Home » Tulasi Vastu Tips : ‘ತುಳಸಿʼಗೆ ಈ ದಿನ ಪೂಜೆ ಮಾಡುವುದು ವಾಸ್ತು ಶಾಸ್ತ್ರದ ಪ್ರಕಾರ ಒಳ್ಳೆಯದಲ್ಲ!

Tulasi Vastu Tips : ‘ತುಳಸಿʼಗೆ ಈ ದಿನ ಪೂಜೆ ಮಾಡುವುದು ವಾಸ್ತು ಶಾಸ್ತ್ರದ ಪ್ರಕಾರ ಒಳ್ಳೆಯದಲ್ಲ!

0 comments
Tulsi Vastu Tips

Tulasi vastu tips : ಹಿಂದೂ ಧರ್ಮದಲ್ಲಿ ತುಳಸಿ ಗಿಡವು ಎಲ್ಲಕ್ಕಿಂತ ಪವಿತ್ರವಾಗಿದೆ. ವೃಂದಾ ಎಂದೂ ಕರೆಯಲ್ಪಡುವ ಹಿಂದೂಗಳು ಇದನ್ನು ಸ್ವರ್ಗದ ಹೆಬ್ಬಾಗಿಲು ಅಥವಾ ದೇವರ ವಾಸಸ್ಥಾನವಾದ ವೈಕುಂಠ ಎಂದು ನಂಬುತ್ತಾರೆ. ತುಳಸಿ ಸಸ್ಯವು ಭಕ್ತರಿಗೆ ದೇವರಿಗೆ ಹತ್ತಿರವಾಗಲು ಅಥವಾ ಮೋಕ್ಷವನ್ನು ಪಡೆಯಲು ಸಹಾಯ ಮಾಡುತ್ತದೆ. ಆದ್ದರಿಂದ ತುಳಸಿ ಭಾರತೀಯ ಪುರಾಣ ಮತ್ತು ಹಿಂದೂ ತತ್ತ್ವಶಾಸ್ತ್ರದಲ್ಲಿ ಗಮನಾರ್ಹವಾದ ಗಿಡಮೂಲಿಕೆಯಾಗಿದೆ. ಇಂಗ್ಲಿಷ್‌ನಲ್ಲಿ ತುಳಸಿ ಗಿಡವನ್ನು ಹೋಲಿ ಬೇಸಿಲ್ ಎಂದು ಕರೆಯಲಾಗುತ್ತದೆ.

ಪವಿತ್ರವಾದ ತುಳಸಿಗೆ (Tulasi vastu tips) ಸಂಬಂಧಿಸಿದಂತೆ ಕೆಲವು ಪ್ರಮುಖ ವಿಚಾರಗಳನ್ನು ತಿಳಿಯುವುದು ಅಗತ್ಯವಾಗಿದೆ.

ವಾಸ್ತು ಶಾಸ್ತ್ರದ ಪ್ರಕಾರ, ಪ್ರತಿ ಭಾನುವಾರ (Sunday ), ಏಕಾದಶಿ ಮತ್ತು ಸೂರ್ಯ ಮತ್ತು ಚಂದ್ರಗ್ರಹಣದ ಸಮಯದಲ್ಲಿ ತುಳಸಿಗೆ ನೀರನ್ನು ಅರ್ಪಿಸಬಾರದು. ಅಲ್ಲದೆ, ಈ ದಿನಗಳಲ್ಲಿ ಮತ್ತು ಸೂರ್ಯ ಮುಳುಗಿದ ನಂತರ ತುಳಸಿ ಎಲೆಗಳನ್ನು ಕೀಳಬಾರದು.

ವಾಸ್ತು ಪ್ರಕಾರ, ಗುರುವಾರ (Thursday ) ತುಳಸಿ ಗಿಡಕ್ಕೆ ಹಸಿ ಹಾಲನ್ನು ಸುರಿಯುವ ಮತ್ತು ಭಾನುವಾರ ಹೊರತುಪಡಿಸಿ ಪ್ರತಿದಿನ ಸಂಜೆ ತುಪ್ಪದ ದೀಪವನ್ನು ಬೆಳಗಿಸುವ ವ್ಯಕ್ತಿಯ ಮನೆಯಲ್ಲಿ ಲಕ್ಷ್ಮಿ ಯಾವಾಗಲೂ ನೆಲೆಸುತ್ತಾಳೆ.

ಅದಲ್ಲದೆ ತುಳಸಿ ಸಸ್ಯವನ್ನು ಲಕ್ಷ್ಮಿ ದೇವಿಯ ರೂಪ ಎಂದು ಪರಿಗಣಿಸಲಾಗುತ್ತದೆ. ಇನ್ನು ಮನೆಯಲ್ಲಿ ನೆಟ್ಟಿರುವ ತುಳಸಿ ಸಸ್ಯವು ನಮಗೆ ಮುಂಬರುವ ಅಹಿತಕರ ಘಟನೆಗಳನ್ನು ಮತ್ತು ಶುಭ ಸಂಕೇತವನ್ನು ಸೂಚಿಸುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.

ಇದನ್ನೂ ಓದಿ : Tulsi plant: ಲಕ್ಷ್ಮೀ ತುಳಸಿ ಗಿಡದ ಪಕ್ಕದಲ್ಲಿ ಬೆಳೆಯುವ ಈ ಸಸ್ಯ ಲಕ್ಷ್ಮೀ-ವಿಷ್ಣು ವಾಸಸ್ಥಾನ !

You may also like

Leave a Comment