Donald Trump: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ಮಾರಣಾಂತಿಕ ದಾಳಿ ನಡೆದಿದೆ. ಪೆನ್ಸಿಲ್ವೇನಿಯಾದ ಬಟ್ಲರ್‌ನಲ್ಲಿ ನಡೆದ ರ್ಯಾಲಿಯಲ್ಲಿ ಟ್ರಂಪ್ ಅವರಿಗೆ ಗುಂಡು ಹಾರಿಸಲಾಗಿದೆ. ಬಟ್ಲರ್‌ನಲ್ಲಿ ವೇದಿಕೆಯಲ್ಲಿ ಮಾತನಾಡುತ್ತಿದ್ದಾಗ ಗುಂಡಿನ ಸದ್ದು ಕೇಳಿಸಿದ್ದು, ಟ್ರಂಪ್ ಬಲ ಕಿವಿಯ ಮೇಲೆ ಹಾದು ಹೋಗಿದೆ. ಕೂಡಲೇ ರಕ್ಷಣಾ ಏಜೆಂಟ್‌ಗಳು ತಕ್ಷಣವೇ ಟ್ರಂಪ್‌ರನ್ನು ರಕ್ಷಣೆ ಮಾಡಿದ್ದಾರೆ.
By Election: ದೇಶಾದ್ಯಂತ ನಡೆದ ಉಪಚುನಾವಣೆ- ಮತ್ತೆ ಮುಗ್ಗರಿಸಿದ NDA, ಇಂಡಿಯಾ ಕೂಟಕ್ಕೆ ಭರ್ಜರಿ ಗೆಲುವು !!
ಟ್ರಂಪ್ ಅವರನ್ನು ತಡೆದು ನಿಲ್ಲಿಸಲು ಸಹಾಯ ಮಾಡಿದಾಗ, ಟ್ರಂಪ್ ಅವರ ಮುಖ ಮತ್ತು ಕಿವಿಗಳಲ್ಲಿ ರಕ್ತ ಗೋಚರಿಸಿದೆ. ಬಳಿಕ ಟ್ರಂಪ್ ಅವರನ್ನು ವೇದಿಕೆಯಿಂದ ಕೆಳಗಿಳಿಸಿ ಕಾರಿನಲ್ಲಿ ಕೂರಿಸಿಕೊಂಡು ಅಲ್ಲಿಂದ ಕರೆದೊಯ್ದ ಅಧಿಕಾರಿಗಳು. ಭಾರತೀಯ ಕಾಲಮಾನ ಭಾನುವಾರ ಬೆಳಗಿನ ಜಾವ 4 ಗಂಟೆಗೆ ಈ ಘಟನೆ ನಡೆದಿದೆ. ಆಗ ಅಮೆರಿಕದಲ್ಲಿ ಶನಿವಾರ ಸಂಜೆ 6:30 ಸಮಯ.
ಡೊನಾಲ್ಡ್ ಟ್ರಂಪ್ ಅವರಿಗೆ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಚುನಾವಣಾ ರ್ಯಾಲಿಯಲ್ಲಿದ್ದ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಮತ್ತೊಬ್ಬ ವ್ಯಕ್ತಿಯೂ ಸಾವನ್ನಪಿರುವ ಕುರಿತು ಸಂಶಯ ವ್ಯಕ್ತಪಡಿಸಲಾಗಿದೆ. ಡೊನಾಲ್ಡ್ ಟ್ರಂಪ್ ಅವರನ್ನು ಹತ್ಯೆ ಮಾಡುವ ವಿಫಲ ಯತ್ನದ ಭಾಗವಾಗಿದ್ದು, ಈ ಘಟನೆ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಲಾಗಿದೆ.
Ananth Ambani Marriage: ಅಂಬಾನಿ ಮಗನ ಮದುವೆ ಮಹೋತ್ಸವದಲ್ಲಿ ಪ್ರಧಾನಿ ಭಾಗಿ – ಮೋದಿ ಕೊಟ್ಟ ಉಡುಗೊರೆ ಏನು?
