Tulsi Remedy : ಹಿಂದೂ(Hindu) ಗ್ರಂಥಗಳಲ್ಲಿ ತುಳಸಿ( Basil) ವಿಶೇಷತೆಯನ್ನು ಬರವಣಿಗೆಯ ಮೂಲಕ ತಿಳಿಸಲಾಗಿದೆ. ಪುರಾತನ ಕಾಲದಿಂದಲೂ ತುಳಸಿಯು ಅತ್ಯಂತ ಮಂಗಳಕರ ಮತ್ತು ತುಳಸಿಯಲ್ಲಿ ಲಕ್ಷ್ಮಿದೇವಿ(Lakshmi), ವಿಷ್ಣು ದೇವರು(Lord Vishnu) ನೆಲೆಸಿದ್ದಾರೆ ಎಂಬ ನಂಬಿಕೆಯಿದೆ. ಹೀಗಾಗಿ, ಹಿಂದೂ ಶಾಸ್ತ್ರದಲ್ಲಿ ಪ್ರತಿನಿತ್ಯ ತುಳಸಿಯನ್ನು ಮನೆಯಲ್ಲಿ ಇಟ್ಟು ಪೂಜಿಸಿದರೆ( Worshipped)ದೇವಿ ಲಕ್ಷ್ಮಿ ಹಾಗೂ ವಿಷ್ಣು ದೇವರು ಭಕ್ತಿಯಿಂದ ಪೂಜಿಸುವವರಿಗೆ ಆಶೀರ್ವದಿಸಿ, ದೇವರ ಕೃಪಾ ಕಟಾಕ್ಷ ಮನೆಯವರ ಮೇಲೆ ಸದಾ ಕಾಲ ಇರುತ್ತದೆ ಎಂಬ ನಂಬಿಕೆಯಿದೆ.
ಜ್ಯೋತಿಷ್ಯ ಶಾಸ್ತ್ರದ (Astrological) ಅನುಸಾರ ತುಳಸಿಯಿಂದ ಅನೇಕ ಪರಿಹಾರಗಳಿದ್ದು, ತುಳಸಿ ಎಲೆಗಳಿಂದ ಉತ್ತಮವಾದ ಆಮ್ಲಜನಕ ಪೂರೈಕೆ ಆಗುತ್ತದೆ. ಅದೃಷ್ಟವು(Good Luck) ಮನೆಯ ಬಾಗಿಲಿಗೆ ಒಲಿದು ಬರುವುದಲ್ಲದೆ ಒಳ್ಳೆಯ ರೀತಿಯಲ್ಲಿ ಹಣ ಅಂತಸ್ತು ಸಂಪಾದಿಸಲು ತುಳಸಿ ನೆರವಾಗುತ್ತದೆ. ಪ್ರತಿದಿನ ತುಳಸಿಯನ್ನು ಮನಃ ಪೂರ್ವಕವಾಗಿ ಪೂಜಿಸಬೇಕು. ಪ್ರತಿನಿತ್ಯ ನೀರನ್ನು(Water) ಅರ್ಪಿಸಬೇಕು ಇದರಿಂದ ಮನೆಯಲ್ಲಿ ಸಮೃದ್ಧಿ ವೃದ್ದಿಯಾಗುತ್ತದೆ. ಮನೆಯಲ್ಲಿ ಸಕಾರಾತ್ಮಕ ಶಕ್ತಿ(Positive Energy) ಹೆಚ್ಚಾಗಿ,ನಕಾರಾತ್ಮಕ ಶಕ್ತಿ (Negativities)ಅನ್ನು ದೂರ ಮಾಡಿ ದುರಾದೃಷ್ಟ ದೂರವಾಗಲೂ ತುಳಸಿ (Tulsi)ನೆರವಾಗುತ್ತದೆ. ಪುರಾಣದ ಪ್ರಕಾರ ಶಾಲಿಗ್ರಾಮವು ತುಳಸಿಯ ಮೂಲದಲ್ಲಿ ನೆಲೆಸಿದ್ದಾರೆ ಎಂದು ಹೇಳಲಾಗಿದೆ.
