Home » ಹಾವಿಗೂ ಓದೋ ಮನಸಾಗಿದೆ!

ಹಾವಿಗೂ ಓದೋ ಮನಸಾಗಿದೆ!

0 comments

ಮಳೆಗಾಲ ಬಂತಂದ್ರೆ ಸಾಕು ಎಲ್ಲಿ ಯಾವ ರೀತಿಲಿ ಹಾವಣ್ಣ ಕಾಣಿಸಿಕೊಳ್ಳುತ್ತಾನೆ ಎಂದು ಹೇಳಲು ಅಸಾಧ್ಯ. ಯಾವುದಾದರು ಸೇಫೆಸ್ಟ್ ಜಾಗದಲ್ಲಿ ಬೆಚ್ಚಗೆ ಕುಳಿತಿರುತ್ತದೆ. ಆದ್ರೆ, ಇಲ್ಲೊಂದು ಕಡೆ ಹಾವಿಗೆ ಓದೋ ಮನಸಾಗಿದೆ. ಹಾಗಾಗಿ ಪುಸ್ತಕದೊಳಗೆ ತನ್ನನ್ನು ತಾನು ಅವಲಂಬಿಸಿಕೊಂಡಿದೆ.

ಇಂತಹ ಒಂದು ಘಟನೆ ಶಿವಮೊಗ್ಗದ ಸಾಗರ ತಾಲೂಕು ತಲವಾಟದ ಮನೆಯೊಂದರಲ್ಲಿ ನಡೆದಿದೆ. ಇದೊಂತರ ಫನ್ನಿ ಅನಿಸಿದರೂ, ಇದರ ಬಗ್ಗೆ ಎಚ್ಚರ ವಹಿಸೋದು ಅಷ್ಟೇ ಮುಖ್ಯ.

ಟೇಬಲ್​ ಸ್ವಚ್ಛ ಮಾಡಲು ಬಂದ ಮನೆಯ ಗೃಹಿಣಿ ವಿದ್ಯಾ, ಅಲುಗಾಡುತ್ತಿದ್ದ ಪುಸ್ತಕ ಕಂಡು ಅನುಮಾನಗೊಂಡು ನೋಡಿದಾಗ ಕಪ್ಪು ಬಣ್ಣದ ಅರಿಶಿಣ ಪಟ್ಟೆಯುಳ್ಳ ಕಟ್ಟಿಗೆ ಹಾವು (ಯೆಲ್ಲೋ ಸ್ಪಾಟೆಡ್​ ವೂಲ್ಫ್​ ಸ್ನೇಕ್​) ಕಂಡುಬಂದಿದೆ. ಟೇಬಲ್​ ಮೇಲೆ ಇಟ್ಟಿದ್ದ ಪುಸ್ತಕದೊಳಗೆ ಹಾವು ಅವಿತುಕೂತಿದೆ.

ತಕ್ಷಣ ನೋಡಿದ ಗೃಹಿಣಿ ಬೆಚ್ಚಿ ಬಿದ್ದಿದ್ದು ಗಾಬರಿಗೊಂಡಿದ್ದಾರೆ. ನಂತರ ಉರುಗ ಪ್ರೇಮಿಗಳನ್ನು ಕರೆಸಿ ಹಾವನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾರೆ. ಬೆಚ್ಚನೆಯ ತಾಣ ಹುಡುಕಿಕೊಂಡು ಹಾವುಗಳು ಮನೆಯೊಳಗೆ ಬರುವುದುಂಟು. ಇವು ವಿಷರಹಿತ ಹಾವಾಗಿದ್ದರೂ ಕಚ್ಚಿದರೆ ಊತ ಬರುತ್ತದೆ ಎಂದು ಉರಗ ಪ್ರೇಮಿ ಗಿರಿಧರ ಕಲಗಾರು ತಿಳಿಸಿದರು. ಒಟ್ಟಾರೆ ಹಾವಿಗೂ ಓದೋ ಮನಸು ಬಂದಿದೆ ಅನ್ನಬೇಕಷ್ಟೆ..

You may also like

Leave a Comment