
1994ರಲ್ಲಿ ಅಮೆರಿಕದ ಓಹಿಯೋದ ಲಿಂಡಾ ಆರ್ಚೇಡ್ ಎಂಬ ಮಹಿಳೆಯೊಬ್ಬಳು ಒಟ್ಟು 3 ಭ್ರೂಣಗಳನ್ನು ಶೇಖರಿಸಿಟ್ಟಿದ್ದಳು. ನಂತರ ಕೆಲ ವರ್ಷಗಳ ಬಳಿಕ ಮಕ್ಕಳಾಗದ ಪೋಷಕರಿಗೆ ಈ ಭ್ರೂಣಗಳನ್ನು ದಾನ ಮಾಡಲು ಆಕೆ ನಿರ್ಧರಿಸಿದಳು. 2 ವರ್ಷಗಳ ಹಿಂದೆ, 2023ರಲ್ಲಿ ಲಿಂಡ್ಲೆ – ಟಿಮ್ ದಂಪತಿಗೆ ಈ 3 ಭ್ರೂಣಗಳನ್ನು ದಾನ ಮಾಡಲಾಯಿತು. ಇವುಗಳಲ್ಲಿ ಒಂದು ಭ್ರೂಣವನ್ನು ಯಶಸ್ವಿಯಾಗಿ ಲಿಂಡ್ಲೆ ಗರ್ಭದಲ್ಲಿರಿಸಿ ಬೆಳೆಸಲಾಯಿತು. ಅದೀಗ ಮಗುವಾಗಿ ಹುಟ್ಟಿದೆ.
ಅಮೆರಿಕಾದಲ್ಲಿ ಪ್ರತಿಶತ 2ರಷ್ಟು ಮಕ್ಕಳು ಐವಿಎಫ್‌ನಿಂದ ಜನಿಸುತ್ತಿವೆ. ಆದರೆ ಭ್ರೂಣವನ್ನೇ ದತ್ತು ಪಡೆದು ಅದರಿಂದ ಮಗು ಮಾಡಿಕೊಳ್ಳುವ ಪ್ರಕ್ರಿಯೆ ತೀರಾ ಕಡಿಮೆ ಪ್ರಮಾಣದಲ್ಲಿದೆ. ಇದೀಗ ಅಮೆರಿಕದಲ್ಲಿ ಸುಮಾರು 15 ಲಕ್ಷ ಭ್ರೂಣಗಳನ್ನು ಸಂರಕ್ಷಿಸಿಡಲಾಗಿದೆ ಎನ್ನಲಾಗಿದೆ.
31 ವರ್ಷಗಳ ಕಾಲ ಭ್ರೂಣಾವಸ್ಥೆಯಲ್ಲೇ ಇದ್ದ ಕಾರಣ ಇದನ್ನು ಜಗತ್ತಿನ ಅತ್ಯಂತ ಸೀನಿಯರ್ ಶಿಶು ಎಂದು ಕರೆಯಲಾಗುತ್ತಿದೆ. ಮಗು ಆರೋಗ್ಯವಾಗಿದೆ. ಮಗುವಿನ ಪೋಷಕರು ಖುಷಿಯಾಗಿದ್ದು, ಮಗುವಿನ ಭ್ರೂಣವನ್ನು ದಾನ ಮಾಡಿದ ಲಿಂಡಾ ಜತೆ ವೈದ್ಯ ಲೋಕ ಸಂತಸ ವ್ಯಕ್ತಪಡಿಸಿದೆ.
