Rat bite: ಯುನೈಟೆಡ್ ಸ್ಟೇಟ್ಸ್‌ನಲ್ಲಿ 6 ತಿಂಗಳ ಮಗುವೊಂದನ್ನು ಇಲಿಗಳು ಕಚ್ಚಿ (Rat bite)ಕಚ್ಚಿ ತಿಂದು ಜೀವಂತವಾಗಿ ಕಚ್ಚಿರುವ ಘಟನೆಯೊಂದು ನಡೆದಿದೆ. ಮಗು ತನ್ನ ತೊಟ್ಟಿಲಲ್ಲಿ ಮಲಗಿದ್ದಾಗ ಸುಮಾರು 50ಕ್ಕೂ ಹೆಚ್ಚು ಇಲಿಗಳು ಕಚ್ಚಿದ್ದು ಭೀಕರ ಘಟನೆಗೆ ಜನ ಬೆಚ್ಚಿಬಿದ್ದಿದಾರೆ
USA Today ಪ್ರಕಾರ, ಸೆಪ್ಟೆಂಬರ್ 13 ರಂದು ಇಂಡಿಯಾನಾದಲ್ಲಿ ಈ ಘಟನೆ ನಡೆದಿದೆ. ಮಗುವಿನ ತಂದೆ ಕರೆ ಮಾಡಿದ ನಂತರ ಪೊಲೀಸರಿಗೆ ಈ ಸುದ್ದಿ ತಿಳಿದಿದೆ.
ಈ ಘಟನೆಯ ನಂತರ ಮಗುವಿನ ಪೋಷಕರಾದ ಡೇವಿಡ್ ಮತ್ತು ಏಂಜೆಲ್ ಸ್ಕೋನಾಬೌಮ್ ಅವರನ್ನು ಬಂಧಿಸಲಾಗಿದೆ. ನಿರ್ಲಕ್ಷ್ಯ ಮತ್ತು ಇತರ ಕ್ರಿಮಿನಲ್ ಆರೋಪಗಳನ್ನು ಇವರ ಮೇಲೆ ಹಾಕಲಾರಿದೆ. ಅದೇ ಮನೆಯಲ್ಲಿ ವಾಸಿಸುತ್ತಿದ್ದ ಮಗುವಿನ ಚಿಕ್ಕಮ್ಮ ಡೆಲಾನಿಯಾ ಥರ್ಮನ್ ಅವರನ್ನು ಸಹ ಅದೇ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಔಟ್ಲೆಟ್ ವರದಿ ಮಾಡಿದೆ.
ದಂಪತಿಗಳು ಮಗು ಸೇರಿದಂತೆ ತಮ್ಮ ಮೂವರು ಮಕ್ಕಳು ಹಾಗೂ ಇನ್ನೊಂದು ಕುಟುಂಬ ಸದಸ್ಯರು ಸೇರಿದಂತೆ ಇಬ್ಬರು ಮಕ್ಕಳೊಂದಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಪೊಲೀಸರ ಪ್ರಕಾರ, ಅವರು ಮನೆಗೆ ತಲುಪಿದಾಗ, 6 ತಿಂಗಳ ಮಗುವಿನ ತಲೆ ಮತ್ತು ಮುಖಕ್ಕೆ ಕಚ್ಚಿದ ಗಾಯಗಳಿಂದ ನರಳುತ್ತಿದ್ದ ರಕ್ತದಲ್ಲಿ ಬಿದ್ದಿರುವುದನ್ನು ಕಂಡು ಬಂದಿದೆ.
ಮನೆಯಲ್ಲಿದ್ದ ಇಬ್ಬರು ಮಕ್ಕಳು ಕೂಡಾ ಶಾಲಾ ಶಿಕ್ಷಕರಿಗೆ ತಾವು ಮಲಗಿದ್ದಾಗ ಇಲಿಗಳು ಕಚ್ಚಿರುವ ಕುರಿತು ಹೇಳಿದ್ದಾಗಿ ವರದಿಯಾಗಿದೆ. ಇಷ್ಟಿದ್ದರೂ ಪೋಷಕರು ಯಾಕೆ ಇಷ್ಟೊಂದು ನಿರ್ಲಕ್ಷ್ಯ ವಹಿಸಿದ್ದರು ಎಂಬುವುದನ್ನು ಪೊಲೀಸರು ತನಿಖೆ ಮಾಡುತ್ತಿದ್ದಾರೆ.
ಎಲ್ಲಾ ಮಕ್ಕಳನ್ನು ಅವರ ಪೋಷಕರ ಆರೈಕೆಯಿಂದ ತೆಗೆದುಹಾಕಲಾಗಿದೆ. ಈಗ, ಮಕ್ಕಳ ಆರೋಗ್ಯ ಇಲಾಖೆಯಲ್ಲಿ ಪಾಲನೆಯಲ್ಲಿ ಎಲ್ಲಾ ಮಕ್ಕಳಿದ್ದಾರೆ ಎಂದು ವರದಿಯಾಗಿದೆ.
