ ಹುಡುಗಿಯರು ದೂರ ಓಡುವಂತಾಗಿದ್ದಾರೆ. ಈ ಸಮೀಕ್ಷೆಯಲ್ಲಿ ಹುಡುಗಿಯರು ಹೇಳಿದ ಪ್ರಕಾರ ಮದುವೆಯ ನಂತರ ಒಬ್ಬ ಹುಡುಗ ಮತ್ತು ಹುಡುಗಿ ಸಂಬಂಧವನ್ನು ಬೆಸೆಯುವ ಸಲುವಾಗಿ ಜೀವನಪರ್ಯಂತ ಒಟ್ಟಿಗೆ ವಾಸಿಸುತ್ತಾರೆ. ಇದು ತಮಗೆ ಸ್ವಾತಂತ್ರವನ್ನು ಕೊಡುವುದಿಲ್ಲ. ಎಲ್ಲದಕ್ಕೂ ಬೇರೊಬ್ಬರನ್ನು ಅವಲಂಬಿತರಾಗಬೇಕಾಗುತ್ತೆ. ಹಾಗಾಗಿ ಮದುವೆ ಅನ್ನೋ ವಿಚಾರದಲ್ಲಿ ಇಂಟ್ರೆಸ್ಟ್ ಇಲ್ಲ ಎಂದಿದ್ದಾರೆ.

ಅಲ್ಲದೆ, 62 ಪ್ರತಿಶತದಷ್ಟು ಜನರು ತಮ್ಮ ಆದ್ಯತೆಗಳು, ಅಗತ್ಯಗಳು ಮತ್ತು ಅಗತ್ಯಗಳನ್ನು ಬಿಟ್ಟುಕೊಡಲು ಸಾಧ್ಯವಿಲ್ಲ ಎಂದು ಹೇಳಿದ್ದು, ನಾವು ಏಕಾಂಗಿಯಾಗಿ ಹೆಚ್ಚು ಆರಾಮದಾಯಕ ಮತ್ತು ಸಂತೋಷವನ್ನ ಅನುಭವಿಸುತ್ತೇವೆ ಎಂದು ಹೇಳಿದ್ದಾರೆ. ಜೊತೆಗೆ 83 ಪ್ರತಿಶತದಷ್ಟು ಹುಡುಗಿಯರು ಉತ್ತಮ ಸಂಗಾತಿಯನ್ನ ಕಂಡುಕೊಳ್ಳುವವರೆಗೂ ಮದುವೆಯಾಗುವುದಿಲ್ಲ ಎಂದಿದ್ದಾರೆ. ಇನ್ನು ಕೆಲವು ಹುಡುಗಿಯರು ತಮ್ಮ ಅಭಿಪ್ರಾಯ ಹಂಚಿಕೊಂಡು ‘ ಮದುವೆ ಆಗುವ ವಯಸ್ಸು ಆದಾಗ ಮನೆಯಲ್ಲಿ ಪೋಷಕರು, ಸಂಬಂಧಿಕರು ಹಾಕುವ ಒತ್ತಡದಿಂದ ಯೋಚಿಸದೆ ಮದುವೆ ಆಗಬೇಕಾಗುತ್ತೆ. ಇದರಿಂದಾಗಿ ಅನೇಕ ಬಾರಿ ಹುಡುಗರು ಮತ್ತು ಹುಡುಗಿಯರು ಇಷ್ಟವಿಲ್ಲಿದ್ರೂ ಮದುವೆಯಾಗಬೇಕಾಗುತ್ತದೆ. ಇದು ನಮ್ಮ ಭವಿಷ್ಯದ ಜೀವನ. ಹಾಗಾಗಿ ನಾವೂ ಕೂಡ ನಮ್ಮ ಸಂಗಾತಿ ಬಗ್ಗೆ ಯೋಚಿಸಬೇಕು ಅಲ್ಲವೇ’ ಎಂದಿದ್ದಾರೆ.

You may also like

Leave a Comment