Home » Viral Video : ಕೇವಲ 2,100 ರೂ. ಎಣಿಸಲು ಆಗಲಿಲ್ಲ ವರನಿಗೆ ಎಂದು ಮದುವೆ ಕ್ಯಾನ್ಸಲ್‌ ಮಾಡಿದ ವಧು!

Viral Video : ಕೇವಲ 2,100 ರೂ. ಎಣಿಸಲು ಆಗಲಿಲ್ಲ ವರನಿಗೆ ಎಂದು ಮದುವೆ ಕ್ಯಾನ್ಸಲ್‌ ಮಾಡಿದ ವಧು!

0 comments

ಮದುವೆ ಅನ್ನೋದು ಒಬ್ಬರ ಜೀವನದಲ್ಲಿ ಒಂದು ಬಾರಿ ಘಟಿಸುವಂಥಹ ಸುಂದರ ಕ್ಷಣ. ಈ ಸುಂದರ ಕ್ಷಣದ ಸಂದರ್ಭದಲ್ಲಿ ಅನಿರೀಕ್ಷಿತ ಘಟನೆಗಳು ನಡೆದು ವಿವಾಹ ಅರ್ಧಕ್ಕೆ ನಿಂತುಹೋಗಿರುವ ಪ್ರಕರಣಗಳು ಬೇಕಾದಷ್ಟಿವೆ. ಇದೀಗ ಅಂತಹದೇ ಘಟನೆಯೊಂದು ಉತ್ತರ ಪ್ರದೇಶದಲ್ಲಿ ನಡೆದಿದ್ದು, ವಧು ತನಗೆ ಮದುವೆ ಬೇಡ, ವರನನ್ನು ಮದುವೆಯಾಗಲಾರೆ ಎಂದು ಮಂಟಪದಲ್ಲೇ ಮದುವೆ ಕ್ಯಾನ್ಸಲ್ ಮಾಡಿದ್ದಾಳೆ. ಕಾರಣ ಏನಂದ್ರೆ, ವರನಿಗೆ ಕೇವಲ 2,100 ರೂ. ಎಣಿಸಲು ಆಗಲಿಲ್ಲ ಎಂದು ವಧು ಮದುವೆ ಕ್ಯಾನ್ಸಲ್‌ ಮಾಡಿದ್ದಾಳೆ. ಅಲ್ಲಿವರೆಗೂ ತಿಳಿದಿರಲಿಲ್ವಾ? ವರನ ಸಿಕ್ರೆಟ್ ಹೇಗೆ ಬಯಲಾಯಿತು ಅಂತ ನೋಡೋಣ.

ಉತ್ತರ ಪ್ರದೇಶದ ಫರೂಕಾಬಾದ್‌ನಲ್ಲಿ ಈ ಘಟನೆ ನಡೆದಿದ್ದು, ಅಲ್ಲಿನ ನಿವಾಸಿ ವಧು ಮೈನ್‌ಪುರಿಯ ಯುವಕನೊಂದಿಗೆ ವಿವಾಹವಾಗಲಿದ್ದರು. ಮದುವೆಗೆ ಬೇಕಾದ ಸಕಲ ಸಿದ್ಧತೆಯೂ ಆಗಿತ್ತು. ಎರಡೂ ಮನೆಯವರು ಒಪ್ಪಿ ಮದುವೆ ನಡೆಯುತ್ತಿತ್ತು. ಆದರೂ ವಧು ಮದುವೆ ಸಮಾರಂಭದ ಮಧ್ಯದಲ್ಲಿ ತಾನು ಮದುವೆ ಆಗುವುದಿಲ್ಲ ಎಂದು ಕ್ಯಾನ್ಸಲ್ ಮಾಡಿ, ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾಳೆ.

ಮದುವೆ ಸಮಾರಂಭದ ವಿಧಿವಿಧಾನಗಳು ನಡೆಯುತ್ತಿದ್ದವು. ಹಾಗೂ ರಾತ್ರಿ 1 ಗಂಟೆಗೆ ದ್ವಾರಾಚಾರರ ಸಮಾರಾಧನೆಯೂ ಶುರುವಾಯಿತು. ಈ ವೇಳೆ ವರನ ಬಗ್ಗೆ ತಿಳಿದಿರುವ ವ್ಯಕ್ತಿಯೊಬ್ಬ ವಧುವಿನ ಸಹೋದರನ ಬಳಿ ಹೋಗಿ ವರ ಅವಿದ್ಯಾವಂತ, ಅನಕ್ಷರಸ್ಥ ಆತನಿಗೆ ಜ್ಞಾನವಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ಬೇಕಿದ್ದರೆ ನೀವೇ ಪರೀಕ್ಷಿಸಿ ನೋಡಿ, ತಾನು ಸುಳ್ಳು ಹೇಳುತ್ತಿಲ್ಲ ಎಂದು ಹೇಳಿದ್ದಾರೆ. ಇದನ್ನು ತಿಳಿದ ವಧುವಿನ ಸಹೋದರನಿಗೆ ಆಶ್ಚರ್ಯದ ಜೊತೆಗೆ ಕೋಪ ಉಕ್ಕಿ ಬಂದಿದೆ. ಆದರೂ ಸತ್ಯ ಏನೆಂದು ಎಲ್ಲರಿಗೂ ತಿಳಿಯಬೇಕು ಎಂದು ವರನನ್ನು ಪರೀಕ್ಷಿಸಲು ಮುಂದಾಗಿದ್ದಾನೆ.

