Home » Viral News: 50 ರಾಜ್ಯದಲ್ಲಿ 100 ಹುಡುಗಿಯರ ಜೊತೆ ಡೇಟಿಂಗ್‌ ಮಾಡಿದ ಭೂಪ !! ಆದ್ರೂ ಇವ್ನಿಗೆ ಇನ್ನೂ ‘ಅದು’ ಸಿಕ್ಕಿಲ್ವಂತೆ !!

Viral News: 50 ರಾಜ್ಯದಲ್ಲಿ 100 ಹುಡುಗಿಯರ ಜೊತೆ ಡೇಟಿಂಗ್‌ ಮಾಡಿದ ಭೂಪ !! ಆದ್ರೂ ಇವ್ನಿಗೆ ಇನ್ನೂ ‘ಅದು’ ಸಿಕ್ಕಿಲ್ವಂತೆ !!

1 comment
Viral News

Viral News: ಮದುವೆ ಎಂದರೆ ಕೆಲವರ ಪಾಲಿಗೆ ಶುಭ ಗಳಿಗೆ ಆದರೆ ಮತ್ತೆ ಕೆಲವರ ಪಾಲಿಗೆ ಮದುವೆ ಎಂಬುದು ನರಕಕ್ಕೆ ಸಮಾನ. ಒಬ್ಬ ವ್ಯಕ್ತಿ ಇದ್ದ ಹಾಗೇ ಮತ್ತೊಬ್ಬರು ಇರಲು ಸಾಧ್ಯವಿಲ್ಲ. ಕೆಲವರಿಗೆ ಮದುವೆ ಬಳಿಕ ಸುಖವಾದ (Happy Life)ಜೀವನ ಸಿಕ್ಕಿದರೆ ಮತ್ತೆ ಕೆಲವರಿಗೆ ಮದುವೆಯ ನಂತರದ ಜೀವನ ನರಕದಂತೆ ಭಾಸವಾಗಬಹುದು.ಮದುವೆಯ ಬಳಿಕ ಹೊಂದಿಕೊಂಡು ಹೋಗುವ ಸಂಗಾತಿ ಸಿಕ್ಕರೆ ಅದೃಷ್ಟ ಎಂದುಕೊಂಡರೆ, ಮದುವೆಯ ಬಳಿಕದ ಜೀವನ ಸುಖಮಯವಾಗಿಲ್ಲ ಎಂದಾದರೆ ಕೆಲವರು ಹಣೆಬರಹ ಎಂದುಕೊಂಡು ಸುಮ್ಮನಾಗುತ್ತಾರೆ.

ಅದೇ ರೀತಿ, ತನ್ನ ಗುಣಕ್ಕೆ ಅನುರೂಪ ಎನಿಸಿದ ಬಾಳ ಸಂಗಾತಿ ಕೂಡ ಸಿಗೋದಕ್ಕು ಅದೃಷ್ಟ ಮಾಡಿರಬೇಕು ಅನ್ನುವ ರೀತಿಯ ಘಟನೆಯೊಂದು ವರದಿಯಾಗಿದೆ (Viral News). ಅದರಲ್ಲಿಯೂ ಈ ಮಹಾಶಯನಿಗೆ 50 ರಾಜ್ಯದಲ್ಲಿ 100 ಮಂದಿ ಯುವತಿಯರ ಜೊತೆಗೆ ಡೇಟ್ ಮಾಡಿದರು ಕೂಡ ಸೂಕ್ತ ಎನಿಸುವ ರಾಜಕುಮಾರಿ ಇನ್ನೂ ಸಿಕ್ಕಿಲ್ಲವಂತೆ.

ಅಮೆರಿಕದ ನಿವಾಸಿ ಮ್ಯಾಥ್ಯೂ ವೆರ್ನಿಂಗ್ ಎಂಬಾತ ದೇಶದ ಒಟ್ಟು 50 ರಾಜ್ಯಗಳಲ್ಲಿ ಇರುವ 100 ಹುಡುಗಿಯರೊಂದಿಗೆ ಡೇಟಿಂಗ್ ಮಾಡಿದ್ದು ತನ್ನ ಗೆಳತಿಯ(Girl Friend)ಸಲುವಾಗಿ ಹುಡುಕಾಟ ನಡೆಸುವಾಗ ಈತ ಮಿಚಿಗನ್‌ನಿಂದ ಪ್ರಾರಂಭ ಮಾಡಿ, ಅಲಾಸ್ಕಾದವರೆಗೆ ಪ್ರತಿಯೊಂದು ರಾಜ್ಯದಲ್ಲೂ ಅವನು ತನ್ನ ಕನಸಿನ ಹುಡುಗಿಯನ್ನು ಹುಡುಕಾಟ ನಡೆಸಿದ್ದಾನೆ. ಆತ ವಾಹನದ ಮೂಲಕ ಎಲ್ಲಾ ರಾಜ್ಯಗಳಿಗೆ ತೆರಳಿ ಗೆಳತಿಯರನ್ನು ಭೇಟಿಯಾಗಿ ಅವರ ಜೊತೆ ಡೇಟಿಂಗ್ (Dating)ಮಾಡಿ ಹಿಂತಿರುಗುತ್ತಿದ್ದ. ಆದರೆ ಅಲಾಸ್ಕಾ ಮತ್ತು ಹವಾಯಿಯಲ್ಲಿ ಮಾತ್ರ ವಿಮಾನದಲ್ಲಿ ಪ್ರಯಾಣ ಮಾಡಿದ್ದಾನೆ.

