Home » ಈತನ ಹೊಟ್ಟೆಯೋ ಏನೋ…ಹೊಟ್ಟೆಯಲ್ಲಿತ್ತು 187 ನಾಣ್ಯ | ಬೆಚ್ಚಿಬಿದ್ದ ವೈದ್ಯರು!

ಈತನ ಹೊಟ್ಟೆಯೋ ಏನೋ…ಹೊಟ್ಟೆಯಲ್ಲಿತ್ತು 187 ನಾಣ್ಯ | ಬೆಚ್ಚಿಬಿದ್ದ ವೈದ್ಯರು!

0 comments

ಮನುಷ್ಯನ ಕೆಲವೊಂದು ವರ್ತನೆಗಳನ್ನು ನೋಡಿದಾಗ ಕೇಳಿದಾಗ ಆಶ್ಚರ್ಯ ಆಗುವುದು ಖಂಡಿತ. ಹೌದು ಮನುಷ್ಯ ಆಹಾರದ ಬದಲು ತಿನ್ನಬಾರದ ವಸ್ತುಗಳನ್ನು ತಿನ್ನುವುದು ಆಮೇಲೆ ಪಜೀತಿಗೆ ಸಿಕ್ಕಿಕೊಳ್ಳುವುದು ಕೇಳಿದ್ದೇವೆ ನೋಡಿದ್ದೇವೆ. ಸದ್ಯ ಹೊಟ್ಟೆಯಲ್ಲಿ ನಾಣ್ಯ ಪತ್ತೆಯಾಗುವ ಘಟನೆಗಳ ಬಗ್ಗೆ ಕೇಳಿರಬಹುದು ಆದರೆ ಹೊಟ್ಟೆಯಲ್ಲಿ 187 ಕಾಯಿನ್​ಗಳು ಪತ್ತೆಯಾಗಿವೆ ಅಂದ್ರೆ ನಂಬಲು ಸಾಧ್ಯವೇ.

ಹೌದು ಇಲ್ಲೊಬ್ಬ 58 ವರ್ಷದ ವ್ಯಕ್ತಿಯ ಹೊಟ್ಟೆಯಿಂದ 187 ನಾಣ್ಯಗಳನ್ನು ವೈದ್ಯರು ಯಶಸ್ವಿಯಾಗಿ ಹೊರತೆಗೆದಿದ್ದಾರೆ. ಸದ್ಯ ಎಂಡೋಸ್ಕೋಪಿ ಮೂಲಕ ಬಾಗಲಕೋಟೆಯ HSK ಆಸ್ಪತ್ರೆ ವೈದ್ಯರು ವ್ಯಕ್ತಿಯ ಹೊಟ್ಟೆಯಿಂದ 187 ನಾಣ್ಯಗಳನ್ನು ಹೊರಕ್ಕೆ ತೆಗೆದಿದ್ದಾರೆ ಎಂದು ಮಾಹಿತಿ ಇದೆ.

ಸುಮಾರು 5 ರೂಪಾಯಿಯ 56 ನಾಣ್ಯ, 2 ರೂಪಾಯಿಯ 51 ನಾಣ್ಯ ಹಾಗೂ 1 ರೂಪಾಯಿಯ 80 ನಾಣ್ಯಗಳು ಸೇರಿ ಒಟ್ಟು 187 ನಾಣ್ಯಗಳು ವ್ಯಕ್ತಿಯ ಹೊಟ್ಟೆಯಲ್ಲಿ ಪತ್ತೆಯಾಗಿದೆ.

ವೈದ್ಯರಾದ ಡಾ. ಈಶ್ವರ ಕಲಬುರಗಿ, ಡಾ. ಪ್ರಕಾಶ ಕಟ್ಟಿಮನಿ, ಅರವಳಿಕೆ ತಜ್ಞರಾದ ಡಾ. ಅರ್ಚನಾ, ಡಾ.ರೂಪಾ ಹುಲಕುಂದೆ ಅವರ ತಂಡವು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದೆ.

ಆದರೆ ಹೊಟ್ಟೆಯಲ್ಲಿ ಇಷ್ಟೊಂದು ನಾಣ್ಯಗಳು ಪತ್ತೆಯಾದ ಕಾರಣ ತಿಳಿದುಬಂದಿಲ್ಲ. ಯಾವ ಕಾರಣಕ್ಕೆ ಇಷ್ಟು ಕಾಯಿನ್​ಗಳನ್ನು ಈ ವ್ಯಕ್ತಿ ನುಂಗಿದ್ದ ಎಂಬುದು ನಿಗೂಢವಾಗಿದೆ. ಒಟ್ಟಾರೆ 187 ನಾಣ್ಯಗಳನ್ನು ಹೊಟ್ಟೆಯಿಂದ ಹೊರತೆಗೆದ ವೈದ್ಯರ ತಂಡ ಪ್ರಶಂಸೆಗೆ ಪಾತ್ರವಾಗಿದೆ.

ಇಂತಹ ಘಟನೆಗಳನ್ನು ನೋಡಿದಾಗ ಮೈ ಜುಮ್ ಎನ್ನುವುದು ಖಂಡಿತ. ಸಾಮಾನ್ಯ ಮನುಷ್ಯ ದಿನನಿತ್ಯದ ಆಹಾರವನ್ನು ಲೆಕ್ಕಕ್ಕಿಂತ ಹೆಚ್ಚು ತಿಂದರೆ ಕರಗಿಸಲು ಹರಸಾಹಸ ಪಡುತ್ತಾನೆ ಹಾಗಿರುವಾಗ ಈ ವ್ಯಕ್ತಿ ಕಾಯಿನ್ ನುಂಗಿರುವುದು ವಿಶೇಷವೇ ಸರಿ.

You may also like

Leave a Comment