Lottery: ದುಡ್ಡು ಇದ್ದರೆ ದುನಿಯಾ ಅನ್ನೋ ಈ ಜಗತ್ತಿನಲ್ಲಿ ದುಡ್ಡನ್ನು ನಮ್ಮ ಕಡೆಗೆ ಒಲಿಸಿಕೊಳ್ಳಲು ಶತ ಪ್ರಯತ್ನ ಮಾಡಿದರು ಕೆಲವೊಮ್ಮೆ ವಿಫಲ ಆಗುತ್ತೆ. ಇನ್ನು ಕೆಲವೊಮ್ಮೆ ಲೆಕ್ಕಕ್ಕಿಂತ ಹೆಚ್ಚು ದುಡ್ಡನ್ನು ಹೇಗೆ ಉಳಿಸುತ್ತೇವೆ ಮತ್ತು ಬಳಸುತ್ತೇವೆ ಅನ್ನೋದು ಕೂಡ ಮುಖ್ಯ. ಅದೃಷ್ಟ ಇದ್ದರೆ ಎಂತಹ ವ್ಯಕ್ತಿಯಾದರೂ ಎತ್ತರಕ್ಕೆ ಏರಬಹುದು, ಆದರೆ ಅಹಂಕಾರ ಅನ್ನೋದು ಮನುಷ್ಯನನ್ನು ನಾಶ ಮಾಡುತ್ತದೆ ಅನ್ನೋದಕ್ಕೆ ಇಲ್ಲಿದೆ ಉದಾಹರಣೆ.
ಹೌದು, ಕೆಲವರಿಗೆ ಬಂಪರ್ ಲಾಟರಿ (Lottery) ಹೊಡೆದು ರಾತ್ರೋರಾತ್ರಿ ಕೋಟ್ಯಾಧಿಪತಿಗಳಾದ ಸಾವಿರಾರು ಉದಾಹರಣೆ ನಮ್ಮ ಮುಂದಿದೆ. ಅಂತೆಯೇ ಇಲ್ಲೊಬ್ಬನಿಗೆ ಬಂಪರ್ ಅದೃಷ್ಟ ಒದಗಿಬಂದು ರಾತ್ರೋ ರಾತ್ರಿ ಕೋಟ್ಯಾಧಿಪತಿಯಾಗಿ ಕೊನೆಗೆ ಭಿಕ್ಷಕುನಂತಾಗಿ ಜೈಲು ಸೇರಿದ, ಬದುಕಿಗೆ ಅರ್ಥ ನೀಡುವ ಇಂಟರೆಸ್ಟಿಂಗ್ ಮಾಹಿತಿ ನೀವು ಓದಲೇ ಬೇಕು.
ಮಾಹಿತಿ ಪ್ರಕಾರ, ಅಮೆರಿಕಾರ ಮಿಚಿಗನ್ ನಿವಾಸಿ ವಿಲ್ಲಿ ಹರ್ಟ್, ಈತ 1989 ರಲ್ಲಿ ಮಿಚಿಗನ್ ಸೂಪರ್ ಲೊಟ್ಟೊ ಟಿಕೆಟ್‌ನಲ್ಲಿ ಬಂಪರ್ ಲಾಟರಿಯನ್ನು ಗೆದ್ದು, ಅದರಲ್ಲಿ ಆತನಿಗೆ 3.1 ಮಿಲಿಯನ್ ಡಾಲರ್ ಬಹುಮಾನ ಸಿಕ್ಕಿದೆ. ಅಂದರೆ ಇಂದಿನ ಲೆಕ್ಕದಲ್ಲಿ ಸುಮಾರು 30 ಕೋಟಿ ರೂಪಾಯಿ. ಈ ಮೊತ್ತವು ತುಂಬಾ ದೊಡ್ಡದಾಗಿದ್ದರಿಂದ ಲಾಟರಿ ಅಧಿಕಾರಿಗಳು ಮುಂದಿನ 20 ವರ್ಷಗಳವರೆಗೆ 1.56 ಲಕ್ಷ ಡಾಲರ್ ಕಂತುಗಳಲ್ಲಿ ಹಣವನ್ನು ಪಡೆಯಬೇಕೆಂದು ಸೂಚಿಸಿದ್ದರು.
