Home » ಭಾರತೀಯ ವೈದ್ಯನ ಪ್ರಾಣಿ ಪ್ರೇಮ | ಈ ಕಾರಣದಿಂದ ಉಕ್ರೇನ್ ಬಿಟ್ಟು ಬರಲು ಒಪ್ಪದ ಯುವಕ

ಭಾರತೀಯ ವೈದ್ಯನ ಪ್ರಾಣಿ ಪ್ರೇಮ | ಈ ಕಾರಣದಿಂದ ಉಕ್ರೇನ್ ಬಿಟ್ಟು ಬರಲು ಒಪ್ಪದ ಯುವಕ

0 comments

ರಷ್ಯಾ – ಉಕ್ರೇನ್ ನಡುವಿನ ಯುದ್ಧದಿಂದಾಗಿ ಉಕ್ರೇನ್ ನಲ್ಲಿ ಸಿಲುಕಿಕೊಂಡಿರುವ ಬಹುತೇಕ ಭಾರತೀಯರು ಸುರಕ್ಷಿತವಾಗಿ ತವರಿಗೆ ಮರಳಿದ್ದಾರೆ. ಕೆಲವರು ತಮ್ಮ ಸಾಕು ಪ್ರಾಣಿಗಳನ್ನು ಕೂಡಾ ಹೊತ್ತು ತಂದಿದ್ದಾರೆ.

ಭಾರತೀಯ ಮೂಲದ ವೈದ್ಯನೊಬ್ಬ ತಾನು ಸಾಕಿದ ಪ್ರೀತಿಯ ಪ್ರಾಣಿಗಳನ್ನು ಬಿಟ್ಟು ಸ್ವದೇಶಕ್ಕೆ ಮರಳಲು ಸಿದ್ಧನಿಲ್ಲ. ಈತ ಸಾಕಿರೋದು ಕರಿ ಚಿರತೆ ಹಾಗೂ ಜಾಗ್ವಾರ್.

ಗಿರಿಕುಮಾರ್ ಪಾಟೀಲ್ ಎಂಬ ವೈದ್ಯ 20 ತಿಂಗಳುಗಳ ಹಿಂದೆ ಕೀವ್ ನ ಮೃಗಾಲಯದಿಂದ ಈ ಚಿರತೆಗಳನ್ನು ತಂದಿದ್ದ. ಕರಿಚಿರತೆಗೆ ಈಗ 6 ತಿಂಗಳು. ಜಾಗ್ವಾರ್ ಗೆ 20 ತಿಂಗಳ ಪ್ರಾಯ. ಈ ವೈದ್ಯ 6 ವರ್ಷಗಳಿಂದ ಉಕ್ರೇನ್ ನಲ್ಲಿ ನೆಲೆಸಿದ್ದಾರಂತೆ. ಸರಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ ಮಾಡುತ್ತಿದ್ದಾನೆ. ಈಗ ಈ ಆಸ್ಪತ್ರೆಯನ್ನು ಯುದ್ಧ ಪ್ರಾರಂಭದ ಬಳಿಕ ಬಂದ್ ಮಾಡಲಾಗಿದೆ.

ಈ ಚಿರತೆಗಳನ್ನು 35,000 ಡಾಲರ್ ಕೊಟ್ಟು ಖರೀದಿ ಮಾಡಿದ್ದಾರೆ. ಇವುಗಳ ಜೊತೆಗೆ 3 ನಾಯಿಗಳಿಗೆ ಸಾಕಿದ್ದಾನೆ.

ಈ ಯುದ್ಧದ ಬಾಂಬ್ ಗಳ ಸ್ಫೋಟದ ಕಾರಣದಿಂದಾಗಿ ಚಿರತೆಗಳು ಭಯದಿಂದ‌ ಕಂಗೆಟ್ಟು ಹೋಗಿದೆಯಂತೆ. ಸರಿಯಾಗಿ ಆಹಾರ ಕೂಡಾ ತಿನ್ನುತ್ತಿಲ್ಲವಂತೆ.

You may also like

Leave a Comment