

ಬೆಳ್ತಂಗಡಿ: ಉಜಿರೆ ಚಾರ್ಮಾಡಿ ರಸ್ತೆಯಲ್ಲಿ ನಾಗೇಶ್ ಕೋಟ್ಯಾನ್ ಮಾಲೀಕತ್ವದ ತಾಜಾ ಮೀನು ಅಂಗಡಿಗೆ ಜ.24 ರಂದು 1130ಕೆಜಿ ತೂಕ ಇರುವ ಮಡಲ್ ಮೀನು ಕಾಣ ಸಿಕ್ಕಿದ್ದು, ಜನ ಈ ಮೀನನ್ನು ನೋಡಲು ಮುಗಿಬಿದ್ದಿದ್ದು, ಜೊತೆಗೆ ಅದರ ಮಾಂಸ ಖರೀದಿ ಮಾಡಲು ಸೇರಿದ್ದರು.
ಮಲ್ಪೆ ಶ್ರೀ ರಾಮಾಂಜನೇಯ ಬೋಟ್‌ನಲ್ಲಿ ಜ.23 ರಂದು ತಡರಾತ್ರಿ ಮೀನು ಬಿದ್ದಿದ್ದು, ಬೆಳಿಗ್ಗೆ ಮೀನು ಈ ಅಂಗಡಿಗೆ ಬರುತ್ತಿದೆ ಎನ್ನುವ ಮಾಹಿತಿ ದೊರಕಿದ ಕೂಡಲೇ ಜನ ಸೇರಿದ್ದರು. ಮಾಜಿ ಸಚಿವ ಬಿ ರಮಾನಾಥ ರೈ ಅವರು ಕಾರ್ಯಕ್ರಮ ನಿಮಿತ್ತ ಅದೇ ದಾರಿಯಲ್ಲಿ ಹೋಗುತ್ತಿದ್ದಾಗ, ಮೀನು ಕಂಡು, ಕಾರು ನಿಲ್ಲಿಸಿ ವೀಕ್ಷಿಸಿದರು.

ಪ್ರಮುಖರಾದ ಜಯಪ್ರಕಾಶ್ ಶೆಟ್ಟಿ ಉಜಿರೆ, ಪ್ರವೀಣ್ ಹಳ್ಳಿಮನೆ ಪತ್ರಕರ್ತ ದಿನೇಶ್ ಕೋಟ್ಯಾನ್ ಸೇರಿ ನೂರಾರು ಮಂದಿ ಮೀನಿನ ಕುರಿತು ಮಾಹಿತಿ ಪಡೆದರು. ಅಂದ ಹಾಗೆ ಈ 1130 ಕೆಜಿ ತೂಕ ಇರುವ ಮೀನು ಒಂದು ಗಂಟೆಯೊಳಗೆ ಜನರು ಖರೀದಿ ಮಾಡಿದ್ದು, ಮೀನಿನ ಮಾಂಸ ಖಾಲಿಯಾಗಿತ್ತು.













