RSS : ಕಾಂಗ್ರೆಸ್ ನಾಯಕ, ರಾಜ್ಯದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ವಿಧಾನಸಭೆಯಲ್ಲಿ ಗುರುವಾರ ಆರ್ ಎಸ್ ಎಸ್ (RSS) ಗೀತೆಯನ್ನು ಹಾಡಿದ್ದು, ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ 11 ಜನರ ಸಾವಿಗೆ ಕಾರಣವಾದ ಕಾಲ್ತುಳಿತದ ಕುರಿತು ನಡೆದ ಚರ್ಚೆಯ ಸಂದರ್ಭದಲ್ಲಿ ಕಾಂಗ್ರೆಸ್ ರಾಜ್ಯ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಆರ್‌ಎಸ್‌ಎಸ್ ಗೀತೆಯನ್ನು ಹಾಡುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದರು. ಈ ಬೆನ್ನಲೇ ಎಲ್ಲಾ ಸೋಶಿಯಲ್ ಮೀಡಿಯಾಗಳನ್ನು ಈ ಗೀತೆಯನ್ನು ಅಪ್ಲೋಡ್ ಮಾಡಿ ಜನರು ನಿಮ್ಮ ಪಡುತ್ತಿದ್ದಾರೆ. ಹಾಗಿದ್ರೆ RSS ನಾ ಈ ಗೀತೆಯ ಇತಿಹಾಸ ಏನು?
RSS ಗೀತೆ ಇತಿಹಾಸ:
ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)ದ ಪ್ರಾಥಮಿಕ ಪ್ರಾರ್ಥನೆ “ನಮಸ್ತೇ ಸದಾ ವತ್ಸಲೇ ಮಾತೃಭೂಮೇ”ಯಾಗಿದ್ದು, ಇದನ್ನು ಸಂಘ ಪ್ರಾರ್ಥನೆ ಎಂದೂ ಕರೆಯುತ್ತಾರೆ. ಸಂಘದ ಪ್ರಾರ್ಥನೆಯನ್ನು ಸಂಸ್ಕೃತದ ಪ್ರಾಧ್ಯಾಪಕರಾಗಿದ್ದ ನರಹರ್ ನಾರಾಯಣ್ ಭಿಡೆ ಅವರು, ಆರ್‌ಎಸ್‌ಎಸ್ ಸಂಸ್ಥಾಪಕ ಡಾ. ಕೆ. ಬಿ. ಹೆಡ್ಗೆವಾರ್ ಮತ್ತು ಮಾಧವ್ ಸದಾಶಿವ್ ಗೋಲ್ವಾಲ್ಕರ್ ಅವರ ಮಾರ್ಗದರ್ಶನದಲ್ಲಿ ಬರೆದಿದ್ದಾರೆ.
ಸಂಘದ ಪ್ರಾರ್ಥನೆಯ ಮೊದಲ ಆವೃತ್ತಿ ಭಾಗಶಃ ಮರಾಠಿಯಲ್ಲಿ ಮತ್ತು ಭಾಗಶಃ ಹಿಂದಿಯಲ್ಲಿತ್ತು. ಆದರೆ ಮುಂದೆ ರಾಷ್ಟ್ರೀಯ ಪ್ರಾರ್ಥನೆಯ ಅಗತ್ಯವನ್ನು ಗುರುತಿಸಿ, ಸಂಘದ ಸ್ಥಾಪಕ ಸದಸ್ಯರು ಈ ಪ್ರಾರ್ಥನೆಯನ್ನು ಸಂಸ್ಕೃತಕ್ಕೆ ಭಾಷಾಂತರಿಸಲು ನಿರ್ಧರಿಸಿದರು. ಅದರಂತೆ ಈಗ ನಮಸ್ತೇ ಸದಾ ವತ್ಸಲೇ ಮಾತೃಭೂಮೇ ಹಾಡು ಸಂಸ್ಕೃತದಲ್ಲಿದ್ದು, ಕೊನೆಯ ಸಾಲು ಮಾತ್ರ ಹಿಂದಿಯಲ್ಲಿದೆ.
ಮೊದಲ ಪಠಣ:
ಸಂಘದ ಪ್ರಾರ್ಥನೆಯನ್ನು ಮೇ 18, 1940ರಂದು ನಾಗ್ಪುರದಲ್ಲಿ ನಡೆದ ಸಂಘ ಶಿಕ್ಷಾ ವರ್ಗದಲ್ಲಿ, ಮೊದಲ ಬಾರಿಗೆ ಸಾರ್ವಜನಿಕವಾಗಿ ಪಠಿಸಲಾಯಿತು. ಆದಾಗ್ಯೂ, ಇದನ್ನು ಯಾದವ್ ರಾವ್ ಜೋಶಿ ಎಂಬುವವರು ಏಪ್ರಿಲ್ 23, 194 ರಂದು ಪುಣೆಯಲ್ಲಿ ಮೊದಲ ಬಾರಿಗೆ ಹಾಡಿದ್ದರು ಎಂದು ಹೇಳಲಾಗುತ್ತದೆ.
ಅರ್ಥ:
ಮಾತೃಭೂಮಿಯಾದ ಭಾರತಕ್ಕೆ ಪ್ರೀತಿ ಮತ್ತು ಭಕ್ತಿಯನ್ನು ಸಮರ್ಪಿಸುತ್ತದೆ. ಇದು ರಾಷ್ಟ್ರದ ವೈಭವ ಮತ್ತು ಯೋಗಕ್ಷೇಮದ ಬಯಕೆಯನ್ನು ಒತ್ತಿ ಹೇಳುತ್ತದೆ. ರಾಷ್ಟ್ರ ಸೇವೆ ಮಾಡಲು ಶಕ್ತಿ ಮತ್ತು ಸಮರ್ಪಣೆಗಾಗಿ, ಈ ಗೀತೆ ಸಂಘದ ಕಾರ್ಯಕರ್ತರಿಗೆ ಆಶೀರ್ವಾದವನ್ನು ಕೋರುತ್ತದೆ. ಈ ಹಾಡು ಸಂಘದ ಕಾರ್ಯಕರ್ತರಲ್ಲಿ ದೇಶಭಕ್ತಿಯನ್ನು ಉದ್ದೀಪನಗೊಳಿಸುತ್ತದೆ. ರಾಷ್ಟ್ರೀಯತೆಯ ಭಾವನೆ, ರಾಷ್ಟ್ರಕ್ಕಾಗಿ ತಮ್ಮನ್ನು ಸಮರ್ಪಿಸಿಕೊಳ್ಳುವ ಛಲ ತುಂಬುತ್ತದೆ ಎಂದು ಈ ಗೀತೆಯನ್ನು ತಮ್ಮ ಉಸಿರಾಗಿಸಿಕೊಂಡವರು ಹೇಳುತ್ತಾರೆ.