ತುಳಸಿಯನ್ನು ಪೂಜೆಸುವಾಗ ‘ ಓಂ ನಮೋ ಭಗವತೇ ವಾಸುದೇವಯ ನಮಃ ‘ ಎಂದು ಜಪಿಸಿ ಪೂಜೆ ಮಾಡಬೇಕು. ಹಾಗೂ ಪ್ರತಿದಿನ 108 ಬಾರಿ ಜಪ ಮಾಡಿ ಪೂಜೆ ಸಲ್ಲಿಸಬೇಕು. ಇದರಿಂದ ಮನೆಯ ಸಮಸ್ಯೆಗಳು ಪರಿಹಾರವಾಗುತ್ತದೆ. ಮನೆಯ ಆರ್ಥಿಕ ಸಮಸ್ಯೆಗಳನ್ನು ಪರಿಹರಿಸಲು ತುಪ್ಪದ (Gee) ದೀಪಕ್ಕೆ ಅರಿಶಿಣ ಹಾಕಿ ಉತ್ತರ ದಿಕ್ಕಿಗೆ ದೀಪವನ್ನು ಸಂಜೆ ವೇಳೆ ಇಟ್ಟು ಪೂಜಿಸಬೇಕು. ವಿಷ್ಣುವಿಗೆ ಪ್ರಿಯವಾದ ಬೆಲ್ಲವನ್ನು(Jaggery )ಏಕಾದಶಿಯಂದು (Ekadashi)ತುಳಸಿ(Basil) ಗಿಡಕ್ಕೆ ಅರ್ಪಿಸಿದರೆ ಮನೆಯ ಕಷ್ಟ ಪರಿಹಾರವಾಗುತ್ತದೆ. ಏಕಾದಶಿಯಂದು ತುಳಸಿ ಗಿಡವನ್ನು ಮುಟ್ಟಬಾರದು ಜೊತೆಗೆ ಹಿಟ್ಟಿನಿಂದ ಮಾಡಿದ ದೀಪವನ್ನು ಹಚ್ಚಿ ಪೂಜಿಸಬೇಕು.
ತುಳಸಿ ಎಲೆಯ ಆರೋಗ್ಯಕರ ಪ್ರಾಮುಖ್ಯತೆ :
ತುಳಸಿಯಿಂದ (Tulsi Remedy)ನೈಸರ್ಗಿಕ ಇಮ್ಯುನಿಟಿ ಹೆಚ್ಚಾಗುತ್ತದೆ. ಜ್ವರ(Fever) ಶೀತಕ್ಕೆ (Cold)ಇದರ ಎಲೆ ರಾಮ ಬಾಣ. ಕೆಮ್ಮು ಮತ್ತು ಉಸಿರಾಟ ತೊಂದರೆಯಿದ್ದರೆ ತುಳಸಿ ಎಲೆಯ ಸೇವನೆಯಿಂದ ಈ ಸಮಸ್ಯೆಗಳು (Problems) ಕಡಿಮೆ ಆಗುತ್ತದೆ. ರಕ್ತದ ಒತ್ತಡವನ್ನು ಕಡಿಮೆ ಮಾಡುವುದಲ್ಲದೆ, ಹೃದಯದ (Heart)ಆರೋಗ್ಯಕ್ಕೆ ತುಳಸಿ ಒಳ್ಳೆಯದು. ಬಾಯಿ ಹಾಗೂ ಹಲ್ಲಿನ ಸಮಸ್ಯೆಗೆ ಜೊತೆಗೆ ಚರ್ಮ ಮತ್ತು ಕೂದಲಿನ ಸಮಸ್ಯೆಗೆ ಕೂಡ ತುಳಸಿ ಎಲೆಯಿಂದ ಆರೋಗ್ಯ ಪ್ರಯೋಜನ ಪಡೆದುಕೊಳ್ಳಬಹುದು.
