Nithin Nabin: ಭಾರತೀಯ ಜನತಾ ಪಕ್ಷದಲ್ಲಿ ಮಹತ್ವದ ನಾಯಕತ್ವ ಬದಲಾವಣೆ ನಡೆಯಲಿದ್ದು, ಪಕ್ಷದ ಕಾರ್ಯಕಾರಿ ಅಧ್ಯಕ್ಷರಾಗಿರುವ ನಿತಿನ್ ನಬಿನ್ ಜನವರಿ 20ರಂದು ಬಿಜೆಪಿಯ ಪೂರ್ಣಾವಧಿ ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರ ಸಮ್ಮುಖದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಹಾಗಿದ್ದರೆ ಯಾರು ಈ ನಿತಿನ್ ನಬಿನ್? ಬಹುಶಹ ಬಿಜೆಪಿ ಪಾಳಯದಲ್ಲಿ ಎಲ್ಲರಿಗೂ ತಿಳಿಯದೆ ಇರುವ ಈ ಯುವನಾಯಕ ಏಕಾಏಕಿ ಬಿಜೆಪಿಯ ಅತ್ಯುನ್ನತ ಹುದ್ದೆಗೆ ಏರಿದ್ದು ಹೇಗೆ? ಇಲ್ಲಿದೆ ನೋಡಿ ಎಲ್ಲಾ ಡೀಟೇಲ್ಸ್.
ಜನಸಂಘದ ಮಾಜಿ ಸದಸ್ಯ ಹಾಗೂ ಶಾಸಕ ದಿವಂಗತ ನಬಿನ್ ಕಿಶೋರ್ ಪ್ರಸಾದ್ ಸಿನ್ಹಾ ಅವರ ಪುತ್ರರಾಗಿರುವ ನಬಿನ್ ಸುಮಾರು 2 ದಶಕಗಳ ರಾಜಕೀಯ ಅನುಭವ ಹೊಂದಿದ್ದಾರೆ. ನಬಿನ್ 5 ಬಾರಿ ಬಂಕಿಪುರ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದು, ಸಚಿವರಾಗಿ ಹಲವು ಖಾತೆಗಳನ್ನು ನಿರ್ವಹಿಸಿದ್ದಾರೆ. ಸಧ್ಯ ನಿತಿನ್ ನಬೀನ್ ಅವರು ಬಿಹಾರ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿದ್ದಾರೆ.
ನಿತಿನ್ ನಬಿನ್ ಬಿಹಾರದ ಕಾಯಸ್ಥ ಸಮುದಾಯದಿಂದ ಬಂದಿದ್ದಾರೆ. ಬಿಹಾರದಲ್ಲಿ ಕಾಯಸ್ಥ ಮೇಲ್ವರ್ಗದ ಜಾತಿ ಎಂದು ಪರಿಗಣಿಸಿದರೂ ಇತರ ಜಾತಿಗಳ ಜೊತೆ ಸಂಘರ್ಷದಲ್ಲಿ ಇಲ್ಲ. ಬಿಹಾರ ಚುನಾವಣಾ ಸಮಯದಲ್ಲಿ ಗೃಹ ಸಚಿವ ಅಮಿತ್ ಶಾ ನಿತಿನ್ ಮನೆಗೆ ಭೇಟಿ ನೀಡಿ ಅವರ ಸಂಘಟನಾ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಬಿಹಾರ ಚುನಾವಣೆಗೆ ಮೊದಲು ಜೀವಿಕಾ ದೀದಿ ಜಾಲವನ್ನು ಸಜ್ಜುಗೊಳಿಸುವ ಜವಾಬ್ದಾರಿಯನ್ನು ನಬಿನ್ ಅವರಿಗೆ ವಹಿಸಲಾಗಿತ್ತು. ಬಿಹಾರ ಮೈತ್ರಿಕೂಟ ಒಗ್ಗಟ್ಟನ್ನು ಪ್ರದರ್ಶಿಸುವ ಪ್ರಮುಖ ಎನ್‌ಎಡಿಎಎ ಸಮನ್ವಯ ಸಭೆಗಳಲ್ಲಿಯೂ ನಿತಿನ್ ಭಾಗಿಯಾಗುತ್ತಿದ್ದರು. ಬಿಹಾರ ಚುನಾವಣಾ ಸಮಯದಲ್ಲಿ ಗೃಹ ಸಚಿವ ಅಮಿತ್ ಶಾ ನಿತಿನ್ ಮನೆಗೆ ಭೇಟಿ ನೀಡಿ ಅವರ ಸಂಘಟನಾ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ನಿತಿನ್ ನಬಿನ್ ಅವರಿಗೆ ರಾಷ್ಟ್ರಾಧ್ಯಕ್ಷ ಪಟ್ಟ ಒಲಿದಿದ್ದು ಹೇಗೆ?
ಛತ್ತೀಸ್‌ಗಢ ಪ್ರಚಾರದ ಸಮಯದಲ್ಲಿ ನಬಿನ್ ಅವರ ಸಂಘಟನಾ ಕೌಶಲ್ಯ ಹೈಕಮಾಂಡ್ ಗಮನಕ್ಕೆ ಬಂದಿತ್ತು. ಕೇಂದ್ರ ಸಚಿವ ಮನ್ಸುಖ್ ಮಾಂಡವಿಯಾ ಅವರೊಂದಿಗೆ ಚುನಾವಣಾ ಸಹ-ಉಸ್ತುವಾರಿಯಾಗಿ ಕೆಲಸ ಮಾಡಿದ್ದರು. ಚುನಾವಣೆಗೆ ಕನಿಷ್ಠ ಒಂದೂವರೆ ವರ್ಷಕ್ಕೆ ಮೊದಲು ನಬಿನ್ ವಾರದಲ್ಲಿ ಕನಿಷ್ಠ ನಾಲ್ಕು ದಿನ ಛತ್ತೀಸ್‌ಗಢಗೆ ಬರುತ್ತಿದ್ದರು. ಇದು ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ನಾಯಕ ಭೂಪೇಶ್ ಬಘೇಲ್ ವಿರುದ್ಧ ಬಿಜೆಪಿಯ ಪ್ರಚಾರಕ್ಕೆ ಭದ್ರವಾದ ಅಡಿಪಾಯ ಹಾಕಿತ್ತು.
