ಜಿಂದ್ (ಹರಿಯಾಣ): ಹರಿಯಾಣದ 37 ವರ್ಷದ ಮಹಿಳೆಯೊಬ್ಬರು ಹತ್ತು ಹೆಣ್ಣು ಮಕ್ಕಳ ನಂತರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಪ್ರಕರಣವು ಮತ್ತೊಮ್ಮೆ ತಾಯಿಯ ಆರೋಗ್ಯದ ಬಗ್ಗೆ ಕಳವಳ ಮತ್ತು ದೇಶದ ಕೆಲವು ಭಾಗಗಳಲ್ಲಿ ಗಂಡು ಮಕ್ಕಳಿಗೆ ಆದ್ಯತೆ ನೀಡುತ್ತಿರುವುದನ್ನು ಎತ್ತಿ ತೋರಿಸಿದೆ.
ವಿವಾಹವಾಗಿ 19 ವರ್ಷಗಳ ನಂತರ ಜಿಂದ್ ಜಿಲ್ಲೆಯ ಉಚಾನಾ ಪಟ್ಟಣದ ಓಜಾಸ್ ಆಸ್ಪತ್ರೆ ಮತ್ತು ಹೆರಿಗೆ ಆಸ್ಪತ್ರೆಯಲ್ಲಿ ಮಹಿಳೆ ತನ್ನ 11 ನೇ ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆ ವೈದ್ಯರು ಹೇಳಿದ್ದಾರೆ.
“ಇದು ಹೆಚ್ಚಿನ ಅಪಾಯದ ಹೆರಿಗೆಯಾಗಿತ್ತು, ಆದರೆ ತಾಯಿ ಮತ್ತು ಮಗು ಇಬ್ಬರೂ ಚೆನ್ನಾಗಿದ್ದಾರೆ” ಎಂದು ಡಾ. ಶಿಯೋರನ್ ಹೇಳಿದರು.
ಜನವರಿ 3 ರಂದು ಮಹಿಳೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಮರುದಿನ ಹೆರಿಗೆ ಆಗಿದೆ. ಮಹಿಳೆಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದ್ದು ಇದೀಗ ಆಕೆ ನೆರೆಯ ಫತೇಹಾಬಾದ್ ಜಿಲ್ಲೆಯ ತನ್ನ ಹಳ್ಳಿಗೆ ಮರಳಿದ್ದಾರೆ.
38 ವರ್ಷದ ದಿನಗೂಲಿ ಕಾರ್ಮಿಕರಾಗಿರುವ ತಂದೆ ಸಂಜಯ್ ಕುಮಾರ್, ತಾವು ಮತ್ತು ತಮ್ಮ ಹಿರಿಯ ಹೆಣ್ಣುಮಕ್ಕಳು ಗಂಡು ಮಗು ಬೇಕೆಂದು ಬಯಸಿದ್ದೆವು ಎಂದು ಹೇಳಿದ್ದಾರೆ. ಅವರು, 2007 ರಲ್ಲಿ ನಮ್ಮ ವಿವಾಹ ನಡೆದಿದ್ದು, ತಮ್ಮ ಹೆಣ್ಣುಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ. ಹಿರಿಯ ಮಗಳು 12 ನೇ ತರಗತಿಯಲ್ಲಿ ಓದುತ್ತಿದ್ದಾಳೆ ಎಂದು ಹೇಳಿದರು. ತಮ್ಮ ಸೀಮಿತ ಆದಾಯದ ಹೊರತಾಗಿಯೂ, ತಮ್ಮ ಎಲ್ಲಾ ಮಕ್ಕಳಿಗೆ ಶಿಕ್ಷಣ ನೀಡಲು ಪ್ರಯತ್ನಿಸುತ್ತಿರುವುದಾಗಿ ಅವರು ಹೇಳಿದರು.
“ನಮಗೆ ಗಂಡು ಮಗು ಬೇಕಿತ್ತು, ಮತ್ತು ನಮ್ಮ ಹೆಣ್ಣು ಮಕ್ಕಳು ತಮ್ಮ ಬೇಕೆಂಬ ಆಸೆ ಹೊಂದಿದ್ದರು. ಇದು ನನ್ನ ಹನ್ನೊಂದನೇ ಮಗು, ಮತ್ತು ನನಗೆ ಈಗಾಗಲೇ 10 ಹೆಣ್ಣು ಮಕ್ಕಳಿದ್ದಾರೆ” ಎಂದು ತಂದೆ ಸಂಜಯ್ ಕುಮಾರ್ ಹೇಳಿದರು.
“ನನ್ನ ಸೀಮಿತ ಆದಾಯದಿಂದ, ನನ್ನ ಹೆಣ್ಣುಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ನಾನು ನನ್ನ ಕೈಲಾದಷ್ಟು ಪ್ರಯತ್ನಿಸುತ್ತಿದ್ದೇನೆ. ಏನೇ ನಡೆದರೂ ಅದು ದೇವರ ಚಿತ್ತ, ಮತ್ತು ನಾನು ಅದರಲ್ಲಿ ಸಂತೋಷವಾಗಿದ್ದೇನೆ” ಎಂದು ಅವರು ಹೇಳಿದರು.
ಹತ್ತು ಸಹೋದರಿಯರು ತಮ್ಮ ನವಜಾತ ಸಹೋದರನಿಗೆ ದಿಲ್ಖುಷ್ ಎಂದು ಹೆಸರಿಟ್ಟಿದ್ದಾರೆ. ಹಿರಿಯ ಮಗಳು ಸರೀನಾ, ಸುಮಾರು 18 ವರ್ಷ ವಯಸ್ಸಿನವಳು, ಸರ್ಕಾರಿ ಶಾಲೆಯಲ್ಲಿ 12 ನೇ ತರಗತಿಯಲ್ಲಿ ಓದುತ್ತಾಳೆ, ನಂತರ ಅಮೃತಾ 11 ನೇ ತರಗತಿಯಲ್ಲಿ ಓದುತ್ತಾಳೆ. ಸುಶೀಲಾ 7 ನೇ ತರಗತಿಯಲ್ಲಿ, ಕಿರಣ್ 6 ನೇ ತರಗತಿಯಲ್ಲಿ, ದಿವ್ಯಾ 5 ನೇ ತರಗತಿಯಲ್ಲಿ, ಮನ್ನತ್ 3 ನೇ ತರಗತಿಯಲ್ಲಿ, ಕೃತಿಕಾ 2 ನೇ ತರಗತಿಯಲ್ಲಿ ಮತ್ತು ಅಮ್ನಿಶ್ 1 ನೇ ತರಗತಿಯಲ್ಲಿ ಓದುತ್ತಿದ್ದರೆ, ಒಂಬತ್ತನೇ ಮತ್ತು ಹತ್ತನೇ ಹೆಣ್ಣುಮಕ್ಕಳು ಲಕ್ಷ್ಮಿ ಮತ್ತು ವೈಶಾಲಿ.
