Home » ಸಾವಿಗೂ ಸಿಗಬಹುದು ಇನ್ನು ಮುಂದೆ ಚಿಕಿತ್ಸೆ‌!

ಸಾವಿಗೂ ಸಿಗಬಹುದು ಇನ್ನು ಮುಂದೆ ಚಿಕಿತ್ಸೆ‌!

by Praveen Chennavara
0 comments

ಜನ್ಮ ಮತ್ತು ಮೃತ್ಯು ಇವೆರಡೂ ಸೃಷ್ಟಿಕರ್ತನ ಮಾಯ ಅನ್ನೋ ಮಾತಿದೆ. ಆದರೆ ಇದೀಗ ವಿಜ್ಞಾನಿಗಳು ಸಾವಿಗೂ ಚಿಕಿತ್ಸೆ ಕಂಡುಹಿಡಿಯುವ ಪ್ರಯತ್ನದಲ್ಲಿದ್ದಾರೆ.

ವಿಜ್ಞಾನಿಗಳ ತಂಡ ಸತ್ತ ಹಂದಿಗಳ ರಕ್ತದ ಹರಿವನ್ನು ಪುನಃಸ್ಥಾಪಿಸಿದೆ. ಕೆಲವು ಅಂಗಗಳಲ್ಲಿ ಜೀವಕೋಶದ ಮನಃಸ್ಥಾಪಿಸುವಲ್ಲಿ ಯಶಸ್ವಿಯಾಗಿದೆ. ಕಾರ್ಯವನ್ನು ಸೈನ್ ಜರ್ನಲ್‌ನಲ್ಲಿ ಈ ಅಧ್ಯಯನ ಪ್ರಕಟವಾಗಿದೆ. ಯೇಲ್ ವಿಶ್ವವಿದ್ಯಾಲಯದ ಸಂಶೋಧಕರು, ಸತ್ತ ಜೀವಕೋಶಗಳನ್ನು ಪುನಃಸ್ಥಾಪಿಸಲು ತಂತ್ರಜ್ಞಾನವನ್ನು ಬಳಸಿದ್ದಾರೆ.

ಕಸಿ ಮಾಡಲು ಮಾನವ ಅಂಗಗಳ ಸಂಗ್ರಹಣೆಗೆ ಹೊಸ ಸಾಧ್ಯತೆಗಳನ್ನು, ಆರಾಭಾವವನ್ನು ವಿಜ್ಞಾನಿಗಳು ಮೂಡಿಸಿದ್ದಾರೆ. ಸತ್ತವರನ್ನೂ ಬದುಕಿಸುವ ಕಡೆಗೆ ಈ ಅಧ್ಯಯನವು ಒಂದು ಮೈಲಿಗಲ್ಲು ಎಂದು ಹೇಳಲಾಗುತ್ತಿದೆ. ಸಂಶೋಧಕರು ಬಳಸಿದ ತಂತ್ರಜ್ಞಾನ ಸಾವಿನ ನಂತರ ಅಂಗಗಳು ಹೆಚ್ಚು ಕಾಲ ಉಳಿಯಲು ಸಹಾಯ ಮಾಡುತ್ತದೆ.

ಪ್ರಪಂಚದಾದ್ಯಂತ ಲಕ್ಷಾಂತರ ಜನರಿಗೆ ಇದು ವರದಾನವಾಗಬಹುದು. ಸ್ಕೂಲ್ ಆಫ್ ಮೆಡಿಸಿನ್‌ನ ನರವಿಜ್ಞಾನ ಸಹಾಯಕ ಸಂಶೋಧನಾ ವಿಜ್ಞಾನಿ ಡೇವಿಡ್ ಆಂಡ್ರಿಜೆಕ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಎಲ್ಲಾ ಜೀವಕೋಶಗಳು ತಕ್ಷಣವೇ ಸಾಯುವುದಿಲ್ಲ. ಕೆಲವು ಸೆಲ್ಯುಲರ್ ಕಾರ್ಯವನ್ನು ಮರುಸ್ಥಾಪಿಸಬಹುದು ಎಂದವರು ಹೇಳಿದ್ದಾರೆ.

You may also like

Leave a Comment