Kolambia: ಅಂತರಾಷ್ಟ್ರೀಯ ಕಾನೂನುಗಳನ್ನು ಧಿಕ್ಕರಿಸಿ ವೆನಿಜುವೆಲಾ ಡ್ರಗ್ಸ್ ದಂಧೆ, ಅಕ್ರಮ ಶಸ್ತ್ರಾಸ್ತ್ರ ಸಂಗ್ರಹಣೆಯಲ್ಲಿ ತೊಡಗಿದೆ ಎಂದು ಆರೋಪಿಸಿ ಅಮೆರಿಕಾ ದಾಳಿ ನಡೆಸಿ, ಅಲ್ಲಿನ ಅಧ್ಯಕ್ಷ ನಿಕೋಲಸ್ ಮಡುರೊ ಹಾಗೂ ಆತನ ಪತ್ನಿ ಸಿಲಿಯಾ ಫ್ಲೋರ್ಸ್‌ರನ್ನು ಬಂಧಿಸಿ ತನ್ನ ದೇಶಕ್ಕೆ ಕರೆದುಕೊಂಡು ಹೋಗಿದೆ. ಇದು ಅಂತರಾಷ್ಟ್ರೀಯ ಕಾನೂನುಗಳ ಉಲ್ಲಂಘನೆಯಾಗಿದೆ ಎಂದು ಹಲವಾರು ದೇಶಗಳು ಅಮೆರಿಕವನ್ನು ದೂರುತ್ತಿವೆ. ಇದರ ಬೆನ್ನಲ್ಲೇ ಕೊಲಂಬಿಯ ಅಧ್ಯಕ್ಷರು ದಮ್ ಇದ್ದರೆ ನನ್ನನ್ನು ಬಂಧಿಸಿ ಎಂದು ಅಮೆರಿಕಕ್ಕೆ ಚಾಲೆಂಜ್ ಹಾಕಿದ್ದಾರೆ.
ವೆನಿಜುವೆಲಾ ಮೇಲೆ ದಾಳಿ ಅಲ್ಲಿನ ಅಧ್ಯಕ್ಷ ಮಡುರೋನನ್ನು ಅಮೆರಿಕಾ ಸೇನೆ ಒತ್ತೊಯ್ದ ಬಳಿಕ ಕೊಲಂಬಿಯಾ ಅಧ್ಯಕ್ಷ ಗುಸ್ಟಾವೊ ಪೆಟ್ರೋ ಅವರು, ಬಂದು ನನ್ನನ್ನು ಹಿಡಿಕೊಂಡು ಹೋಗು ನೋಡೋಣ, ನಿನಗಾಗಿ ಕಾಯುತ್ತಿದ್ದೇನೆ ಎಂದು ಭಾನುವಾರ(ಜ. 05) ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ಸವಾಲು ಹಾಕಿದ್ದಾರೆ.
ವಿಡಿಯೋ ಒಂದರಲ್ಲಿ ಮಾತನಾಡಿರುವ ಅವರು ನಾನೂ ಕೂಡ ನಿಮಗಾಗಿ ಕಾಯುತ್ತಿದ್ದೇನೆ. ತಾಕತ್ತಿದ್ದರೆ ಇಲ್ಲಿಗೆ ಬಂದು ನನ್ನು ಬಂಧಿಸಿ” ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸವಾಲು ಹಾಕಿದ್ದಾರೆ. “ಅಮೆರಿಕ ಒಂದು ವೇಳೆ ಕೊಲಂಬಿಯಾದ ಮೇಲೆ ದಾಳಿ ಮಾಡಿದರೆ, ದೇಶದ ಸಾವಿರಾರು ರೈತರು ಮತ್ತು ಕಾರ್ಮಿಕರು ಗೆರಿಲ್ಲಾ ಯುದ್ಧ ಮಾಡಲು ಸಿದ್ಧರಿದ್ದಾರೆ” ಎಂದು ಅಧ್ಯಕ್ಷ ಪೆಟ್ರೋ, ಟ್ರಂಪ್ ಆಡಳಿತಕ್ಕೆ ನೇರ ಎಚ್ಚರಿಕೆ ನೀಡಿದ್ದಾರೆ.
ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡರೊ ಅಮೆರಿಕಕ್ಕೆ ಸವಾಲು ಹಾಕುವ ವಿಡಿಯೋ ಬಿಡುಗಡೆ ಮಾಡಿದ್ದ ಶ್ವೇತಭವನ, “ವೆನೆಜುವೆಲಾದ ಅಧ್ಯಕ್ಷ ಆಸೆ ಈಡೇರಿಸಲಾಗಿದೆ” ಎಂದು ವ್ಯಂಗ್ಯಭರಿತ ಪ್ರತಿಕ್ರಿಯೆ ನೀಡಿತ್ತು. ಅಲ್ಲದೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟಂಪ್ ಅವರೊಂದಿಗೆ ಆಟವಾಡುವುದು ಒಳ್ಳೆಯದಲ್ಲ ಎಂದೂ ಎಚ್ಚರಿಕೆ ನೀಡಿತ್ತು. ಇದೀಗ ಕೊಲಂಬಿಯಾ ಅಧ್ಯಕ್ಷರಿಗೆ ಯಾವ ರೀತಿ ಪ್ರತಿಕ್ರಿಯೆ ಸಿಗಲಿದೆ ಎಂದು ಕಾದು ನೋಡಬೇಕಿದೆ.
