133 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವಿಮಾನವೊಂದು ನೆರೆ ರಾಷ್ಟ್ರ ಚೀನಾದಲ್ಲಿ ಪತನಗೊಂಡಿದೆ.
ಚೀನಾ ಈಸ್ಟರ್ನ್ ಏರ್‌ಲೈನ್ಸ್‌ಗೆ ಸೇರಿದ ಬೋಯಿಂಗ್ 737 ವಿಮಾನವು ದಕ್ಷಿಣ ಚೀನಾದ ಗುವಾಂಗ್ಸಿಯ ವುಝೌ, ಟೆಂಗ್ ಪ್ರದೇಶದ ಬೆಟ್ಟದಲ್ಲಿ ಪತನಗೊಂಡಿದೆ ಎಂದು ಚೀನಾದ ಮಾಧ್ಯಮಗಳು ವರದಿ ಮಾಡಿವೆ.
A China Eastern Airlines Boeing 737-800 operating flight MU5735 has reportedly crashed near Wuzhou in southern China. Initial reports say 133 onboard.https://t.co/iipgQYGkhK
ವಿಮಾನ ನೆಲಕ್ಕೆ ಬಿದ್ದ ಬಳಿಕ ಬೆಂಕಿ ಹೊತ್ತಿಕೊಂಡಿದ್ದು, ಅಪಘಾತಕ್ಕೆ ಕಾರಣ ತಿಳಿದು ಬಂದಿಲ್ಲ. ಈ ಅಪಘಾತದ ಬಳಿಕ ದಟ್ಟವಾಗಿ ಹೊಗೆ ಕಾಣಿಸಿಕೊಂಡಿರುವ ವೀಡಿಯೋವೊಂದು ಇದೀಗ ವೈರಲ್ ಆಗಿದೆ. ಆದರೆ ಸಾವು ನೋವಿನ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಘಟನಾ ಸ್ಥಳಕ್ಕೆ ರಕ್ಷಣಾ ತಂಡಗಳನ್ನು ರವಾನಿಸಲಾಗಿದೆ ಎಂದು ವರದಿ ತಿಳಿಸಿದೆ.
ಚೀನಾ ಈಸ್ಟರ್ನ್ ಫೈಟ್ MU5735 ಸೋಮವಾರ ಮಧ್ಯಾಹ್ನ 1 ಗಂಟೆಗೆ ಕುನ್ನಿಂಗ್ ನಗರದಿಂದ ಟೇಕ್ ಆಫ್ ಆದ ನಂತರ ಗುವಾಂಗ್‌ನಲ್ಲಿ ಇಳಿಯಬೇಕಾಗಿತ್ತು ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ ವಿಮಾನದಲ್ಲಿದ್ದ ಬಹುತೇಕ ಎಲ್ಲರೂ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.