ಮದುವೆ ಎಂದರೆ ಎರಡು ಜೋಡಿಗಳ ನಡುವೆ ನಡೆಯುವುದಷ್ಟೇ ಅಲ್ಲ. ಇಲ್ಲಿ ಎರಡು ಕುಟುಂಬಗಳ ನಡುವೆ ಸಂಬಂಧ ಬೆಸೆಯುವ ಘಟನೆ ಇದು. ಹಾಗೆನೇ ಮದುವೆಯ ಕ್ಷಣಗಳು ಎಲ್ಲರಿಗೂ ಅವಿಸ್ಮರಣೀಯ. ಇತ್ತೀಚೆಗೆ ಹಲವು ಮದುವೆಯ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅದರಲ್ಲಿ ಕೆಲವೊಂದು ಕಾಮಿಡಿ ತರಹ ಇದ್ದರೆ ಇನ್ನೂ ಕೆಲವು ಭಾವನಾತ್ಮಕವಾಗಿರುತ್ತದೆ. ಆದರೆ ಇಲ್ಲೊಂದು ಮದುವೆ ವೀಡಿಯೊ ಇದೆ. ಇದು ನಿಜಕ್ಕೂ ವಿಚಿತ್ರ ಎಂದೆನಿಸುತ್ತದೆ. ಹೌದು, ಇಲ್ಲಿ ಮದುವೆಯ ವೇದಿಕೆಯಲ್ಲಿ ಕುಳಿತಿದ್ದ ವರನಿಗೇ ನಾದಿನಿ ಮುತ್ತು ನೀಡಿದ್ದಾಳೆ.
ವಿಚಿತ್ರವಾದರೂ ಈ ದೃಶ್ಯ ನಿಜ. ಹಾಗೂ ಇದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಮದುವೆ ಸಮಾರಂಭದಲ್ಲಿ ಫೋಟೋ ಸೆಷನ್ ನಡೆಯುತ್ತಿರುವಾಗ ವಧು ವರನ ಪಕ್ಕದಲ್ಲಿ ಕುಳಿತಿರುವ ನಾದಿನಿ, ಫೋಟೋಗೆ ಪೋಸ್ ನೀಡುತ್ತಾಳೆ. ಆದರೆ ನಂತರ ಇದ್ದಕ್ಕಿದ್ದಂತೆ ಅದೇನಾಗುತ್ತದೆಯೋ, ವರನಿಗೆ ಎಲ್ಲರ ಎದುರು ಚುಂಬಿಸಲು ಮುಂದಾಗುತ್ತಾಳೆ. ನಾದಿನಿಯ ಈ ಕೆಲಸದಿಂದ ಪೇಚಿಗೆ ಸಿಲುಕಿದ ವರ ನಾದಿನಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುವ ವೀಡಿಯೊ ಇದಾಗಿದೆ.ಈ ಕಾಲದಲ್ಲಿ ಹೀಗೆಲ್ಲ ನಡೆಯೋದು ಸೋಜಿಗವೇ ಸರಿ. ಕಿರಿಯರು ಹಿರಿಯರು ಎನ್ನುವ ಭಾವವಿಲ್ಲದ ಯುವ ಜನತೆಯ ನಡುವೆ ಹಿರಿಯರ ಪಾಡು ಹೇಳ ತೀರದು. ಒಟ್ಟಿನಲ್ಲಿ ಆಗುವುದೆಲ್ಲ ಒಳ್ಳೆಯದೆಂದು ಸುಮ್ಮನಿರುವರು ಅಷ್ಟೇ.
