Home » ಆಲ್ಟೋ ಕಾರಲ್ಲಿ ಬಂದು ಬಲ್ಬ್ ಕದ್ದೊಯ್ಯುತ್ತಿರುವ ಹೈಫೈ ಕಳ್ಳರ ಗ್ಯಾಂಗ್!

ಆಲ್ಟೋ ಕಾರಲ್ಲಿ ಬಂದು ಬಲ್ಬ್ ಕದ್ದೊಯ್ಯುತ್ತಿರುವ ಹೈಫೈ ಕಳ್ಳರ ಗ್ಯಾಂಗ್!

0 comments

ಪ್ರತಿಯೊಂದು ವಿಷಯಕ್ಕೂ ಕಾಲ ಬದಲಾಗಿದೆ ಅಂದ್ರೆ ತಪ್ಪಾಗಲಾರದು. ಯಾಕಂದ್ರೆ, ಇಂದಿನ ಕಾಲವೇ ಹಾಗಾಗಿದ್ದು, ದಿನದಿಂದ ದಿನಕ್ಕೆ ವಿಚಿತ್ರವಾದ ಘಟನೆಗಳು ನಡೆಯುತ್ತಲೇ ಇದೆ. ಇದಕ್ಕೆ ಸಾಕ್ಷಿಯಂತಿದೆ ಈ ಘಟನೆ. ಸಾಮಾನ್ಯವಾಗಿ ನಾವೆಲ್ಲ ಬೆಲೆ ಬಾಳುವ ವಸ್ತುಗಳಾದ ಒಡವೆ, ಹಣ, ವಾಹನಗಳನ್ನು ಕಳ್ಳತನ ಮಾಡೋದನ್ನ ನೋಡಿದ್ದೇವೆ.

ಆದ್ರೆ, ವಿಚಿತ್ರ ಏನಪ್ಪಾ ಅಂದ್ರೆ, ಇಲ್ಲೊಂದು ಕಡೆ ಖತರ್ನಾಕ್ ಕಳ್ಳರ ಗ್ಯಾಂಗ್, ಕಾರಿನಲ್ಲೇ ಬಂದು ಬಲ್ಬ್ ಕಳ್ಳತನ ಮಾಡುತ್ತಿರುವ ದೃಶ್ಯ ವೈರಲ್ ಆಗಿದೆ. ಈ ಘಟನೆ, ಜುಂಜುನುವಿನ ನವಲ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಕೊಲ್ಸಿಯಾ ಗ್ರಾಮದಲ್ಲಿ ಸೋಮವಾರ ತಡರಾತ್ರಿ ನಡೆದಿದೆ.

ರಾಜಸ್ಥಾನದ ಜುಂಜುನುದಲ್ಲಿ ನಡೆದಿರುವ ಕಳ್ಳತನದ ಸಂಪೂರ್ಣ ಕೃತ್ಯ ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಸಿಸಿ ಟಿವಿಯಲ್ಲಿ ಇರುವಹಾಗೆ, ಆಲ್ಟೋ ಕಾರಲ್ಲಿ ಬಂದ ನಾಲ್ವರ ಗುಂಪು ಅಂಗಡಿಗಳ ಹೊರಗೆ ಹಾಕಿದ್ದ ಬಲ್ಬ್ ಗಳನ್ನು ಕದ್ದೊಯ್ದಿದ್ದಾರೆ. ಇಬ್ಬರು ಕಾರಿನಿಂದ ಇಳಿದು ಮೊಬೈಲ್ ಅಂಗಡಿಯ ಹೊರಗಿನ ಬಲ್ಬ್ ಅನ್ನು ಕದಿಯಲು ಪ್ರಯತ್ನಿಸಿದ್ದಾರೆ. ನಂತರ ಅವರಲ್ಲಿ ಒಬ್ಬರು ರಸ್ತೆಯ ಇನ್ನೊಂದು ಬದಿಯಲ್ಲಿರುವ ಮತ್ತೊಂದು ಅಂಗಡಿಯ ಹೊರಗೆ ಇರಿಸಲಾದ ಕುರ್ಚಿಯನ್ನು ಎತ್ತಿಕೊಂಡು ಬಲ್ಬ್ ಅನ್ನು ಕದ್ದಿದ್ದಾರೆ.

ಆಗ ಪಕ್ಕದಲ್ಲಿ ಮಲಗಿದ್ದ ಅಂಗಡಿ ಮಾಲೀಕ ಮಹೇಂದ್ರ ದೂತ್ ಸದ್ದು ಕೇಳಿ ಎಚ್ಚರಗೊಂಡಿದ್ದಾರೆ. ತಕ್ಷಣ ಅವರು ಕೂಗುತ್ತಿದ್ದಂತೆ ಕಳ್ಳರು ಕಾರಿನಲ್ಲಿ ಪರಾರಿಯಾಗಿದ್ದಾರೆ. ಮಹೇಂದ್ರ ಅವರು ಬೆಳಗ್ಗೆ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಕಳ್ಳರು ಬಲ್ಬ್ ಕದ್ದೊಯ್ದಿರುವುದು ಪತ್ತೆಯಾಗಿದೆ. ಒಟ್ಟಾರೆ, ಇಂತಹ ಕಾಲದಲ್ಲಿ ಬಲ್ಬ್ ಗೂ ಕಣ್ಣು ಹಾಕುತ್ತಾರ ಅನ್ನೋದೇ ರೋಚಕ. ಅಷ್ಟಕ್ಕೂ ಆ ಬಲ್ಬ್ ಕಳ್ಳತನದ ಹಿಂದಿರುವ ರಹಸ್ಯ ಮಾತ್ರ ತನಿಖೆ ಬಳಿಕವಷ್ಟೇ ತಿಳಿದು ಬರಬೇಕಿದೆ.

You may also like

Leave a Comment