Saudi Arabia: ಸೌದಿ ಅರೇಬಿಯಾ ಇಂದ ತಕ್ಷಣ ಮೊದಲು ನೆನಪಿಗೆ ಬರುವುದೇ ವಿಶಾಲವಾದ ಮರುಭೂಮಿ. ಮರುಭೂಮಿ ಎಂದರೆ ಹೇಳಬೇಕೆ ನೋಡಿದರೂ ಮರಳಿನ ರಾಶಿಯೇ ಕಣ್ಣಿಗೆ ರಾಚುತ್ತದೆ. ಹೀಗಿದ್ದರೂ ಕೂಡ ಸೌದಿ ಅರೇಬಿಯಾದಲ್ಲಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಆಸ್ಟ್ರೇಲಿಯಾದಿಂದ ಮರಳನ್ನು ತರಿಸಲಾಗುತ್ತದೆ. ಯಾಕೆ ಹೀಗೆ? ಇದು ಕೇಳಲು ಕಾಮಿಡಿ ಅನಿಸಿದರು ಕೂಡ ಇದರ ಹಿಂದೆ ವೈಜ್ಞಾನಿಕವಾಗಿ ಬೇರೆಯೇ ಕಾರಣವಿದೆ.
ಯಸ್, ಮರುಭೂಮಿಯಿಂದ ಕ್ಷಣ ನಮಗೆ ನೆನಪಿಗೆ ಬರುವುದೇ ಮರಳು. ನಾವೆಲ್ಲರೂ ಈ ಮರಳು ಹಾಗೂ ನಾವೆಲ್ಲರೂ ಬಳಸುವ ಮರಳು ಒಂದೇ ಎಂದೆ ಭಾವಿಸಿದ್ದೇವೆ. ಆದರೆ ಮರುಭೂಮಿಯ ಮರಳಿಗೂ ಮತ್ತು ನದಿ ತೀರದ ಮರಳಿಗೂ ಅಜಗಜಾಂತರ ವ್ಯತ್ಯಾಸವಿದೆ. ವೈಜ್ಞಾನಿಕವಾಗಿ ಕೂಡ ಹಲವು ಭಿನ್ನತೆಗಳಿವೆ.
ಮರುಭೂಮಿಯ ಮರಳು ಸಾವಿರಾರು ವರ್ಷಗಳಿಂದ ಗಾಳಿಯ ಹೊಡೆತಕ್ಕೆ ಸಿಲುಕಿ ಸವೆದುಹೋಗಿರುತ್ತದೆ. ಹೀಗಾಗಿ ಇದರ ಕಣಗಳು ಗೋಲಿಗಳಂತೆ ತುಂಬಾ ಮೃದುವಾಗಿ ಮತ್ತು ದುಂಡಾಗಿರುತ್ತವೆ. ಅಲ್ಲದೆ ಕಟ್ಟಡ ನಿರ್ಮಾಣಕ್ಕೆ ಬಳಸುವ ಕಾಂಕ್ರೀಟ್ ಗಟ್ಟಿಯಾಗಿರಬೇಕಾದರೆ ಮರಳಿನ ಕಣಗಳು ಒರಟಾಗಿ ಮತ್ತು ಕೋನೀಯವಾಗಿರಬೇಕು (Angular). ಮರುಭೂಮಿಯ ನಯವಾದ ಮರಳು ಸಿಮೆಂಟ್ ಜೊತೆಗೆ ಸರಿಯಾದ ಹಿಡಿತ ಸಾಧಿಸುವುದಿಲ್ಲ. ಇದರಿಂದ ನಿರ್ಮಿಸಿದ ಕಟ್ಟಡಗಳು ದುರ್ಬಲವಾಗಿರುತ್ತವೆ ಮತ್ತು ಕುಸಿಯುವ ಅಪಾಯವಿರುತ್ತದೆ. ಹೀಗಾಗಿ ಮನೆ ಕಟ್ಟಲು, ದೊಡ್ಡ ದೊಡ್ಡ ಕಟ್ಟಡಗಳನ್ನು ನಿರ್ಮಿಸಲು ಅಥವಾ ಯಾವುದೇ ಸಿಮೆಂಟ್ ಜೊತೆಗೆ ಬೆರೆಸಲು ಮರುಭೂಮಿಯ ಮರಳು ಯೋಗ್ಯವಲ್ಲ. ಇದಕ್ಕೆ ನದಿ, ಕೆರೆ ಅಥವಾ ಹೊಳೆ ತೀರದ ಮರಳು ಬೇಕಾಗುತ್ತದೆ.
ಹೀಗಾಗಿ, ಬೃಹತ್ ಕಟ್ಟಡಗಳನ್ನು ನಿರ್ಮಿಸಲು ಸೌದಿ ಅರೇಬಿಯಾವು ನದಿ ಮರಳನ್ನು ಹೊಂದಿರುವ ಆಸ್ಟ್ರೇಲಿಯಾದಂತಹ ದೇಶಗಳನ್ನು ಅವಲಂಬಿಸಿದೆ. 2023 ರ ದತ್ತಾಂಶದ ಪ್ರಕಾರ, ಸೌದಿ ಅರೇಬಿಯಾವು ಆಸ್ಟ್ರೇಲಿಯಾದಿಂದ ಸುಮಾರು $140,000 ಮೌಲ್ಯದ ಮರಳನ್ನು ಆಮದು ಮಾಡಿಕೊಂಡಿದೆ.
