Home » Popular Fitness Influencer: ಖ್ಯಾತ ಬಾಡಿ ಬಿಲ್ಡರ್, ನೋಟದಲ್ಲೇ ಮರುಳು ಮಾಡೋ ಫಿಟ್‌ನೆಸ್ ಮಹಿಳೆಯ ನಿಗೂಢ ನಿಧನ !!

Popular Fitness Influencer: ಖ್ಯಾತ ಬಾಡಿ ಬಿಲ್ಡರ್, ನೋಟದಲ್ಲೇ ಮರುಳು ಮಾಡೋ ಫಿಟ್‌ನೆಸ್ ಮಹಿಳೆಯ ನಿಗೂಢ ನಿಧನ !!

1 comment
Popular Fitness Influencer

Popular Fitness Influencer : ನ್ಯೂಜಿಲೆಂಡ್‌ನ ಜನಪ್ರಿಯ ಬಾಡಿ ಬಿಲ್ಡರ್ (Body Builder)ಮತ್ತು ಫಿಟ್‌ನೆಸ್ ಪ್ರಭಾವಿ(Popular Fitness Influencer) ರೇಚೆಲ್ ಚೇಸ್ ಮೃತಪಟ್ಟಿದ್ದಾರೆ(Death). ಇವರು, 2011ರಲ್ಲಿ ಲಾಸ್ ವೇಗಾಸ್‌ನಲ್ಲಿ ನಡೆದ ಪ್ರತಿಷ್ಠಿತ ಒಲಂಪಿಯಾ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ ನ್ಯೂಜಿಲೆಂಡ್‌ನ ಮೊದಲ ಮಹಿಳೆಯಾಗಿ ಗುರುತಿಸಿಕೊಂಡಿದ್ದರು.

ಫೇಸ್‌ಬುಕ್‌ನಲ್ಲಿ 1.4 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದ ರೇಚೆಲ್ ಚೇಸ್ ಫಿಟ್‌ನೆಸ್ ಮತ್ತು ಸಿಂಗಲ್‌ ಪೇರೆಂಟಿಂಗ್‌ ಬಗ್ಗೆ ಆಗಾಗ ಸ್ಪೂರ್ತಿದಾಯಕ ಪೋಸ್ಟ್‌ಗಳನ್ನು ಹಾಕುತ್ತಿದ್ದರು. ಚಿಕ್ಕ ವಯಸ್ಸಿನಿಂದಲೇ ದೇಹದಾರ್ಢ್ಯವನ್ನು ಹೊಂದಿದ್ದಲ್ಲದೆ ನ್ಯೂಜಿಲೆಂಡ್‌ನಲ್ಲಿ ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಹಿರಿಮೆಯನ್ನು ಚೇಸ್ ಹೊಂದಿದ್ದಾರೆ. ಚೇಸ್ ಅವರು ಐವರು ಮಂದಿ ಮಕ್ಕಳನ್ನು ಅಗಲಿದ್ದಾರೆ. ಚೇಸ್ ಅವರಿಗೆ 41 ವರ್ಷ ವಯಸ್ಸಾಗಿತ್ತು. ಇವರ ಸಾವಿಗೆ ನೈಜ ಕಾರಣವೇನು ಎಂಬುದು ಬಹಿರಂಗವಾಗಿಲ್ಲ. ನ್ಯೂಜಿಲೆಂಡ್ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: KAS (KPSC) ಗ್ರೂಪ್‌ ʼಎʼ ಮತ್ತು ʼಬಿʼ ವೃಂದದ 300ಕ್ಕೂ ಹೆಚ್ಚು ಹುದ್ದೆಗೆ ಅರ್ಜಿ ಆಹ್ವಾನ!!! ಇಲ್ಲಿದೆ ಕಂಪ್ಲೀಟ್‌ ವಿವರ

You may also like

Leave a Comment