Home » ಅಮೆರಿಕದ ಶಾಪಿಂಗ್ ಮಾಲ್‌ನಲ್ಲಿ ಗುಂಡಿನ ಚಕಮಕಿ : ಓರ್ವ ಯುವಕ ಬಲಿ

ಅಮೆರಿಕದ ಶಾಪಿಂಗ್ ಮಾಲ್‌ನಲ್ಲಿ ಗುಂಡಿನ ಚಕಮಕಿ : ಓರ್ವ ಯುವಕ ಬಲಿ

0 comments

ಅಮೆರಿಕದ ಮಿನ್ನೇಸೋಟದ ಶಾಪಿಂಗ್ ಮಾಲಿನಲ್ಲಿ ಗುಂಡಿನ ದಾಳಿ ನಡೆದಿದೆ. ಘಟನೆಯಲ್ಲಿ 19 ವರ್ಷದ ಯುವಕ ಸಾವನ್ನಪ್ಪಿದ ಬಗ್ಗೆ ವರದಿಯಾಗಿದೆ. ಇದು ರಾಷ್ಟ್ರದ ಅತಿದೊಡ್ಡ ಶಾಪಿಂಗ್ ಕೇಂದ್ರದಲ್ಲಿ ಗ್ರಾಹಕರಲ್ಲಿ ಭೀತಿಯನ್ನು ಸೃಷ್ಟಿಸಿತು.

ಬ್ಲೂಮಿಂಗ್ಟನ್ ಪೊಲೀಸ್ ಮುಖ್ಯಸ್ಥ ಬೂಕರ್ ಹೊಡ್ಜಸ್ ಪ್ರಕಾರ, ನಾರ್ಡ್‌ಸ್ಟ್ರಾಮ್‌ನ ಮೊದಲ ಮಹಡಿಯಲ್ಲಿ ಎರಡು ಗುಂಪುಗಳ ನಡುವೆ ಜಗಳ ನಡೆಯುತ್ತಿತ್ತು. ಈ ವೇಳೆ ಏಕಾೇಕಿ ಗುಂಡಿನ ದಾಳಿ ಆರಂಭವಾಯಿತು. ದಾಳಿಯಲ್ಲಿ ಗುಂಡು ತಗುಲಿ ಓರ್ವ ಯುವಕ ಸಾವನ್ನಪ್ಪಿದ್ದಾನೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.

ಘಟನೆ ಸಂಬಂಧ ಮಾಲ್ ಅನ್ನು ಮುಚ್ಚಲಾಗಿದೆ. ಮಾಲ್ ಶನಿವಾರ ಮತ್ತೆ ತೆರೆಯುವ ನಿರೀಕ್ಷೆಯಿದೆ. ಈ ಮಾಲ್ 1992 ರಲ್ಲಿ ಆರಂಭವಾಗಿದ್ದು, ಆವರಣದಲ್ಲಿ ಬಂದೂಕುಗಳನ್ನು ನಿಷೇಧಿಸುತ್ತದೆ. ಆದರೆ ಹೇಗೆ ಜನರು ಗನ್ ಮಾಲ್ ಒಳಗೆ ಗನ್ ತಂದಿದ್ದರು ಎಂಬುರ ಬಗ್ಗೆ ತನಿಖೆ ಮಾಡುತ್ತಿದೆ ಎನ್ನಲಾಗುತ್ತಿದೆ.

You may also like

Leave a Comment