Home » 1000 Rs Notes: 2016ರಲ್ಲಿ ಬ್ಯಾನ್ ಆಗಿದ್ದ 1000ರೂ. ನೋಟು ಮತ್ತೆ ಬಿಡುಗಡೆ ಆಗುತ್ತಾ? ಈ ಬಗ್ಗೆ ಆರ್​ಬಿಐ ಗವರ್ನರ್ ಏನಂದ್ರು?

1000 Rs Notes: 2016ರಲ್ಲಿ ಬ್ಯಾನ್ ಆಗಿದ್ದ 1000ರೂ. ನೋಟು ಮತ್ತೆ ಬಿಡುಗಡೆ ಆಗುತ್ತಾ? ಈ ಬಗ್ಗೆ ಆರ್​ಬಿಐ ಗವರ್ನರ್ ಏನಂದ್ರು?

4 comments
1000 Rs Notes

1000 Rs Notes: 2000 ರೂ. ಮುಖಬೆಲೆಯ ನೋಟುಗಳನ್ನು (2000rps Notes) ಭಾರತೀಯ ರಿಸರ್ವ್ ಬ್ಯಾಂಕ್ (Reserve bank) ಚಲಾವಣೆಯಿಂದ ಹಿಂಪಡೆದುಕೊಂಡಿದೆ. ಈ ನೋಟುಗಳನ್ನು ಬದಲಾವಣೆ ಮಾಡಿಕೊಳ್ಳಲು ಸೆಪ್ಟೆಂಬರ್ (September) 30ರವರೆಗೆ ಅವಕಾಶ ನೀಡಲಾಗಿದ್ದು, ಬ್ಯಾಂಕುಗಳಲ್ಲಿ 2000 ರೂ. ನೋಟುಗಳ ಬದಲಾವಣೆ ಮಾಡಿಕೊಳ್ಳಬಹುದಾಗಿದೆ. ಈ ಮಧ್ಯೆ 2016ರಲ್ಲಿ ಬ್ಯಾನ್ ಆಗಿದ್ದ 1,000 ರೂ ನೋಟು (1000 Rs Notes) ಮತ್ತೆ ಬರಬಹುದು ಎಂಬ ಸುದ್ಧಿ ಹರಿದಾಡುತ್ತಿದೆ. ಹಾಗಾದ್ರೆ ಸಾವಿರ ರೂ ನೋಟು ಮತ್ತೆ ಬರುತ್ತಾ? ಆರ್​ಬಿಐ ಏನು ಹೇಳುತ್ತೇ?

ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆರ್​ಬಿಐ ಗವರ್ನರ್ (RBI Governor) “ ಆರ್​ಬಿಐನ ಪತ್ರಿಕಾ ಹೇಳಿಕೆಯಲ್ಲಿ ಇದನ್ನು ದೃಢಪಡಿಸಿಲ್ಲ. 1,000 ರೂ ನೋಟು ಮತ್ತೆ ಬರುತ್ತದೆ ಅನ್ನೋದು ಕೇವಲ ಗಾಳಿ ಸುದ್ದಿ” ಎಂದು ಹೇಳಿದರು. ಹಾಗೇ 2,000 ರೂ ನೋಟ್ ಬ್ಯಾನ್ ಬಗ್ಗೆ ಮಾತನಾಡಿದ ಅವರು, “ಭಾರತದಲ್ಲಿ ಚಲಾವಣೆಯಲ್ಲಿರುವ ಒಟ್ಟಾರೆ ಕರೆನ್ಸಿಯಲ್ಲಿ 2,000 ರೂ ಮುಖಬೆಲೆಯ ನೋಟು ಶೇ. 10.8 ಮಾತ್ರ ಇದೆ. ಹೀಗಾಗಿ, ಈ ನೋಟು ಹಿಂಪಡೆದಿದ್ದರಿಂದ ಆರ್ಥಿಕತೆಗೆ ಏನೂ ದುಷ್ಪರಿಣಾಮ ಬೀರುವುದಿಲ್ಲ” ಎಂದು ಶಕ್ತಿಕಾಂತ ದಾಸ್ ಹೇಳಿದರು.

ಸಾಕಷ್ಟು ಸಂಖ್ಯೆಯಲ್ಲಿ 500 ರೂ ಮತ್ತು 100 ರೂ ಮುಖಬೆಲೆಯ ನೋಟುಗಳು ಚಲಾವಣೆಯಲ್ಲಿವೆ. ಜನರ ಅಗತ್ಯತೆಗಳನ್ನು ಈ ನೋಟುಗಳೇ ಪೂರೈಸುತ್ತಿವೆ. ಹೀಗಾಗಿ, ಹೆಚ್ಚು ಮೌಲ್ಯದ ಕರೆನ್ಸಿಯ ಅಗತ್ಯ ಇಲ್ಲ ಅಂದ್ರೆ, 1,000 ರೂ ಮತ್ತು 2,000 ರೂ ಮುಖಬೆಲೆಯ ನೋಟುಗಳ ಅವಶ್ಯಕತೆ ಇಲ್ಲ ಎಂದು ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದರು.

1978ರಲ್ಲಿ ಮೊರಾರ್ಜಿ ದೇಸಾಯಿ ಸರ್ಕಾರ ಕಪ್ಪುಹಣದ ವಿರುದ್ಧ ಕ್ರಮ ಕೈಗೊಂಡು, ರೂ. 1,000 ರೂ. 5,000 ಮತ್ತು ರೂ.10,000 ನೋಟುಗಳನ್ನು ರದ್ದುಗೊಳಿಸಿತ್ತು. ನಂತರದಲ್ಲಿ ಚಲಾವಣೆಗೆ ಬಿಡುಗಡೆ ಮಾಡಲಾಗಿತ್ತು. ಆದರೆ ಮತ್ತೆ 2016 ರಲ್ಲಿ ಮೋದಿ ಸರ್ಕಾರವು ಹಳೆಯ ಐನೂರು ಮತ್ತು ಸಾವಿರ ನೋಟುಗಳನ್ನು ರದ್ದುಗೊಳಿಸಿದೆ. ಇದೀಗ 2,000 ರೂ ನೋಟುಗಳನ್ನೂ ರದ್ದುಗೊಳಿಸಲಾಗಿದೆ.

 

ಇದನ್ನು ಓದಿ : Uttar pradesh: ನೋಟ್ ಬ್ಯಾನ್ ಎಫೆಕ್ಟ್: ಪೆಟ್ರೋಲ್ ಹಾಕಿಸಿ 2000 ರೂ.ನೋಟು ನೀಡಿದ್ದಕ್ಕೆ ಸ್ಕೂಟಿಯಿಂದ ಪೆಟ್ರೋಲ್ ವಾಪಸ್ ತೆಗೆದ ಬಂಕ್​ ಸಿಬ್ಬಂದಿ!! ವಿಡಿಯೋ ವೈರಲ್ 

You may also like

Leave a Comment