Home » Spam Call: ಸ್ಪ್ಯಾಮ್ ಕರೆಗಳು ತುಂಬಾ ಕಿರಿ ಕಿರಿ ಅಲ್ವಾ? ಈ ಸಿಂಪಲ್ ಟ್ರಿಕ್ಸ್ ಫಾಲೋ ಮಾಡಿದ್ರೆ ಮತ್ತೆಂದೂ ಕಾಲ್ ಬರಲ್ಲ

Spam Call: ಸ್ಪ್ಯಾಮ್ ಕರೆಗಳು ತುಂಬಾ ಕಿರಿ ಕಿರಿ ಅಲ್ವಾ? ಈ ಸಿಂಪಲ್ ಟ್ರಿಕ್ಸ್ ಫಾಲೋ ಮಾಡಿದ್ರೆ ಮತ್ತೆಂದೂ ಕಾಲ್ ಬರಲ್ಲ

0 comments

 

Spam Call: ದಿನನಿತ್ಯದ ಬಿಡುವಿಲ್ಲದ ಕೆಲಸದ ವೇಳೆ ಪರಿಚಿತರು ಕರೆ ಮಾಡಿದಾಗ ರಿಸೀವ್ ಮಾಡಿ ಮಾತನಾಡುವುದೇ ತುಂಬಾ ಕಷ್ಟದ ಕೆಲಸವಾಗಿರುತ್ತದೆ. ಇದರ ನಡುವೆ ಆಗಾಗ ಸ್ಪ್ಯಾಮ್ ಕರೆಗಳು ಬಂದು ತುಂಬಾ ಕಿರಿಕಿರಿಯನ್ನು ಉಂಟು ಮಾಡುತ್ತವೆ. ಕೆಲವರಂತೂ ಈ ಕರೆಗಳಿಂದ ಬೇಸತ್ತು ಹೋಗಿದ್ದಾರೆ. ಆದರೆ ನೀವು ಈ ಸಿಂಪಲ್ ಟ್ರಿಕ್ಸ್ ಫಾಲೋ ಮಾಡಿದರೆ ಮತ್ತೆಂದು ಕೂಡ ಈ ರೀತಿಯ ಸ್ಪ್ಯಾಮ್ ಕರೆಗಳು ಬರುವುದಿಲ್ಲ.

 

ಹೌದು, ಶೇ 64 ರಷ್ಟು ಭಾರತೀಯರು ಪ್ರತಿದಿನ 3 ಅಥವಾ ಹೆಚ್ಚಿನ ಸ್ಪ್ಯಾಮ್ ಕರೆಗಳನ್ನು ಸ್ವೀಕರಿಸುತ್ತಾರೆ ಎಂದು ಕಂಡುಬಂದಿದೆ. ಟ್ರೂಕಾಲರ್ ಡೇಟಾ ಪ್ರಕಾರ, ಭಾರತವು ಅತ್ಯಧಿಕ ಸ್ಪ್ಯಾಮ್ ಕರೆಗಳನ್ನು ಸ್ವೀಕರಿಸುವ ದೇಶಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಆದರೆ ನೀವು, ನಾವು ಹೇಳುವ ಟ್ರಿಕ್ಸ್ ಯೂಸ್ ಮಾಡಿ ಈ ಕರೆಗಳನ್ನು ತಡೆಯಿರಿ.

 

ಡು ನಾಟ್ ಡಿಸ್ಟರ್ಬ್ (DND) ಆನ್ ಮಾಡಿ

ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (TRAI) ಅನಗತ್ಯ ಕರೆಗಳು ಮತ್ತು ಸಂದೇಶಗಳನ್ನು ತಡೆಯಲು ರಾಷ್ಟ್ರೀಯ ಗ್ರಾಹಕರ ಆದ್ಯತಾ ನೋಂದಣಿ (NCPR) ಸೇವೆಯನ್ನು ಆರಂಭಿಸಿದೆ. ಈ ವ್ಯವಸ್ಥೆಯ ಮೂಲಕ ನೀವು ಟೆಲಿಮಾರ್ಕೆಟರ್‌ಗಳಿಂದ ಅಥವಾ ಯಾವುದೇ ಸ್ಪ್ಯಾಮ್ ಕರೆಗಳಿಂದ ನಿಮ್ಮ ಸಂಖ್ಯೆಯನ್ನು ರಕ್ಷಿಸಬಹುದು.

 

ಟ್ರೂಕಾಲರ್ ಅಥವಾ ಇತರ ಕಾಲ್-ಐಡೆಂಟಿಫಿಕೇಶನ್ ಆಪ್‌ಗಳನ್ನು ಬಳಸಿ

ಟ್ರೂಕಾಲರ್‌ನಂತಹ ಆಪ್‌ಗಳು ಸ್ಪ್ಯಾಮ್ ಕರೆಗಳನ್ನು ಗುರುತಿಸಿ, ಮುಂಚಿತವಾಗಿ ಎಚ್ಚರಿಸುತ್ತವೆ. ಇವುಗಳ ಮೂಲಕ ನೀವು ಶಂಕಾಸ್ಪದ ಸಂಖ್ಯೆಗಳನ್ನು ಸ್ವಯಂಚಾಲಿತವಾಗಿ ಬ್ಲಾಕ್ ಮಾಡಬಹುದು.

 

ಸ್ಪ್ಯಾಮ್ ಕರೆಗಳನ್ನು ರಿಪೋರ್ಟ್ ಮಾಡಿ..

ಯಾವುದೇ ಅನಗತ್ಯ ಅಥವಾ ಕಿರುಕುಳದ ಕರೆ ಬಂದರೆ TRAI ಅಥವಾ ನಿಮ್ಮ ಟೆಲಿಕಾಂ ಸೇವಾಪ್ರದಾತನಿಗೆ ದೂರು ನೀಡಬಹುದು. ಈ ಮೂಲಕ ನೀವು ಸ್ಪ್ಯಾಮ್ ಕರೆಗಳನ್ನು ತಡೆಗಟ್ಟಬಹುದಾಗಿದೆ.

You may also like