ಆದರೆ ಲಾಟರಿ ಗೆದ್ದ ನಂತರ ವಿಲ್ಲಿಯ ಬುದ್ಧಿಯನ್ನು ಮಂಗನಿಗೆ ಕೊಟ್ಟಿದ್ದಾನೆ. ಹೌದು, ರಾತ್ರೋ ರಾತ್ರಿ ಆತನಿಗೆ ಹಣದ ದುರಹಂಕಾರ ಹೆಚ್ಚಿದೆ. ಈ ಹಣ ಸಿಕ್ಕ ಕೂಡಲೇ ಬಂಧುಗಳು, ಸ್ನೇಹಿತರು ಎಲ್ಲರನ್ನೂ ದೂರ ಮಾಡಿದ್ದಾನೆ. ಅಷ್ಟು ಮಾತ್ರವಲ್ಲದೆ ತನ್ನ ಹೆಂಡತಿಯಿಂದಲೂ ವಿಚ್ಛೇದನ ಪಡೆದಿದ್ದಾನೆ. ಅದಲ್ಲದೆ ಕೊಕೇನ್‌ಗೆ ವ್ಯಸನಿಯಾಗಿದ್ದಾನೆ. ಈ ಚಟ ಕ್ರಮೇಣ ಆತನ ಅವನತಿಗೆ ಕಾರಣವಾಗಿದೆ.
ಒಂದು ದಿನ ವಿಲ್ಲಿ ಹೋಟೆಲ್ ಒಂದಕ್ಕೆ ಮಜಾ ಮಾಡಲೆಂದು ಮಹಿಳೆಯೊಬ್ಬಳನ್ನ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಅವನು ಮದ್ಯಪಾನದ ಜೊತೆಗೆ ಕೊಕೇನ್ ಅನ್ನು ಸಹ ತೆಗೆದುಕೊಂಡಿದ್ದಾನೆ. ಸಂಪೂರ್ಣ ನಶೆಯಲ್ಲಿದ್ದ ಆತ ಸಣ್ಣ ಕಾರಣಕ್ಕೆ ಮಹಿಳೆಯೊಂದಿಗೆ ಜಗಳವಾಡಿದ್ದಾನೆ. ನಂತರ ಮರುದಿನ ಕೋಣೆಯಲ್ಲಿ ಮಹಿಳೆ ಶವವಾಗಿ ಪತ್ತೆಯಾಗಿದ್ದಳು. ನಶೆಯಲ್ಲಿದ್ದ ಆತ ಏನಾಗಿದೆ ಎಂಬುದನ್ನು ತಿಳಿದುಕೊಳ್ಳುವ ಮುನ್ನವೇ ಆ ಕೊಲೆಯ ಪ್ರಕರಣ ಆತನ ಮೇಲೆ ಬರುತ್ತದೆ.
ಇದೀಗ ಮಹಿಳೆಯನ್ನು ಕೊಲೆ ಮಾಡಿದ ಅಪರಾಧಕ್ಕಾಗಿ ನ್ಯಾಯಾಲಯವು ಆತನಿಗೆ ಜೈಲು ಶಿಕ್ಷೆಯನ್ನು ವಿಧಿಸಿದೆ. ಆತನ ದುರಹಂಕಾರದಿಂದ ಮಾಡಿದ ತಪ್ಪಿನಿಂದ, ಆ ನಂತರವೂ ಆತನಿಗೆ ಲಾಟರಿ ಹಣ ಖಾತೆಗೆ ಬಂದರೂ ಅದನ್ನು ಅನುಭವಿಸುವ ಅವಕಾಶವನ್ನು ಕಳೆದುಕೊಂಡಿದ್ದಾನೆ. ಅತಿಯಾದರೆ ಅಮೃತವು ವಿಷ ಅನ್ನೋದು, ವಿಲ್ಲಿಯ ಜೀವನದಲ್ಲಿ ಸಾಬೀತು ಆಗಿದೆ. ಈಗ ಬಾಲ ಸುಟ್ಟ ಕೋತಿಯಂತೆ ತೆಪ್ಪಗೆ ಜೈಲಿನಲ್ಲಿ ಬಿದ್ದಿರಬೇಕಾಗಿದೆ.
ಇದನ್ನೂ ಓದಿ: SSLC ಹಾಗೂ PUC ವಿದ್ಯಾರ್ಥಿಗಳೇ ಗಮನಿಸಿ- ಇನ್ಮುಂದೆ ನೀವು ವರ್ಷಕ್ಕೆ 3 ಬಾರಿ ಪರೀಕ್ಷೆ ಬರೆಯಬೇಕು !! ಅರೇ.. ಏನಿದು ಹೊಸ ವಿಚಾರ
