Jessy jane: ಖ್ಯಾತ ನೀಲಿ ಚಿತ್ರಗಳ ತಾರೆ ಅಮೆರಿಕಾದ ಜೆಸ್ಸಿ ಜೇನ್(Jessy jane) ಮತ್ತು ಆಕೆಯ ಬಾಯ್ ಫ್ರೆಂಡ್, ನಟ ಬ್ರೆಟ್ ಹ್ಯಾಸೆನ್ಮುಲ್ಲರ್ ಶವವಾಗಿ ಪತ್ತೆಯಾಗಿದ್ದಾರೆ.
ಹೌದು, 43ರ ವಯಸ್ಸಿನ ಈ ನೀಲಿ ಚಿತ್ರಗಳ ತಾರೆ, ಬಾಯ್ ಫ್ರೆಂಡ್ ಮನೆಯಲ್ಲೇ ಒಟ್ಟಾಗಿ ವಾಸಿಸುತ್ತಿದ್ದರು. ಇಬ್ಬರೂ ಮಿತಿ ಮೀರಿದ ಮಾದಕವಸ್ತು ಸೇವನೆ ಮಾಡುತ್ತಿದ್ದರು. ಹೀಗಾಗಿ ವಯಸ್ಕ ಚಿತ್ರಗಳ ಅಮೆರಿಕಾದ 43ರ ಜೆಸ್ಸಿ ಜೇನ್ ಮತ್ತು ಆಕೆಯ ಬಾಯ್ ಫ್ರೆಂಡ್, ನಟ ಬ್ರೆಟ್ ಹ್ಯಾಸೆನ್ಮುಲ್ಲರ್ ಇಬ್ಬರೂ ಸಾವೀಗೀಡಾಗಿದ್ದಾರೆ.
ಅಂದಹಾಗೆ ಜೇನ್ ಮತ್ತು ಅವರ ಬಾಯ್ ಫ್ರೆಂಡ್ ಶವಗಳನ್ನು ಒಟ್ಟಿಗೆ ಸಿಕ್ಕಿರುವುದರಿಂದ ಒಕ್ಲಹೋಮಾದ ಮೂರ್ ನಲ್ಲಿರುವ ಮೂರ್ ಪೊಲೀಸ್ ಇಲಾಖೆಯು ತನಿಖೆಯನ್ನು ಕೈಗೆತ್ತಿಕೊಂಡಿದೆ. ಈ ಇಬ್ಬರ ಸಾವು ಅವರ ಅಭಿಮಾನಿಗಳಿಗೆ ಶಾಕ್ ನೀಡಿದೆ.
ಇನ್ನು ಜೆಸ್ಸಿ ಜೇನ್ ಜುಲೈ 16, 1980 ರಂದು ಟೆಕ್ಸಾಸ್‌ನ ಫೋರ್ಟ್ ವರ್ತ್‌ನಲ್ಲಿ ಸಿಂಥಿಯಾ ಆನ್ ಹೋವೆಲ್ ಎಂಬ ಹೆಸರು ಪಡೆದುಕೊಂಡು ಜನಿಸಿದರು. ಈಕೆಯ ಪೋಷಕರು ಟಿಂಕರಏರ್ ಫೋರ್ಸ್ ಬೇಸ್‌ನಲ್ಲಿ ಕೆಲಸ ಮಾಡುತ್ತಿದ್ದರು.
2003ರಲ್ಲಿ ನೀಲಿ ಚಿತ್ರದ ಮೂಲಕ ಈ ಉದ್ಯಮಕ್ಕೆ ಕಾಲಿಟ್ಟ ಜಸ್ಸಿ ಜೇನ್ಸ್ ದುಬಾರಿ ವೆಚ್ಚದ ಚಿತ್ರಗಳಲ್ಲೂ ನಟಿಸಿದ್ದಾರೆ. ಹವಾಯಿಯನ್ ವೆಡ್ಡಿಂಗ್ ಸಿನಿಮಾ ಸೇರಿದಂತೆ ಸಾಕಷ್ಟು ಚಿತ್ರಗಳು ಇವೆ.
