Home » Vastu Tips : ಸೂಜಿ ಮತ್ತು ದಾರವನ್ನು ಈ ದಿಕ್ಕಿನಲ್ಲಿಟ್ಟರೆ ಅಪಾಯ ಖಂಡಿತ!!!

Vastu Tips : ಸೂಜಿ ಮತ್ತು ದಾರವನ್ನು ಈ ದಿಕ್ಕಿನಲ್ಲಿಟ್ಟರೆ ಅಪಾಯ ಖಂಡಿತ!!!

0 comments
Needles and threads

Needles and threads : ಹಿಂದೂ ಧರ್ಮದಲ್ಲಿ (Hinduism) ವಾಸ್ತು ಶಾಸ್ತ್ರಕ್ಕೆ ವಿಶೇಷವಾದ ಮಹತ್ವವಿದೆ. ಹೆಚ್ಚಿನವರು ಪ್ರತಿಯೊಂದು ಸಂದರ್ಭದಲ್ಲೂ ವಾಸ್ತು ನೋಡುತ್ತಾರೆ. ಮನೆ ಕಟ್ಟಬೇಕಾದರೆ ಕೋಣೆ ಯಾವ ದಿಕ್ಕಿನಲ್ಲಿರಬೇಕು? ಬಾಗಿಲು ಯಾವ ದಿಕ್ಕಿನಲ್ಲಿರಬೇಕು? ಇವೆಲ್ಲವನ್ನು ಸರಿಯಾಗಿ ಗಮನಿಸಿ ನಂತರ ಮುಂದುವರೆಯುತ್ತಾರೆ. ಇಲ್ಲವಾದರೆ ಕೆಡುಕಾಗುತ್ತದೆ ಎಂಬ ನಂಬಿಕೆ. ಹಾಗೆಯೇ ಸೂಜಿ ಮತ್ತು ದಾರಕ್ಕೆ ಸಂಬಂಧಿಸಿದಂತೆ ವಾಸ್ತು ನಿಯಮಗಳನ್ನು ಇಲ್ಲಿ ನೀಡಲಾಗಿದೆ. ಸೂಜಿ ಮತ್ತು ದಾರ (needles and threads) ಯಾವ ಜಾಗದಲ್ಲಿರಿಸಬೇಕು ಎಂಬುದರ ಮಾಹಿತಿ ಇಲ್ಲಿದೆ (Vastu Tips).

ಆದರೆ, ದಕ್ಷಿಣ ಅಥವಾ ನೈಋತ್ಯ ದಿಕ್ಕಿನಲ್ಲಿ ಸೂಜಿ ಮತ್ತು ದಾರವನ್ನು (needle and threads) ಇಡುವುದು ಒಳ್ಳೆಯದಲ್ಲ. ಈ ದಿಕ್ಕುಗಳು ನಕಾರಾತ್ಮಕ ಶಕ್ತಿಯ ಮೂಲವಾಗಿದೆ. ಇದರಿಂದ ಅನಾರೋಗ್ಯ ಕಾಡಬಹುದು. ಸಾಲ, ಸಂಕಷ್ಟಗಳು ಎದುರಾಗುತ್ತವೆ. ಹಾಗಾಗಿ ಈ ದಿಕ್ಕಿನಲ್ಲಿ ಇರಿಸಬೇಡಿ.

ಸೂಜಿ ಮತ್ತು ದಾರವನ್ನು ಕೋಣೆಯ ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಇಡುವುದು ಮಂಗಳಕರ. ಈ ದಿಕ್ಕುಗಳು ಸಕಾರಾತ್ಮಕ ಶಕ್ತಿಯನ್ನು ಒದಗಿಸುತ್ತದೆ. ಹಾಗಾಗಿ ಸೂಜಿ ಮತ್ತು ದಾರವನ್ನು ಈ ದಿಕ್ಕಿನಲ್ಲಿ ಇರಿಸಿ.

ಸೂಜಿ ಮತ್ತು ದಾರದ ಎಳೆಗಳನ್ನು ಸ್ವಚ್ಛ ಮತ್ತು ಉತ್ತಮ ಸ್ಥಳದಲ್ಲಿರಿಸಬೇಕು. ವಾಸ್ತು ಶಾಸ್ತ್ರದ (vastu shastra)ಪ್ರಕಾರ, ಶುಚಿತ್ವವಿಲ್ಲದ ಜಾಗಗಳಲ್ಲಿ ಇರಿಸಿದರೆ ನಕಾರಾತ್ಮಕ ಶಕ್ತಿ ಮನೆಯ ಒಳಗೆ ಪ್ರವೇಶಿಸುತ್ತದೆ. ಮನೆಯಲ್ಲಿ ಆರ್ಥಿಕ ಸಮಸ್ಯೆ (financial problem) ಹೆಚ್ಚುತ್ತದೆ.

ಮುಖ್ಯವಾಗಿ ಸೂಜಿ ಮತ್ತು ದಾರವನ್ನು ಬಳಸಿದ ನಂತರ ಅವುಗಳನ್ನು ಸರಿಯಾಗಿ ವಿಲೇವಾರಿ ಮಾಡಬೇಕು. ಇಲ್ಲವಾದರೆ,
ನಕಾರಾತ್ಮಕ ಶಕ್ತಿ ಮನೆಹೊಕ್ಕುತ್ತದೆ. ಸರಿಯಾಗಿ ವಿಲೇವಾರಿ ಮಾಡದಿದ್ದರೆ ಮನೆಗೆ ಸಂಕಷ್ಟ ಬರಬಹುದು. ಕುಟುಂಬದಲ್ಲಿ ಕಲಹ ಉಂಟಾಗುತ್ತದೆ ಎನ್ನಲಾಗಿದೆ.

You may also like

Leave a Comment