3
Bangladesh trains accident : ಬಾಂಗ್ಲಾದೇಶದ (Bangladesh) ಭೈರಬ್‍ನಲ್ಲಿ ಎರಡು ರೈಲುಗಳು ಭೀಕರವಾಗಿ ಡಿಕ್ಕಿ (bangladesh Trains Accident) ಹೊಡೆದಿದ್ದು, ಘಟನೆ ಪರಿಣಾಮ 20 ಮಂದಿ ಸಾವನ್ನಪ್ಪಿದ್ದು, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಗೂಡ್ಸ್ ರೈಲು ಹಿಂದಿನಿಂದ ಪ್ಯಾಸೆಂಜರ್ ರೈಲಿಗೆ ಡಿಕ್ಕಿ ಹೊಡೆದಿದ್ದು, ಘಟನೆಯಿಂದಾಗಿ ಎರಡು ರೈಲಿನ ಬೋಗಿಗಳು ಹಳಿ ತಪ್ಪಿವೆ. ಜೊತೆಗೆ 20 ಮಂದಿ ಸಾವನ್ನಪ್ಪಿದ್ದು, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗುತ್ತಿದೆ.
ಘಟನಾಸ್ಥಳದಿಂದ ಇದುವರೆಗೂ 20 ಶವಗಳನ್ನು ಹೊರ ತೆಗೆಯಲಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಸದ್ಯ ಘಟನೆ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
