Home » ಬೇಕುಂತಲೇ ಸ್ಪೀಡ್ ಆಗಿ ಗಾಡಿ ಓಡಿಸಿ ಅರೆಸ್ಟ್ ಆದ 19 ವರ್ಷದ ಯುವತಿ | ಕಾರಣ ‘ಬಕೆಟ್ ಲಿಸ್ಟ್ ‘ ವಿಶ್

ಬೇಕುಂತಲೇ ಸ್ಪೀಡ್ ಆಗಿ ಗಾಡಿ ಓಡಿಸಿ ಅರೆಸ್ಟ್ ಆದ 19 ವರ್ಷದ ಯುವತಿ | ಕಾರಣ ‘ಬಕೆಟ್ ಲಿಸ್ಟ್ ‘ ವಿಶ್

0 comments

ಮನುಷ್ಯ ಅಂದ ಮೇಲೆ ಆಸೆ ಯಾರಿಗೆ ತಾನೇ ಇರಲ್ಲ ಹೇಳಿ…ಹಲವರಿಗೆ ಹಲವು ಆಸೆ…ಆ ಆಸೆಗಳನ್ನು ಈಡೇರಿಸುವ ಭರದಲ್ಲಿ ಕೆಲವರು ಎಡವುತ್ತಾರೆ. ಮತ್ತೆ ಕೆಲವರು ಸಾಧಿಸುತ್ತಾರೆ. ಇದಲ್ಲದೇ ಜೀವನದಲ್ಲಿ ಒಮ್ಮೆಯಾದರೂ ಟ್ರೈ ಮಾಡಬೇಕು ಎನ್ನುವ ವಿಕ್ಷಿಪ್ತ ಆಸೆಗಳೂ ಇರುತ್ತವೆ. ಇದನ್ನು ‘ಬಕೆಟ್ ಲಿಸ್ಟ್’ ಆಸೆ ಅಂತ ಕರೆಯುತ್ತಾರೆ. ‘ಬಕೆಟ್ ಲಿಸ್ಟ್’ ಎಂದರೆ ಜೀವನದಲ್ಲಿ ಮಾಡಬೇಕಾದ ಕಾರ್ಯಗಳ ಲಿಸ್ಟ್.

ಇಂತಹ ವಿಲಕ್ಷಣ ಆಸೆ ಈಡೇರಿಸಲು ಹೋದ ಯುವತಿಯೋರ್ವಳು ಈಗ ಪೊಲೀಸರ ಅತಿಥಿಯಾಗಿದ್ದಾಳೆ. ಅದು ಯಾವ ಕೆಲಸ ಎಂದು ಯೋಚಿಸುತ್ತಿದ್ದೀರಾ? ಅಲ್ಲೇ ಇರೋದು ಟ್ವಿಸ್ಟ್! ಆ ಯುವತಿಯ ಆಸೆಯೇ ಜೀವನದಲ್ಲಿ ಒಮ್ಮೆಯಾದರೂ ಪೊಲೀಸರಿಂದ ಅರೆಸ್ಟ್ ಆಗಬೇಕು ಅನ್ನೋದು! ಕೊನೆಗೂ ತನ್ನ ಕನಸನ್ನು ಅವಳು ಈಡೇರಿಸಿಕೊಂಡಿದ್ದು ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದಾಳೆ. ಆದರೆ ಆ ಯುವತಿ ನೀಡಿದ ‘ಬಕೆಟ್ ಲಿಸ್ಟ್’ ಕಾರಣ ಕೇಳಿ ಪೊಲೀಸರು ದಂಗಾಗಿದ್ದಾರೆ. ಏನಿದು ಪ್ರಕರಣ? ಪೂರ್ಣ ವಿವರ ಇಲ್ಲಿದೆ ನೋಡಿ.

ಜಾನಿಯಾ ಶೈಮಿರಾಕಲ್ ಡೌಗ್ಲಾಸ್ 19 ವರ್ಷದ ಯುವತಿ. ಮೇ 12ರಂದು ಫ್ಲೋರ್ಡಿಯಾದ ಕಾರ್ಡ್ ಸೌಂಡ್ ರಸ್ತೆಯಲ್ಲಿ ಅತ್ಯಂತ ವೇಗವಾಗಿ ವಾಹನ ಚಾಲನೆ ಮಾಡಿದ್ದಾಳೆ. ಇದು ಅಪರಾಧವಾಗಿದ್ದರಿಂದ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ಪೊಲೀಸರ ವಿಚಾರಣೆಯಲ್ಲಿ ಆಕೆ ತಪ್ಪು ಒಪ್ಪಿಕೊಂಡಿದ್ದು, “ನನ್ನ ‘ಬಕೆಟ್ ಲಿಸ್ಟ್’ನಲ್ಲಿ ಅರೆಸ್ಟ್ ಆಗಬೇಕು ಎನ್ನುವುದೂ ಇತ್ತು. ಹೀಗಾಗಿ ವೇಗವಾಗಿ ವಾಹನ ಚಾಲನೆ ಮಾಡಿ, ತಪ್ಪಿಸಿಕೊಳ್ಳಲು ಯತ್ನಿಸಿದೆ” ಎಂದಿದ್ದಾಳಂತೆ ಈ ಯುವತಿ.

ಈ ಯುವತಿ ಇಂಥಹ ವಿಚಿತ್ರ ಆಸೆಯನ್ನು ಹೈಸ್ಕೂಲ್‌ನಿಂದಲೇ ಈ ವಿಚಿತ್ರ ಆಸೆಯನ್ನು ಹೊಂದಿದ್ದಳಂತೆ ಡೌಗ್ಲಾಸ್. ಇದೀಗ ಆಕೆಯ ಆಸೆ ನೆರವೇರಿದೆ! ಆದರೆ ಪೊಲೀಸರು ಇದನ್ನು ಗಂಭೀರವಾಗಿಯೇ ಪರಿಗಣಿಸಿದ್ದಾರೆ. ವೇಗವಾಗಿ ವಾಹನ ಚಾಲನೆ ಹಾಗೂ ತಪ್ಪಿಸಿಕೊಳ್ಳಲು ಪ್ರಯತ್ನಪಟ್ಟ ಆರೋಪಗಳನ್ನು ಆಕೆಯ ಮೇಲೆ ಹೊರಿಸಲಾಗಿದೆ.

ಪ್ರಸ್ತುತ ಈ ಪ್ರಕರಣ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿದೆ. ಯುವತಿಯ ವಿಚಿತ್ರ ಬಯಕೆಯನ್ನು ನೋಡಿ ನೆಟ್ಟಿಗರು ಕಂಗಾಲಾಗಿದ್ದಾರೆ. ಪ್ರಸ್ತುತ 19 ವರ್ಷದ ಡೌಗ್ಲಾಸ್‌ರನ್ನು ಜೈಲಿನಲ್ಲಿಡಲಾಗಿದೆ.

You may also like

Leave a Comment