ವರನ ಬಳಿ ಹೋಗಿ ಆತನಿಗೆ 2,100 ರೂ. ನೀಡಿ ಎಣಿಸುವಂತೆ ವಧುವಿನ ಸಹೋದರ ಹೇಳಿದ್ದಾನೆ. ವರನಿಗೆ ಮೊದಲು ಆಶ್ಚರ್ಯವಾಯಿತು. ಅಲ್ಲದೆ, ಏನೊಂದು ಅರ್ಥವಾಗಲಿಲ್ಲ. ಇಷ್ಟು ಹಣ‌ ಎಣಿಸಲು ಏಕೆ ಕೊಡುತ್ತಿದ್ದಾರೆ ಅಂದುಕೊಂಡರು. ಆದರೆ ಎಷ್ಟು ಎಣಿಸಿದರೂ ಆತನಿಂದ ಸರಿಯಾಗಿ ಹಣ ಎಣಿಸಲು ಸಾಧ್ಯವಾಗಲೇ ಇಲ್ಲ. ವರನಿಗೆ 2100 ರೂ. ಎಣಿಸಲು ಸಾಧ್ಯವಾಗದಿದ್ದಾಗ 10 ರೂ. ನೋಟುಗಳನ್ನು ನೀಡಿ ಎಣಿಸಲು ಹೇಳಲಾಯಿತು. ಆದರೆ ಆತನಿಂದ ಅವುಗಳನ್ನೂ ಎಣಿಸಲು ಸಾಧ್ಯವಾಗಲಿಲ್ಲ.

ತನ್ನ ಸಹೋದರನ ವರ್ತನೆ ವಧುವಿಗೂ ಅಚ್ಚರಿ ಮೂಡಿಸಿತ್ತು. ಆದರೆ ನಂತರ ಸಹೋದರ ಹೇಳುವಾಗಲೇ ಗೊತ್ತಾಗಿದ್ದು, ವರ ಅನಕ್ಷರಸ್ಥ, ಆತನಿಗೆ ಜ್ಞಾನವಿಲ್ಲ, ಅವಿದ್ಯಾವಂತ ಎಂದು. ವಿಷಯ ತಿಳಿದಿದ್ದೇ ತಡ ವಧು ಕೋಪದಿಂದ ಕೆಂಡಾಮಂಡಲವಾದಳು. ಹಾಗೇ ಈ ವಿಷಯ ವಧುವಿನ ಕುಟುಂಬಕ್ಕೂ ಗೊತ್ತಿರಲಿಲ್ಲ. ಸುಳ್ಳು ಹೇಳಿ ವರನ ಕಡೆಯವರು ಮದುವೆಯನ್ನು ನಿಶ್ಚಿಯಿಸಿದ್ದರು. ಆದರೆ ಈ ಸುಳ್ಳು ಅವರಿಗೇ ಮುಳ್ಳಾಯಿತು. ಮದುವೆ ಮನೆಯಲ್ಲಿ ಕೋಲಾಹಲವೇ ಸೃಷ್ಟಿಯಾಯಿತು. ಮಾತಿಗೆ ಮಾತು ಬೆಳೆಯಿತು, ಜಗಳ ಗಗನಕ್ಕೇರಿತು. ಕೊನೆಗೆ ವಧು ತಾನು ಅವಿದ್ಯಾವಂತನನ್ನು ಮದುವೆಯಾಗಲಾರೆ, ಹೆಬ್ಬೆಟ್ಟಿನ ವ್ಯಕ್ತಿಯನ್ನು ನಾನು ಮದುವೆ ಆಗೋದಿಲ್ಲ ಎಂದು ಮದುವೆಯನ್ನೇ ಕ್ಯಾನ್ಸಲ್ ಮಾಡಿದಳು. ಅಲ್ಲದೆ, ವರನ ಸಮೇತ ಮದುವೆ ಮೆರವಣಿಗೆಯನ್ನೇ ವಾಪಸ್ ಕಳುಹಿಸಿದಳು.

You may also like

Leave a Comment