Home » Actor Darshan: ಹುಲಿ ಉಗುರು ಕೇಸ್‌; ನಟ ದರ್ಶನ್‌ ನಿವಾಸಕ್ಕೆ ಅರಣ್ಯಾಧಿಕಾರಿಗಳ ದೌಡು!!

Actor Darshan: ಹುಲಿ ಉಗುರು ಕೇಸ್‌; ನಟ ದರ್ಶನ್‌ ನಿವಾಸಕ್ಕೆ ಅರಣ್ಯಾಧಿಕಾರಿಗಳ ದೌಡು!!

by Mallika
0 comments

ಹುಲಿ ಉಗುರು ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟ ದರ್ಶನ್‌ ಅವರ ನಿವಾಸಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದಾರೆಂದು ಮಾಧ್ಯವೊಂದು ವರದಿ ಮಾಡಿದೆ.

ಬೆಂಗಳೂರಿನ ಆರ್‌ಆರ್‌ನಗರದಲ್ಲಿರುವ ನಟ ದರ್ಶನ್‌ ಅವರ ನಿವಾಸಕ್ಕೆ ಅರಣ್ಯಾಧಿಕಾರಿಗಳು ಧಾವಿಸಿ ಪರಿಶಿಲನೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ರಾಜ್ಯದಲ್ಲಿ ಹುಲಿ ಉಗುರು ಲಾಕೆಟ್‌ ಭಾರೀ ಸಂಚಲನ ಸೃಷ್ಟಿ ಉಂಟು ಮಾಡಿದ್ದು, ಯಾರೆಲ್ಲ ಬಳಿ ಹುಲಿ ಉಗುರು ಇದೆಯೋ ಅವರಿಗೆಲ್ಲ ನೋಟಿಸ್‌ ನೀಡಿದ್ದೇವೆ ಎಂದು ಬೆಂಗಳೂರಿನಲ್ಲಿ ವನ್ಯಜೀವಿ ಅರಣ್ಯಾಧಿಕಾರಿಗಳು ರವೀಂದ್ರ ಹೇಳಿದ್ದಾರೆ.

ನಟ ದರ್ಶನ್‌ ಕೊರಳಿನಲ್ಲಿ ಹುಲಿ ಉಗುರು ಧರಿಸಿದ್ದು, ಫೋಟೋ ಸಮೇತ ನಾಗೇಶ್‌ ಅವರು ದೂರನ್ನು ಬೆಂಗಳೂರಿನ ಅರಣ್ಯ ಭವನದಲ್ಲಿ ವನ್ಯಜೀವಿ ಸಂರಕ್ಷಣಾ ಅಧಿಕಾರಿಗಳಿಗೆ ದೂರು ನೀಡಿದ್ದರು.

 

You may also like

Leave a Comment