Home » O.B. Roy: ‘ಓಬಿರಾಯನ ಕಾಲದ್ದು’ ಅಂದ್ರೆ ನಿಜವಾದ ಅರ್ಥವೇನು? ಈ ಹೆಸರು ಬಂದದ್ದೇಗೆ?

O.B. Roy: ‘ಓಬಿರಾಯನ ಕಾಲದ್ದು’ ಅಂದ್ರೆ ನಿಜವಾದ ಅರ್ಥವೇನು? ಈ ಹೆಸರು ಬಂದದ್ದೇಗೆ?

0 comments

O.B. Roy: ಮನೆಯಲ್ಲಿ ಅಥವಾ ಯಾರೊಂದಿಗಾದರೂ ಮಾತನಾಡುವಾಗ ಹಳೆಯ ಕಾಲದ ವಸ್ತುಗಳನ್ನು ಸೂಚಿಸುವ ಸಂದರ್ಭದಲ್ಲಿ ಅದು ಓಬಿರಾಯನ ಕಾಲದ್ದು ಎಂದು ಹೇಳುವುದುಂಟು. ಓಬಿರಾಯನ ಕಾಲದ್ದು ಎಂದು ಹೇಳುವುದೇ ಹಳೆಯ ವಸ್ತುಗಳಿಗೆ ಇಂದು ಕೋಡ್ ವರ್ಡ್ ಆಗಿ ರೂಪುಗೊಂಡು ಬಿಟ್ಟಿದೆ. ಆದರೆ ನೀವೆಂದುಕೊಂಡಂತೆ ಓಬಿರಾಯನ ಕಾಲದ್ದು ಎಂದರೆ ‘ಹಳೆಯದು’ ಎಂಬರ್ಥವಲ್ಲ. ಅದಕ್ಕೆ ನಿಜವಾಗಿಯೂ ಬೇರೆಯೇ ಅರ್ಥವಿದೆ. ಹಾಗಿದ್ರೆ ಈ ಹೆಸರು ಬಂದದ್ದು ಹೇಗೆ?

ಹೌದು, ‘ಓಬಿರಾಯನ ಕಾಲದ್ದು’ ಎಂದರೆ ಹಳೆಯದ್ದು… ನಿಜ.  ಆದ್ರೆ ಅದರ ಪೂರ್ಣ ರೂಪ: Old British Royal (O.B. Roy) ಯಾವುದಾದರೂ ಕಾನೂನು ಕ್ರಮ ಜರುಗಿಸುವುದಕ್ಕೆ ಮುಂಚೆ ಈ Old British Royal 5 ಹೇಳುತ್ತೆ ಅಂತ ನೋಡುತ್ತಿದ್ದಂತೆ. ಮುಂದೆ ಅದೇ ಅಭ್ಯಾಸ ಆಗಿ ಈ ಫೈಲು ಯಾವ ಕಾಲದ್ದಪ್ಪ ಅಂದ್ರೆ ಓಬೀರಾಯನ ಕಾಲದ್ದು ಅನ್ನೋ ಪದ ರೂಢಿಗೆ ಬಂತು. ನಂತರ ಅದು ಹಳೆಯದ್ದು ಎಂಬ ಪದಕ್ಕೆ ಪರ್ಯಾಯವಾಗಿ ಕನ್ನಡಿಗರಲ್ಲಿ ಉಳಿದುಕೊಂಡು ಬಿಟ್ಟಿತು.

You may also like