Home » Hasanamba Devi: ಶಕ್ತಿದೇವತೆ ಹಾಸನಾಂಬೆ ಗರ್ಭಗುಡಿಗೆ ಇಂದು ತೆರೆ

Hasanamba Devi: ಶಕ್ತಿದೇವತೆ ಹಾಸನಾಂಬೆ ಗರ್ಭಗುಡಿಗೆ ಇಂದು ತೆರೆ

0 comments

Hasanamba Devi: ಶಕ್ತಿದೇವತೆ, ಐತಿಹಾಸಿಕ ಹಾಸನಾಂಬೆ (Hasanamba Devi) ದೇವಿಯ ದೇವಾಲಯದಲ್ಲಿ (Temple) ಸಾರ್ವಜನಿಕ ದರ್ಶನಕ್ಕೆ ಇದೀಗ ಅಧಿಕೃತವಾಗಿ ತೆರೆ ಬಿದ್ದಿದ್ದು, ಇಂದು ಮಧ್ಯಾಹ್ನ 12 ಗಂಟೆಗೆ ಗರ್ಭಗುಡಿ ಬಾಗಿಲು ಬಂದ್ ಆಗಲಿದೆ.

ಪ್ರತಿ ವರ್ಷ ಒಂದು ಬಾರಿ ಮಾತ್ರ ಭಕ್ತರಿಗೆ ದರ್ಶನ ಕೊಡುವ ಈ ಹಾಸನಾಂಬೆ ದೇವಿ ದೇಗುಲದ ಬಾಗಿಲು ಇಂದು ಬಂದ್ ಮಾಡಿದರೆ ಮುಂದಿನ ವರ್ಷ ಇದೇ ಸಮಯದಲ್ಲಿ ಬಾಗಿಲು ತೆಗೆಯಲಾಗುತ್ತದೆ. ಅಂತೆಯೇ ಕಳೆದ 13 ದಿನಗಳಿಂದ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಇಂದು ಮಧ್ಯಾಹ್ನ 12 ಗಂಟೆಗೆ ದೇಗುಲದ ಗರ್ಭಗುಡಿ ಬಾಗಿಲು ಬಂದ್‌ ಆಗಲಿದೆ.

ಕಳೆದ 13 ದಿನಗಳಿಂದ ಇದುವರೆಗೂ 26 ಲಕ್ಷ ಭಕ್ತರು ಹಾಸನಾಂಬೆ ದರ್ಶನ ಪಡೆದುಕೊಂಡಿದ್ದಾರೆ. ಅಲ್ಲದೆ ಈ ವರ್ಷ ದಾಖಲೆ 22 ಕೋಟಿಗೂ ಹೆಚ್ಚು ಆದಾಯ ಸಂಗ್ರಹವಾಗಿದೆ.

13 ದಿನಗಳಲ್ಲಿ ಭಕ್ತರ ದರ್ಶನದ ಅಂಕಿ-ಸಂಖ್ಯೆ

ದಿನಾಂಕ 10-10-2025 – 0.58 ಲಕ್ಷ

ದಿನಾಂಕ 11-10-2025 – 2.08 ಲಕ್ಷ

ದಿನಾಂಕ 12-10-2025 – 1.45 ಲಕ್ಷ

ದಿನಾಂಕ 13-10-2025 – 2.29 ಲಕ್ಷ

ದಿನಾಂಕ 14-10-2025 – 2.44 ಲಕ್ಷ

ದಿನಾಂಕ 15-10-2025 – 2.47 ಲಕ್ಷ

ದಿನಾಂಕ 16-10-2025 – 2.58 ಲಕ್ಷ

ದಿನಾಂಕ 17-10-2025 – 3.62 ಲಕ್ಷ

ದಿನಾಂಕ 18-10-2025 – 2.17 ಲಕ್ಷ

ದಿನಾಂಕ 19-10-2025 – 1.27 ಲಕ್ಷ

ದಿನಾಂಕ 20-10-2025 – 2.02 ಲಕ್ಷ

ದಿನಾಂಕ 21-10-2025 – 1.50 ಲಕ್ಷ

ದಿನಾಂಕ 22-10-2025 – 1.60 ಲಕ್ಷ

2025ನೇ ಸಾಲಿನಲ್ಲಿ ಹಾಸನಾಂಬೆ ದೇವಿಯನ್ನು ಬರೋಬ್ಬರಿ ಒಟ್ಟು 26,06,691 ಭಕ್ತರು ದರ್ಶನವನ್ನು ಪಡೆದಿದ್ದಾರೆ. 2024ರಲ್ಲಿ 17,47,240 ಭಕ್ತರು ಹಾಸನಾಂಬೆ ದೇವಿಯ ದರ್ಶನವನ್ನು ಪಡೆದಿದ್ದರು.

 

 

You may also like