Home » ಬಾಲಕನನ್ನು ಕೊಲೆ ಮಾಡಿದ “ಹಸು” ವನ್ನು ಜೈಲಿಗಟ್ಟಿದ ಪೊಲೀಸರು

ಬಾಲಕನನ್ನು ಕೊಲೆ ಮಾಡಿದ “ಹಸು” ವನ್ನು ಜೈಲಿಗಟ್ಟಿದ ಪೊಲೀಸರು

0 comments

ಮೊದಲೆಲ್ಲಾ ಮನುಷ್ಯ ಯಾರಿಗಾದರೂ ತೊಂದರೆ ಮಾಡಿದರೆ, ಸಾಯಿಸಿದರೇ ಆತನನ್ನೇ ಜೈಲಿಗಟ್ಟುತ್ತಿದ್ದರು. ಆದರೆ ಈಗ ಪ್ರಾಣಿಗಳಿಂದ ವ್ಯಕ್ತಿ ಸತ್ತ ಎಂದು ಗೊತ್ತಾದರೆ, ಪ್ರಾಣಿಗಳಿಗೂ ಜೈಲು ಶಿಕ್ಷೆ ಖಂಡಿತ. ಈಗ ಬಾಲಕನೋರ್ವನನ್ನು ಹತ್ಯೆ ಮಾಡಿದ ಆರೋಪದಲ್ಲಿ ಹಸುವನ್ನು ಬಂಧಿಸಲಾಗಿದೆ.

ಹೌದು, 12 ವರ್ಷದ ಬಾಲಕನನ್ನು ಹತ್ಯೆ ಮಾಡಿದ ಆರೋಪದಲ್ಲಿ ಹಸು ಮತ್ತು ಅದರ ಮಾಲೀಕರನ್ನು ಬಂಧಿಸಿದ ವಿಚಿತ್ರ ಘಟನೆ ದಕ್ಷಿಣ ಸುಡಾನ್ ನಲ್ಲಿ ನಡೆದಿದೆ.

ಈ ಘಟನೆ ಕಳೆದ ವಾರ ನಡೆದಿದ್ದು, ಉಳುಮೆ ಮಾಡುತ್ತಿದ್ದ ಸಂದರ್ಭದಲ್ಲಿ, ಪಕ್ಕದಲ್ಲೇ ಹಾದು ಹೋಗುತ್ತಿದ್ದ ಬಾಲಕನ ಮೇಲೆ ಏಕಾಏಕಿ ದಾಳಿ ಮಾಡಿ ಕೊಂದು ಹಾಕಿದೆ.

ಹಸುವನ್ನು ರುಂಬೆಕ್ ಸೆಂಟ್ರಲ್ ಕೌಂಟಿಯ ಪೊಲೀಸ್‌ ಠಾಣೆಯಲ್ಲಿ ಬಂಧಿಯಾಗಿಡಲಾಗಿದೆಯಂತೆ. ಬಾಲಕನನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು ನಂತರ ಅಂತ್ಯಕ್ರಿಯೆಗಾಗಿ ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದಾರೆ.

ಸುಡಾನ್ ನಲ್ಲಿ ಒಂದು ತಿಂಗಳ ಹಿಂದೆ ಕೂಡಾ 45 ವರ್ಷದ ಮಹಿಳೆಯನ್ನು ಕೊಂದ ಆರೋಪದಲ್ಲಿ ಟಗರೊಂದನ್ನು ಬಂಧಿಸಿ ಶಿಕ್ಷೆ ವಿಧಿಸಲಾಗಿತ್ತು. ಟಗರನ್ನು ಮಿಲಿಟರಿ ಶಿಬಿರದಲ್ಲಿ ಕಠಿಣ ಕಾರ್ಮಿಕರ ಶಿಕ್ಷೆಗೆ ಒಳಪಡಿಸಲಾಗಿದ್ದು, ಅಲ್ಲಿ ಅದನ್ನು ಮೂರು ವರ್ಷಗಳ ಕಾಲ ಜೈಲು ಶಿಕ್ಷೆಗೊಳಪಟ್ಟಿದೆ. ಶಿಕ್ಷೆ ಮುಗಿದ ನಂತರ, ದೇಶದ ಕಾನೂನು ಮತ್ತು ಸಂಪ್ರದಾಯಗಳಿಗೆ ಅನುಗುಣವಾಗಿ ಅದರ ಮಾಲೀಕರಿಗೆ ಹಸ್ತಾಂತರಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದರು.

You may also like

Leave a Comment