Viral News

ನ್ಯೂಯಾರ್ಕ್ ಪೋಸ್ಟ್ ವರದಿಯ ಅನುಸಾರ, ಮ್ಯಾಥ್ಯೂ ಒಟ್ಟು 100 ಹುಡುಗಿಯರೊಂದಿಗೆ ಸಂಬಂಧ ಹೊಂದಿ ರುವುದು ಆತನಿಗೆ ಹೆಮ್ಮೆಯ ಸಂಗತಿಯಂತೆ. ಮ್ಯಾಥ್ಯೂ ಕೊರೊನಾ ಸಾಂಕ್ರಾಮಿಕ ರೋಗದ ಹಿನ್ನೆಲೆ ಮನೆಯಲ್ಲಿ ಕುಳಿತು ಬೇಜಾರಾಗಿ ಮೊಬೈಲ್‌ನಲ್ಲಿ 2020ರ ವೇಳೆಗೆ ಡೇಟಿಂಗ್ ಆಪ್ ಡೌನ್ ಲೋಡ್ (Dating App)ಮಾಡಿಕೊಂಡು ಲೊಕೇಶನ್ ಚೇಂಜ್ ಮಾಡುವ ಮುಖಾಂತರ ಸಂಗಾತಿ ಸಿಗಬಹುದೆಂದು ದೇಶದೆಲ್ಲೆಡೆ ಸುತ್ತಾಡಿ ತನಗೆ ತಕ್ಕ ಗೆಳತಿಗಾಗಿ ಹುಡುಕಾಟ ನಡೆಸಿದ್ದನಂತೆ.

ಆತ ಇಲ್ಲಿಯವರೆಗೆ ಡೇಟಿಂಗ್‌ ಮಾಡಿದೆಲ್ಲವು ರೋಮಾಂಚನಕಾರಿಯಾಗಿರುವ ಕುರಿತು ಮ್ಯಾಥ್ಯೂ ಸಂತಸಪಟ್ಟಿದ್ದು, ಗೆಳತಿಯರು ನನ್ನೊಂದಿಗೆ ಸಾಹಸಮಯ ಕೆಲಸಗಳನ್ನು ಮಾಡುತ್ತಿದ್ದ ವಿಚಾರ ಹಂಚಿಕೊಂಡಿದ್ದಾನೆ. ಯುವತಿಯ ಜೊತೆಗೆ ಜಿಪ್ ಲೈನಿಂಗ್, ಪ್ಯಾರಾಸೈಲಿಂಗ್, ಹೆಲಿಕಾಪ್ಟರ್ ರೈಡಿಂಗ್, ಕುದುರೆ ಸವಾರಿ, ಪ್ಯಾಡಲ್ ಬೋರ್ಡಿಂಗ್ ಮತ್ತು ಏರ್‌ಬೋಟಿಂಗ್‌ನಲ್ಲಿ ಕಾಲ ಕಳೆದಿದ್ದೇನೆ ಎಂದು ಹೇಳಿದ್ದಾರೆ. ಹೀಗಿದ್ದರೂ ಕೂಡ ಹುಡುಕಾಟ ಕಾರ್ಯ ಮುಗಿದಿಲ್ಲ ಎಂದು ಹೇಳಿಕೊಂಡಿದ್ದಾನಂತೆ.

ತನಗೆ ತಕ್ಕ ಸಂಗಾತಿ ಸಿಗದೇ ಹೋದರು ಕೂಡ ಮ್ಯಾಥ್ಯೂ ಈಗಲೂ ಕೂಡ ಕೆಲವೊಂದು ಹುಡುಗಿಯರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾನಂತೆ. ಆದರೆ ಜೀವನದಲ್ಲಿ ಸ್ಕೋಪ್ ಕೂಡ ನೋಡುತ್ತಿರುವ ಹಿನ್ನೆಲೆ ಯಾರ ಜೊತೆಗೂ ಕೂಡ ಸುಧೀರ್ಘ ಸಂಬಂಧ ಹೊಂದುವ ಇಂಗಿತವಿಲ್ಲವೆಂದು ಹೇಳಿಕೊಂಡಿದ್ದಾನೆ ಈ ಭೂಪ. ಸದ್ಯ , 100 ಮಂದಿ ಯುವತಿಯರ ಜೊತೆಗೆ ಡೇಟಿಂಗ್ ಮಾಡಿರುವ ಮ್ಯಾಥ್ಯೂ ಯಾವುದೇ ಸಂಬಂಧದಲ್ಲಿ ಇಲ್ಲವೆಂದು ಹೇಳಿದ್ದು, ಆದರೂ ಸುದೀರ್ಘ ಸಂಬಂಧಕ್ಕಾಗಿ ಪರಸ್ಪರ ತಿಳಿದುಕೊಳ್ಳುವುದು ಬಹಳ ಮುಖ್ಯ ಎಂದು ಕೂಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರಂತೆ.

ಇದನ್ನೂ ಓದಿ: Kerala: ಮತ್ತೆ ಕಾಡಲು ಶುರುವಾದ ‘ನಿಫಾ’ ವೈರಸ್- ಜ್ವರಕ್ಕೆ ಎರಡು ಮಂದಿ ಬಲಿ !!

You may also like

Leave a Comment