Home » ಖ್ಯಾತ ನಟಿ  ದುರ್ಮರಣ ! ; ಇಲ್ಲಿ ನಡೆಯುತ್ತಿದೆ ಭೀಕರತೆಯ ಸರಮಾಲೆ !

ಖ್ಯಾತ ನಟಿ  ದುರ್ಮರಣ ! ; ಇಲ್ಲಿ ನಡೆಯುತ್ತಿದೆ ಭೀಕರತೆಯ ಸರಮಾಲೆ !

0 comments

ಉಕ್ರೇನ್‌ ನ ಜನಪ್ರಿಯ ನಟಿ ಒಕ್ಸಾನಾ ಶ್ವೆಟ್ಸ್ ದುರ್ಮರಣಕ್ಕೆ ಈಡಾಗಿದ್ದಾರೆ. ವೇದಿಕೆ ಮೇಲೆ ಮಿಂಚಿದ ನಟಿ . ತೆರೆಯ ಹಿಂದೆ ಭೀಕರತೆಯಿಂದ ಕೊಲ್ಪಟ್ಟರು !  ಜನರನ್ನು ರಂಜಿಸಿದ ನಟಿಯ ಸಾವು ಹೀಗಾಗಬಾರದಿತ್ತು ಎಂದು ಜನ ಮರುಕಪಡುತ್ತಿದ್ದಾರೆ.
ರಷ್ಯಾದ ರಾಕೆಟ್ ದಾಳಿಯ ಸಮಯದಲ್ಲಿ ರಾಜಧಾನಿ ಕೈವ್‌ ನಲ್ಲಿ  ಒಕ್ಸಾನಾ ಶ್ವೆಟ್ಸ್ ಮೃತಪಟ್ಟಿದ್ದಾರೆ.

ಕೈವ್‌ನಲ್ಲಿ ವಸತಿ ಕಟ್ಟಡದ ರಾಕೆಟ್ ಶೆಲ್ ದಾಳಿಯ ಸಮಯದಲ್ಲಿ ಉಕ್ರೇನ್‌ ನ ಕಲಾವಿದೆ ಒಕ್ಸಾನಾ ಶ್ವೆಟ್ಸ್ ಕೊಲ್ಲಲ್ಪಟ್ಟಿದ್ದಾರೆ. ಡೆಡ್‌ ಲೈನ್‌’, ಉಕ್ರೇನ್ ಮೂಲದ ಆಂಗ್ಲ ಭಾಷೆಯ ಪತ್ರಿಕೆಯಾದ ಕೈವ್ ಪೋಸ್ಟ್ ಗುರುವಾರ ಟ್ವಿಟರ್‌ನಲ್ಲಿ ಶ್ವೆಟ್ಸ್‌ನ ಸಾವನ್ನು ವರದಿ ಮಾಡಿದೆ.

ಯುದ್ಧದ ಸಮಯದಲ್ಲಿ ಕೈವ್‌ ನಲ್ಲಿ ಯಂಗ್ ಥಿಯೇಟರ್ ನಟಿ ಒಕ್ಸಾನಾ ಶ್ವೆಟ್ಸ್‌ ಅವರನ್ನು ಕೊಲೆ ಮಾಡಲಾಗಿದೆ.  ಒಕ್ಸಾನಾ ಅವರಿಗೆ 67 ವರ್ಷ ವಯಸ್ಸಾಗಿತ್ತು. ಇವಾನ್ ಫ್ರಾಂಕೊ ಥಿಯೇಟರ್ ಮತ್ತು ಕೀವ್ ಸ್ಟೇಟ್ ಇನ್ಸ್ಟಿಟ್ಯೂಟ್ ಆಫ್ ಥಿಯೇಟರ್ ಆರ್ಟ್ಸ್ ನಲ್ಲಿ ಶ್ವೆಟ್ಸ್ ಪದವಿ ಪಡೆದಿದ್ದರು. ಶ್ವೆಟ್ಸ್ ಯಂಗ್ ಥಿಯೇಟರ್‌ ನಲ್ಲಿನ ತನ್ನ ಕೆಲಸದ ಜೊತೆಗೆ ಟೆರ್ನೋಪಿಲ್ ಮ್ಯೂಸಿಕ್ ಮತ್ತು ಡ್ರಾಮಾ ಥಿಯೇಟರ್ ಮತ್ತು ಕೀವ್ ಥಿಯೇಟರ್ ಆಫ್ ವಿಡಂಬನೆಯಲ್ಲಿ ಹಲವಾರು ಪ್ರದರ್ಶನ ನೀಡಿದ್ದಾರೆ.

You may also like

Leave a Comment