Mystery Woman : ಕಟ್ಟಡಗಳ ಮುಂದೆ, ರಸ್ತೆ, ತೋಟ, ಅಥವಾ ಬೆಂಗಳೂರಿನ ಮಾರುಕಟ್ಟೆಗಳಲ್ಲಿ ಓಡಾಡುವಾಗ, ನಿರ್ಮಾಣ ಹಂತದ ಕಟ್ಟಡಗಳು, ಹಣ್ಣು-ತರಕಾರಿ ಅಂಗಡಿಗಳು, ಅಷ್ಟೇ ಏಕೆ ಗದ್ದೆ-ತೋಟಗಳ ಮುಂದೆ ದೊಡ್ಡ ಕಣ್ಣು ಬಿಟ್ಟಿರುವ ಒಬ್ಬ ದಪ್ಪ ಮಹಿಳೆಯ ಫೋಟೋ ರಾರಾಜಿಸುತ್ತಿದೆ. ಈ ಫೋಟೋ ನೋಡಿದ ಕೂಡಲೇ ಎಲ್ಲರ ದೃಷ್ಟಿ ಅದರತ್ತ ಹೋಗುತ್ತದೆ. ಜನರು ದೃಷ್ಟಿಗೊಂಬೆಯಾಗಿ ಈ ಫೋಟೋವನ್ನು ವ್ಯಾಪಕವಾಗಿ ಬಳಸುತ್ತಿದ್ದಾರೆ. ಹಣೆಯಲ್ಲಿ ಹಾಗೂ ಮುಂದಲೆಯಲ್ಲಿ ಕುಂಕುಮ ಇಟ್ಟುಕೊಂಡಿರುವ ಹಾಗೂ ಭಾರತೀಯಳಂತೆ ಕಾಣುವ ಈ ಮಹಿಳೆಯ ಕಣ್ಣುಗಳೇ ಇಡೀ ಫೋಟೋದ ಕೇಂದ್ರ ಬಿಂದು. ಇದು ಯಾರು ಎಂಬುದಾಗಿ ಅನೇಕರ ಪ್ರಶ್ನೆಯಾಗಿತ್ತು. ಇದೀಗ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ಬೆಂಗಳೂರಿನಲ್ಲಿ ವಾಸಿಸುತ್ತಿರುವ ಮಹಾರಾಷ್ಟ್ರ ಮೂಲದ ಮಹಿಳೆಯೊಬ್ಬರಿಗೂ ಈ ಪ್ರಶ್ನೆ ಮೂಡಿತ್ತು. ಉತ್ತರ ತಿಳಿದುಕೊಳ್ಳುವ ಕುತೂಹಲದಿಂದ @unitechy ಹೆಸರಿನ ತಮ್ಮ ಎಕ್ಸ್ ಖಾತೆಯ ಮೂಲಕ ವೈರಲ್ ಫೋಟೋ ಶೇರ್ ಮಾಡಿ ಈಕೆ ಯಾರು ಎಂದು ಪ್ರಶ್ನಿಸಿದ್ದಾರೆ. ಬೆಂಗಳೂರಿನ ಹೊರ ಭಾಗದಲ್ಲಿ ನಿರ್ಮಾಣ ಕಾರ್ಯ ನಡೆಯುತ್ತಿರುವ ಪ್ರತಿ ಕಟ್ಟಡದಲ್ಲೂ ನಾನು ಈ ಮಹಿಳೆಯನ್ನು ಕಂಡಿದ್ದೇನೆ. ಈಕೆ ಯಾರೆಂದು ತಿಳಿಯಲು ನಾನು ಗೂಗಲ್ ಲೆನ್ಸ್‌ನಲ್ಲೂ ಸಹ ಹುಡುಕಿದೆ. ಆದರೆ, ಆಕೆಯ ಬಗ್ಗೆ ಯಾವುದೇ ವಿವರಗಳು ಸಿಗಲಿಲ್ಲ. ಈಕೆ ಯಾರು ನಿಮಗೆ ಗೊತ್ತಾ? ಎಂದು ಪ್ರಶ್ನೆ ಮಾಡಿದ್ದಾರೆ. 2026, ಜನವರಿ 5ರಂದು ಕರ್ನಾಟಕದ ನಿರ್ಮಾಣ ಹಂತದಲ್ಲಿರುವ ಕಟ್ಟಡಗಳ ಬಳಿ ಕಂಡುಬಂದ ಈ ಫೋಟೋವನ್ನು ತಮ್ಮ ಎಕ್ಸ್ನಲ್ಲಿ ಮಹಿಳೆ ಶೇರ್ ಮಾಡಿದ್ದು, ಈವರೆಗೂ 3.2 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ಟ್ವೀಟ್ ವೈರಲ್ ಆಗುತ್ತಿದ್ದಂತೆ ಅನೇಕ ನೆಟ್ಟಿಗರು ತಮ್ಮದೇ ರೀತಿಯಲ್ಲಿ ಕಾಮೆಂಟ್ಗಳ ಸುರಿಮಳೆಗೈದಿದ್ದಾರೆ.
ಈ ಬಗ್ಗೆ ಶಾಂತಾನು ಗೋಯೆಲ್ ಎಂಬ ವ್ಯಕ್ತಿ ಎಕ್ಸ್ ಅವರು AI ತಂತ್ರಜ್ಞಾನ ಸಹಾಯದಿಂದ ಈ ಮಹಿಳೆಯ ಹಿನ್ನೆಲೆಯನ್ನು ಪತ್ತೆ ಹಚ್ಚಿದ್ದಾರೆ. ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಗೂಗಲ್ ಲೆನ್ಸ್ ಮೂಲಕ ಈ ಮಹಿಳೆಯನ್ನು ಪತ್ತೆಹಚ್ಚಲಾಗಿದೆ. ಆದರೆ ಯಾವುದೇ ಮಾಹಿತಿ ಸಿಗಲಿಲ್ಲ.ಆದ್ರೆ ಎಕ್ಸ್ ನಲ್ಲಿ ಮಹಿಳೆಯ ಫೋಟೋ ಹಂಚಿಕೊಂಡು, ಕರ್ನಾಟಕದಾದ್ಯಂತ ನಿರ್ಮಾಣ ಹಂತದ ಕಟ್ಟಡಗಳಲ್ಲಿ ಕೋವಿಡ್ ನಂತ ಈಕೆ ಯಾರು? ಎಂದು ಕೇಳಿದ್ದರು. ಆಗ ಈಕೆ ನಿಹಾರಿಕಾ, ಕರ್ನಾಟಕದ ಯೂಟ್ಯೂಬರ್ ಎಂಬುದು ತಿಳಿದಿಬಂದಿದೆ.
