ನಿಮ್ಮ ಪಾದಗಳು ಚೆನ್ನಾಗಿರಬೇಕು ಅಂತ ಆಸೆನ? ಬ್ಯೂಟಿ ಪಾರ್ಲರ್ ಗೆ ಹೋಗೋಕೆ ದುಡ್ಡಿಲ್ಲ, ಮನೆಯಲ್ಲಿಯೇ ಈಸಿಯಾಗಿ ಏನಾದರೂ ಟಿಪ್ಸ್ ಇದಿಯಾ ಅಂತ ನಿಮ್ಮ ತಲೆಯಲ್ಲಿ ಪ್ರಶ್ನೆಗಳು ಉತ್ತರ.

ಒಂದು ಪಾತ್ರೆಯಲ್ಲಿ ನೀರು, ಗುಲಾಬಿ ಎಸಳುಗಳನ್ನು ಹಾಕಿ ಅದಕ್ಕೆ ಹಾಲನ್ನು ಮಿಶ್ರಣ ಮಾಡಿ. ಇದರಲ್ಲಿ 10 ನಿಮಿಷಗಳ ಕಾಲ ಪಾದವನ್ನು ನೆನೆಸಿಡಿ. ನಂತರ ಸ್ವಲ್ಪ ಉಗುರು ಬೆಚ್ಚಗಿನ ನೀರಿನಿಂದ ವಾಶ್ ಮಾಡಿ ಒರೆಸಿ. ಹೀಗೆ ವಾರಕ್ಕೆ ಒಂದು ಬಾರಿ ಆದ್ರೂ ಟ್ರೈ ಮಾಡಬೇಕು. ಕಿತ್ತಳೆ ಹಣ್ಣನ್ನು ತಿಂದು ಅದರ ಸಿಪ್ಪೆಯನ್ನು ಎಸೆಯಬೇಡಿ.
ಇದರಿಂದ ಕೂಡ ಅನೇಕ ಪ್ರಯೋಜನಗಳು ಇದೆ. ಅದರಲ್ಲಿ ನಿಮ್ಮ ಪಾದ ಸ್ವಚ್ಚ ಕೂಡ ಒಂದು. ಕಿತ್ತಳೆ ಮತ್ತು ನಿಂಬೆ ಹಣ್ಣಿನ ಸಿಪ್ಪೆಗಳನ್ನು ಒಣಗಿಸಿ, ನಂತರ ಇದನ್ನು ಚೆನ್ನಾಗಿ ಪುಡಿ ಮಾಡಿ ಜೇನಿನ ಜೊತೆ ಮಿಶ್ರಣ ಮಾಡಿ ನಿಮ್ಮ ಪಾದಗಳಿಗೆ ಲೇಪನ ಮಾಡಿ 10 ರಿಂದ 15 ನಿಮಿಷಗಳ ನಂತರ ಬಿಟ್ಟು ವಾಶ್ ಮಾಡಿ.
ಬೇಕಿಂಗ್ ಸೋಡಾವನ್ನೂ ಕಾಲಿಗೆ ಹಚ್ಚಿ ಸ್ವಲ್ಪ ಸಮಯ ಬಿಡಿ. ತದನಂತರ ನೀರನ್ನು ಸ್ವಲ್ಪ ಹಾಕಿ ಚೆನ್ನಾಗಿ ಬ್ರಶ್ ಮಾಡಿ. ನೊರೆ ಬರಲು ಆರಂಭವಾಗುತ್ತದೆ. ಕಪ್ಪಾದ ಪಾದ ಪಳ ಪಳನೆ ಹೊಳೆಯುತ್ತದೆ. ಇದರ ಜೊತೆಗೆ ಬಿಸಿ ನೀರಿನಿಂದ ಕೂಡ ನಿಮ್ಮ ಪಾದಗಳನ್ನು ವಾಶ್ ಮಾಡಿ.
ತೆಂಗಿನ ಎಣ್ಣೆಯನ್ನು ಕೊಂಚ ಬಿಸಿ ಮಾಡಿ ನಿಮ್ಮ ಪಾದಗಳಿಗೆ ಚೆನ್ನಾಗಿ ಮಸಾಜ್ ಮಾಡಿಕೊಳ್ಳಿ. ಹೀಗೆ ನೀವು ವಾರಕ್ಕೆ ಒಂದು ಬಾರಿ ಆದ್ರೂ ಮುಖ ಮತ್ತು ಪಾದಗಳಿಗೆ ಮಸಾಜ್ ಮಾಡಬೇಕು.
